January 13, 2025

Newsnap Kannada

The World at your finger tips!

police 1

ವರ್ಷಾಚರಣೆ ಮುಗಿಸಿ ಬೈಕ್ ನಲ್ಲಿ ಬಂದ ಯುವಕರಿಗೆ ವಾಹನ ಡಿಕ್ಕಿ – ಯುವಕ ಸಾವು – ಮತ್ತಿಬ್ಬರಿಗೆ ಗಾಯ

Spread the love

ಪಿರಿಯಾಪಟ್ಟಣ : ಹೊಸ ವರ್ಷಾಚರಣೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಯುವಕರ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತಿಬ್ಬರು ಗಾಯಗೊಂಡಿದ್ದಾರೆ.

ಈ ಘಟನೆ ಪಟ್ಟಣದ ಆರ್‌ಎಂಸಿ ಬಡಾವಣೆಯಲ್ಲಿ ಜರುಗಿದೆ. ಕಲಿರಾಜ್ (18) ಅಪಘಾತದಲ್ಲಿ ಮೃತಪಟ್ಟ ಯುವಕ.

ಭಾನುವಾರ ರಾತ್ರಿ ಸಮೀಪದ ಮಾಗಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಹೊಸ ವರ್ಷ ಆಚರಣೆಯ ಪಾರ್ಟಿ ಮುಗಿಸಿಕೊಂಡು ಬೈಕ್ ನಲ್ಲಿ ಪಿರಿಯಾಪಟ್ಟಣಕ್ಕೆ ಬರುತ್ತಿದ್ದಾಗ ಸಿದ್ದಾಪುರ ಕಡೆಗೆ ಹೋಗುತ್ತಿದ್ದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಕಲಿರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆತನೊಂದಿಗಿದ್ದ ಪೃಥ್ವಿರಾಜ್ ಮತ್ತು ಕಿರಣ್ ಎಂಬುವರು ಸಹ ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಡೇವಿಡ್‌ ವಾರ್ನರ್‌ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಣೆ

ಮೃತ ಯುವಕನ ಪೋಷಕರು ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣದ ಬಗ್ಗೆ ತನಿಖೆ ನಡೆಸಿ ವಾಹನಪತ್ತೆಗೆ ಮುಂದಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!