November 1, 2024

Newsnap Kannada

The World at your finger tips!

security breach

ರಾಜಸ್ಥಾನದಲ್ಲಿ 5ನೇ ಆರೋಪಿ ಲಲಿತ್ ಝಾ ಪತ್ತೆ

Spread the love

ನವದೆಹಲಿ : ಸಂಸತ್ ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ 5ನೇ ಆರೋಪಿ ಲಲಿತ್ ಝಾ ರಾಜಸ್ಥಾನದಲ್ಲಿ ಪಟ್ಟೆಯಾಗಿದ್ದಾನೆಂದು ತಿಳಿದುಬಂದಿದೆ .

ಪ್ರಸ್ತುತ ತಲೆಮರೆಸಿಕೊಂಡಿದ್ದ ಲಲಿತ್ ಝಾ , ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ 5ನೇ ಆರೋಪಿ ರಾಜಸ್ಥಾನದ ನೀಮ್ರಾನಾದಲ್ಲಿ ಪತ್ತೆಯಾಗಿದ್ದಾನೆ .

ಕರ್ನಾಟಕ ಮೂಲದ ಆರೋಪಿ ಸೇರಿದಂತೆ ಪ್ರಕರಣದಲ್ಲಿ ಇದುವರೆಗೆ 5 ಆರೋಪಿಗಳನ್ನು ಬಂಧಿಸಲಾಗಿತ್ತು .

ಆರೋಪಿ ಮನೋರಂಜನ್ ಮತ್ತು ಸಾಗರ್ ಶರ್ಮಾ ಪ್ರಕರಣದ ನೇತೃತ್ವ ವಹಿಸಿದ್ದಾರೆ.

ಘಟನೆಯಲ್ಲಿ ಲಲಿತ್ ಝಾ ಮತ್ತು ಇತರರು ಭಾಗಿಯಾಗಿರುವರಿಗೆ ಪಾಸ್ ವ್ಯವಸ್ಥೆ ಮಾಡಿದ್ದಾರೆ .ಲೋಕಸಭಾ ಪಾಸ್‌ಗಾಗಿ 3 ತಿಂಗಳಿಂದ ಪ್ರತಾಪ ಸಿಂಹನ ಹಿಂದೆ ಬಿದ್ದಿದ್ದ ಮನೋರಂಜನ್

ಪೊಲೀಸ್ ಮೂಲಗಳು ಎಲ್ಲಾ ಆರೋಪಿಗಳು ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಎಂಬ ಸಾಮಾಜಿಕ ಮಾಧ್ಯಮ ಪೇಜ್ ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!