December 23, 2024

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ – 27 – ಬೆಂಗಳೂರು ಗ್ರಾಮಾಂತರ

Spread the love

ಕಲಾವತಿ ಪ್ರಕಾಶ್
ಬೆಂಗಳೂರು

ಈ ಜಿಲ್ಲೆ ತನ್ನ ಮಾತೃನಗರವಾದ ಬೆಂಗಳೂರಿನಿಂದ
ಪಡೆದ ಹೆಸರು ಬಹುಪಾಲು ಗ್ರಾಮಗಳಿಂದ ಕೂಡಿದೆ
ದೊಡ್ಡಬಳ್ಳಾಪುರ ಹೊಸಕೋಟೆ ನೆಲಮಂಗಲ ಮತ್ತು
ದೇವನಹಳ್ಳಿ ಈ ಜಿಲ್ಲೆಯ ನಾಲ್ಕು ತಾಲ್ಲೂಕುಗಳಾಗಿವೆ

ಗಂಗರು ರಾಷ್ಟ್ರಕೂಟರು ಹೊಯ್ಸಳರು ನೊಳಂಬರು
ಪಲ್ಲವ ಚೋಳರು ಮರಾಠರು ವಿಜಯನಗರದರಸರು
ಟಿಪ್ಪು ಸುಲ್ತಾನ್ ಹಾಗೂ ಮೈಸೂರು ಅರಸರು ಅಲ್ಲದೆ
ನಾಡ ಪ್ರಭು ಕೆಂಪೇಗೌಡರೂ ಸಹ ಆಳ್ವಿಕೆ ಮಾಡಿದರು

ಅರ್ಕಾವತಿ ದಕ್ಷಿಣ ಪಿನಾಕಿನಿ ಬಂಡಿಹಳ್ಳ ಕುಮುದ್ವತಿ
ನದಿಗಳು ಸರ್ ಎಂ ವಿಶ್ವೇಶ್ವರಯ್ಯ ಅಣೆಕಟ್ಟು ಮತ್ತು
ಹೊಸಕೋಟೆಯ ಅಮ್ಮನ ಕೆರೆ ಇಲ್ಲಿ ಜಲಮೂಲಗಳು
ಕಬ್ಬು ಭತ್ತ ಕಡ್ಲೆಕಾಯಿ ರಾಗಿ ರೇಷ್ಮೆ ದ್ರಾಕ್ಷಿ ಬೆಳೆಗಳು

ಕರ್ನಾಟಕದ ಸಂಪೂರ್ಣ ಸೌರಶಕ್ತಿ ಸ್ವಯಂ ಚಾಲಿತ
ಗ್ರೀನ್ ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ದೇವನ ಹಳ್ಳಿಯ ಚಕ್ಕೋತ ಹಣ್ಣಿಗೆ ಸುಪ್ರಸಿದ್ಧ ತಾಣ
ಕೋರಮಂಗಲದ ದೊಡ್ಡ ಬಯಲು ಬಂದೀಖಾನೆ ಇದೆ

ದೇವನಹಳ್ಳಿಯು ನಯನ ಮನೋಹರ ಹೂವಿನ
ಅಲಂಕಾರ ಮತ್ತು ಕರಗ ಮಹೋತ್ಸವಕ್ಕೆ ಪ್ರಸಿದ್ಧವಿದೆ
ದೊಡ್ಡ ಬಳ್ಳಾಪುರ ರೇಷ್ಮೆ ಕೈ ಮಗ್ಗಕೆ ಹೆಸರಾಗಿದೆ
ಹೊಸಕೋಟೆಯ ವೋಲ್ವಾ ಬಸ್ ಟ್ರಕ್ ಕೈಗಾರಿಕೆ ಇದೆ

ಶಿವಗಂಗೆ ಬೆಟ್ಟ ಅವಂತಿ ಬೆಟ್ಟ ಮಾಕಳಿದುರ್ಗ ಬೆಟ್ಟ ನೀರಿನ ಬುಗ್ಗೆಗಳು ದೇವಾಲುಗಳಿರುವ ನಿಜಗಲ್ ಬೆಟ್ಟ
ದೇವನಹಳ್ಳಿಯ ಕೋಟೆ ಪ್ರವಾಸಿ ತಾಣವೆಂ‌ದು ಪ್ರಸಿದ್ಧ
ಚಾರಣ ಪ್ರಿಯರಿಗೆಲ್ಲ ಖುಷಿ ಕೊಡೊ ಬೆಟ್ಟಗಳಿಲ್ಲಿವೆ

ಘಾಟಿ ಸುಬ್ರಹ್ಮಣ್ಯ ದೇಗುಲ ತಿಮ್ಮರಾಯ ದೇವಸ್ಥಾನ
ಸುಗ್ಗನಹಳ್ಳಿ ನರಸಿಂಹ ದೇವಾಲಯ ಬಲು ಪ್ರಾಚೀನ
ಶಿವಗಂಗೆ ಗಂಗಾಧರೇಶ್ವರ ಹೊನ್ನಾದೇವಿ ದೇವಾಲಯ
ಕರ್ನಾಟಕದ ದಕ್ಷಿಣ ಗಂಗೆಯು ಶಿವಗಂಗೆ ದೇವಾಲಯ

ಕ್ಷಿಪಣಿ ತಯಾರಿಸಿ ಯುದ್ಧದಲ್ಲಿ ಉಡಾವಣೆ ಮಾಡಿದ
ಮೊಟ್ಟ ಮೊದಲನೆಯವನೇ ಈ ಟಿಪ್ಪು ಸುಲ್ತಾನ
ಕೆ ಎಸ್ ನಿಸಾರ್ ಅಹಮ್ಮದ್ ಡಾ‌.ಕಮಲಾ ಹಂಪನಾ
ಎಲ್ ಎಸ್ ಶೇಷಗಿರಿರಾವ್ ಸಹ ದೇವನಹಳ್ಳಿಯವರು

Copyright © All rights reserved Newsnap | Newsever by AF themes.
error: Content is protected !!