ಮೈಸೂರು: ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ಕೊನೇ ಕ್ಷಣದಲ್ಲಿ ರದ್ದು ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಅನುಮತಿ ರದ್ದು ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಮೈಸೂರು ಉಪಪೊಲೀಸ್ ಆಯುಕ್ತ ಮುತ್ತುರಾಜು ಅವರು ಎಸ್.ಕೆ ದಿನೇಶ್ ಎನ್ನುವವರಿಗೆ ಪತ್ರ ಬರೆದಿದ್ದಾರೆ.
22-01-2024 ರಂದು ಸಂಜೆ 06.00 ಗಂಟೆಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಪ್ರಯುಕ್ತ ನೀವು ಕನ್ಯಕಾಪರಮೇಶ್ವರಿ ದೇವಸ್ಥಾನದ ಮುಂಭಾಗ ಪೂಜಾ ಕಾರ್ಯಕ್ರಮ ಹಾಗೂ ಭಜನ ಹಾಗೂ ಮುಖ್ಯ ಅಂಚೆ ಕಛೇರಿಯಿಂದ ದೊಡ್ಡಗಡಿಯಾರದವರೆಗೂ ಶ್ರೀರಾಮ ಜ್ಯೋತಿ (ದೀಪವನ್ನು) ಹಚ್ಚಲು ಈ ಕಛೇರಿಯಿಂದ ಈಗಾಗಲೇ ನಿಮಗೆ ಅನುಮತಿ ನೀಡಿರುವುದು ಸರಿಯಷ್ಟೆ.
ಈ ಕಾರ್ಯಕ್ರಮ ನಡೆಸುವ ಸ್ಥಳವು ಹೆಚ್ಚು ಜನಸಂದಣಿ ಸ್ಥಳವಾಗಿದೆ ಹಾಗೂ ಹೆಚ್ಚು ವಾಹನ ಸಂಚಾರ ಇರುತ್ತದೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬ ಗುಪ್ತಚಾರ ಇಲಾಖೆ ಮಾಹಿತಿಯ ಹಿನ್ನಲೆಯಲ್ಲಿ ಪೊಲೀಸ್ ಇಲಾಖಾ ಅನುಮತಿಯಲ್ಲಿ ವಿಧಿಸಿರುವ ಷರತ್ತಿನ ಕ್ರಮ ಸಂಖ್ಯೆ 04 ರೀತ್ಯಾ ಅನುಮತಿಯನ್ನು ರದ್ದುಪಡಿಸಲಾಗಿದೆ.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ನಿಮ್ಮ ದೇವಸ್ಥಾನದ ಪ್ರಾಂಗಣದಲ್ಲಿ ದೀಪ ಹಚ್ಚಿ ಪೂಜಾ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ ಅಂತ ತಿಳಿಸಿದ್ದಾರೆ.
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.