October 18, 2024

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ – 25- ಕೊಡಗು

Spread the love

ಕಲಾವತಿ ಪ್ರಕಾಶ್
ಬೆಂಗಳೂರು

ಕುಡು ಅಂದರೆ ಗುಡ್ಡ ಅಥವಾ ಬೆಟ್ಟ ಪ್ರದೇಶ ಎಂಬ
ಕನ್ನಡ ಪದದಿಂದ ಕೊಡಗು ಬಂದಿತೆಂಬ ನಂಬಿಕೆ
ಕೊಡಗಿಗೆ ಕೂರ್ಗ್ ಎಂಬ ಇನ್ನೊಂದು ಹೆಸರಿದೆ
ಕೊಡಗು ಭಾರತದ ಸ್ವಿಟ್ಜರ್ಲ್ಯಾಂಡ್ ಎಂದೇ ಪ್ರಸಿದ್ಧ

ಕನ್ನಡ, ಕೊಡವ ತಕ್ಕ್,ಅರೆ ಭಾಷೆ ರಾವುತ್ ತಮಿಳು
ಮಲಯಾಳಂ ಭಾಷೆಗಳಿಲ್ಲಿ ಜನ ಮಾತನಾಡುವರು
ಇಕ್ಕೇರಿ ನಾಯಕರು ಹಾಗೂ ಹಾಲೇರಿ ವಂಶದವರು
ಮೈಸೂರಿನ ಹೈದರಾಲಿ ಬ್ರಿಟೀಷರು ಆಳ್ವಿಕೆ ಮಾಡಿದರು

ಕಾಫಿ ಮೆಣಸು ಏಲಕ್ಕಿ ಕಿತ್ತಳೆ ಭತ್ತ ತೆಂಗು ಗೇರು ಬೆಳೆ
ಜೇನು ಕೈಮಗ್ಗ ಕಾಫಿ ಸಂಸ್ಕರಣೆಯ ಉದ್ದಿಮೆಗಳು
ಕಾವೇರಿ ಹೇಮಾವ್ತಿ ಲಕ್ಷ್ಮಣತೀರ್ಥ ಸುಜೋತಿನದಿಗಳು
ಅಬ್ಬಿ ಚಲುವಾರ ಇರುಪು ಮಲ್ಲಲ್ಲಿ ಜಲಪಾತಗಳು

ಹಾರಂಗಿ ಅಣೆಕಟ್ಟು ಮತ್ತು ಚಿಕ್ಲಿ ಹೊಳೆ ಅಣೆಕಟ್ಟು
ನಿಶಾವಿ ಬೆಟ್ಟ ಬ್ರಹ್ಮಗಿರಿ ಬೆಟ್ಟ ಕುಂದ ಕೋಟೆ ಬೆಟ್ಟ
ಪಶ್ಚಿಮ ಘಟ್ಟದ ತಪ್ಪಲಿನ ದಟ್ಟವಾದ ಈ ಕಾಡನ್ನ
ನೋಡ ಬನ್ನಿ ಈ ಗಿರಿಧಾಮದ ಕೊಡಗಿನ ಸೊಬಗನ್ನ

ಬ್ರಹ್ಮಗಿರಿ ವನ್ಯಜೀವಿ ಧಾಮ ಮತ್ತು ತಲಕಾವೇರಿ
ಪುಷ್ಪಗಿರಿ ಅಭಯಾರಣ್ಯ ನಾಗರ ಹೊಳೆ ರಾಷ್ಟ್ರೀಯ
ಉದ್ಯಾನವನಗಳು ಕೊಡಗಿನ ವನ್ಯಜೀವಿ ಸಂಪತ್ತು
ರಾಜಾಸೀಟ್ ಉದ್ಯಾನ ದುಬಾರೆ ಅರಣ್ಯ ಗಮ್ಮತ್ತು

ಗದ್ದಿಗೆ ಅರಮನೆ ನಾಲ್ಕು ನಾಡು ಅರಮನೆಗಳಲ್ಲದೆ
ಏನ್ಸ್ ಚರ್ಚ್ ಬೈಲಕುಪ್ಪೆಯ ಸ್ವರ್ಣ ಮಂದಿರವಿಲ್ಲಿದೆ
ಓಂಕಾರೇಶ್ವರ ಹುಡಿಕೇರಿ ಮಹಾದೇವ ದೇವಾಲಯ
ಮುಲ್ಲೂರು ಬಸದಿ ಅಗಸ್ತೇಶ್ವರ ಇಗ್ಗುಟ್ಟಪ್ಪ ದೇವಸ್ಥಾನ

ಸಾಹಿತಿಗಳಾದ ಭಾರತೀಸುತ ಕೊಡಗಿನ ಗೌರಮ್ಮರು
ವಿಜ್ಞಾನ ಲೇಖಕ ಜಿ ಟಿ ನಾರಾಯಣರಾವ್ ರವರು
ಕೊಡವ ಭಾಷಾ ಕವಿ ಅಚ್ಚಪ್ಪ ಮತ್ತು ಕನ್ನಡದ ಮೊದಲ
ಕನ್ನಡದ ಕಾದಂಬರಿಕಾರ ಗುಲ್ವಾಡಿ ವೆಂಕಟರಾಯರು

ಕೊಡಗಿನ ಕಿತ್ತಳೆ ಕೊಡಗಿನ ಕಾಫಿ ಬಲು ಪ್ರಸಿದ್ದ
ಕಿಚ್ಚೆದೆಯ ಕೊಡವರೂ ಸಹ ಜಗತ್ ಪ್ರಸಿದ್ಧರು
ರಮಣೀಯ ತಂಪಾದ ಹವಾಮಾಕೆ ಈ ಜಿಲ್ಲೆಗೆ
ಭಾರತದ ಸ್ವಿಟ್ಜರ್ಲ್ಯಾಂಡ್ ಎಂಬ ಹೆಸರಿಹುದು

Copyright © All rights reserved Newsnap | Newsever by AF themes.
error: Content is protected !!