ಮದ್ದೂರು : ವೈದ್ಯರ ಮನೆ ಬಾಗಿಲು ಮುರಿದು 3 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿರುವ ಘಟನೆ ಮದ್ದೂರು ಪಟ್ಟಣದಲ್ಲಿ ಗುರುವಾರ ನಡೆದಿದೆ.
ಕೆ ಎಚ್ ನಗರದಲ್ಲಿ ವಾಸವಿದ್ದ ತೈಲೂರು ಗ್ರಾಮದ ಡಾ.ಟಿ.ಚಂದ್ರ ರ ಮನೆಯಲ್ಲಿ ರಾತ್ರಿ ಕಳ್ಳರು ಕೈ ಚಳಕ ತೋರಿಸಿ ಚಿನ್ನಾಭರಣದ ಜೊತೆಗೆ ಎಂಟು ಲಕ್ಷ ನಗದು ದೋಚಿದ್ದಾರೆ.
ಕದ್ದ ಮಾಲುಗಳ ಮೌಲ್ಯ ಅಂದಾಜು 40 ರಿಂದ 45 ಲಕ್ಷ ರು ,ಮನೆಯಲ್ಲಿ ಯಾರು ಇಲ್ಲದಿದ್ದಾಗ ಕಳ್ಳರು ಹೊಂಚು ಹಾಕಿ ಕಳವು ಮಾಡಿ ಸಿಸಿಟಿವಿ ಕ್ಯಾಮರಾದ ಪೋಟೋಜ್ ಜೊತೆ ಪರಾರಿಯಾಗಿದ್ದಾರೆ.
ತೈಲೂರು ಗ್ರಾಮದ ಖಾಸಗಿ ವೈದ್ಯ ಡಾ.ಟಿ ಚಂದ್ರ ಕೆ ಎಸ್ ನಗರದಲ್ಲಿನ ತಮ್ಮ ನಿವಾಸಕ್ಕೆ ಬೀಗ ಹಾಕಿ ತೆರಳಿದ್ದರು, ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಬುಧವಾರ ರಾತ್ರಿ ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದ್ದು, ಮನೆಯಲ್ಲಿದ್ದ14 ಚಿನ್ನದ ಬಳೆ, 4 ಜೊತೆ ಡೈಮಂಡ್ ಓಲೆ, 02 ಕರಿಮಣಿ ಸರ , ಒಂದು ಚಿನ್ನದ ತುಳಸಿ ಹಾರ, 5 ಚಿನ್ನದ ಸರ ಮತ್ತು 3 ವೈಟ್ ಪೆಡೆಂಟ್ ,3 ಚಿನ್ನದ ಪೆಡೆಂಟ್ . ಎರಡು ಎಳೆ ಚಿನ್ನದ ಸರ , ಒಂದು ಚಿನ್ನದ ಸರ ಸೇರಿದಂತೆ ತೈಲೂರಮ್ಮ ದೇವಸ್ಥಾನಕ್ಕೆ ಸೇರಿದ್ದ 8 ಲಕ್ಷ ನಗದು ಹಣ, ಚಿನ್ನದ ಬಿಳಿಕಲ್ಲಿನ ಗುಂಡಿನ ಸರ ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಗುರುವಾರ ಅಕ್ಕ ಪಕ್ಕದ ನಿವಾಸಿಗಳು ಬಾಗಿಲು ಮುರಿದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ 8 ಲಕ್ಷ ನಗದು ಸೇರಿ ಸುಮಾರು 40 ರಿಂದ 45 ಲಕ್ಷ ಮೌಲ್ಯದ ಆಭರಣಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.‘ಡ್ರೋನ್ ಪ್ರತಾಪ್’ ಗೆ 2.50ಕೋಟಿ ರೂ. ಮಾನನಷ್ಟ ಮೊಕದ್ದಮ್ಮೆ ಹೂಡಿದ BBMP ಅಧಿಕಾರಿ
ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.