December 22, 2024

Newsnap Kannada

The World at your finger tips!

DK suresh

ಪ್ರತ್ಯೇಕ ದಕ್ಷಿಣ ಭಾರತ ರಾಷ್ಟ್ರ ರಚನೆಗೆ ಸಂಸದ ಡಿಕೆ ಸುರೇಶ್ ಕೂಗು

Spread the love

ನವದೆಹಲಿ : ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ಹೀಗೆ ಅನ್ಯಾಯ ಆದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್‌ ಅಸಮಾಧಾನ ಹೊರ ಹಾಕಿದರು.

ದೆಹಲಿಯಲ್ಲಿ ಕೇಂದ್ರದ ಮಧ್ಯಂತರ ಬಜೆಟ್‌ ಕುರಿತು ಪ್ರತಿಕ್ರಿಯಿಸಿದ ಅವರು, ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇಂದು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ ಎಂದು ಮೂದಲಿಸಿದರು.

ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಹಂಚುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ದಕ್ಷಿಣ ಭಾರತದ ಪ್ರತ್ಯೇಕ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಸಂಸದರು ಎಚ್ಚರಿಸಿದರು.

ಹೊಸ ಪದಗಳನ್ನು ಬಳಸಿ, ಹೊಸ ಹೆಸರಿಟ್ಟು ಒಂದಷ್ಟು ಯೋಜನೆ ಘೋಷಿಸಿದ್ದಾರೆ. ನಮಗೆ ಬರಬೇಕಾದ ಹಣವೇ ಸರಿಯಾಗಿ ಬರುತ್ತಿಲ್ಲ. ಇನ್ನೂ 75,000 ಕೋಟಿ ಬಡ್ಡಿ ರಹಿತ ಸಾಲ ಕೊಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಪಿರಿಯಪಟ್ಟಣದಲ್ಲಿ ದುರಂತ- ಕೆರೆಗೆ ಬಿದ್ದು ಯುವಕ ಸಾವು

ಈ  ಬಜೆಟ್‌ ನಲ್ಲಿ ನಾಮಫಲಕ ಮಾತ್ರ ಬದಲಾಯಿಸಲಾಗಿದೆ. ಬೇರೆ ಬೇರೆ ದೇಸಿ ಹೆಸರುಗಳನ್ನ ಇಡಲಾಗಿದೆ. ಎಕನಾಮಿಕ್ ಸರ್ವೆ ಅವರು ಇಟ್ಟಿದ್ದಿದ್ರೆ ಇವರ ಪರಿಸ್ಥಿತಿ ಏನಾಗುತ್ತಿತ್ತು?. ಯಾವ ರೀತಿ ದೇಶ ಕಳೆದ ಸಾಲಿನಲ್ಲಿ ಸಾಧನೆಯನ್ನು ಸಾಧಿಸಿದೆ ಅನ್ನುವ ಅನುಮಾನಗಳು ಪ್ರಾರಂಭವಾಗಿದೆ. ಚುನಾವಣೆಗೆ ಸಂಬಂಧಪಟ್ಟಂತೆ ಒಂದಷ್ಟು ಘೋಷಣೆಗಳು, ಒಂದಷ್ಟು ಹೇಳಿಕೆಗಳನ್ನು ಕೂಡಿರುವ ಬಜೆಟ್‌ ಇದಾಗಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!