ಪಿರಿಯಾಪಟ್ಟಣ :
ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾವಂದೂರು ಸಮೀಪದ ನಂದೀಪುರ ಗ್ರಾಮದಲ್ಲಿ ಜರುಗಿದೆ.
ನಂದಿಪುರ ಗ್ರಾಮದ ಹಾಲಯ್ಯನ ಎರಡನೇ ಮಗಳು ರೂಪ (26) ಆತ್ಮಹತ್ಯೆಗೆ ಶರಣಾಗಿದ್ದಾಳೆ, ಈ ಸಂಬಂಧ ಬೆಟ್ಟದ ಪುರ ಠಾಣೆಯಲ್ಲಿ ಹಾಲಯ್ಯ ದೂರು ನೀಡಿದ್ದಾರೆ.
ನನಗೆ 4 ಮಕ್ಕಳಿದ್ದು ಎರಡನೇ ಮಗಳು ರೂಪಳಿಗೆ ಕೆಲ ತಿಂಗಳ ಹಿಂದೆ ದಿಲೀಪ ಬಿನ್ ಶಿವಯ್ಯ ಕೊಣಸೂರು ನಿವಾಸಿ ಇಬ್ಬರಿಗೂ ನಿಶ್ಚಿತಾರ್ಥ ನಡೆದಿತ್ತು. ರೂಪಾಳು ಎಂ.ಎ, ಬಿ.ಎಡ್ ವಿದ್ಯಾಭ್ಯಾಸ ಮಾಡಿದ್ದು, ರಾವಂದೂರು ಗ್ರಾಮದ ಕೆ,ಪಿ,ಎಸ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.
ನಮ್ಮ ಪಕ್ಕದಮನೆಯವನೇ ಆದ ಕಾರ್ತಿಕ್ ಎಂ.ಕೆ ಎಂಬುವವನು ರೂಪಾಳನ್ನು ಪ್ರೀತಿಸುವಂತೆ ಆಗಾಗ್ಗ ಪೀಡಿಸುತಿದ್ದನು.
ಡಿ.24 ಮದ್ಯಾಹ್ನ 1:30 ರ ಸಮಯದಲ್ಲಿ ನಾನು ಮತ್ತು ನನ್ನ ಮೊದಲನೇ ಮಗಳು ರೇಖಾಳ ಕೂಡಿ ಆಡು ಮೇಯಿಸಲೆಂದು ಜಮೀನಿಗೆ ತೆರಳಿದುವು, ಎಂದಿನಂತೆ ಲವಲವಿಕೆ ಯಿಂದ ಇದ್ದ ರೂಪ ಸಂಜೆ 4 ಗಂಟೆಯ ಸಮಯದಲ್ಲಿ ಅಡುಗೆ ಮನೆ ಹಿಂಭಾಗ ಒಪ್ಪರಾದ ಮರದ ತೊಲೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು