ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರದ ಮೂಲ ಹೆಸರು ಚಿನ್ನಬಳ್ಳಾಪುರಂ
ಚಿನ್ನ ಎಂದರೆ ಚಿಕ್ಕ, ಬಳ್ಳ ಧಾನ್ಯ ಅಳೆಯುವ ಸಾಧನ
ಕೃಷಿಕರು ಬೆಳೆದ ಧಾನ್ಯ ಅಳೆತೆಗೆ ಬಳಸಿದ ಸಣ್ಣ ಸಾಧನ
ಅದರ ಜೊತೆಗೆ ಪುರ ಸೇರಿ ಚಿಕ್ಕಬಳ್ಳಾಪುರವಾಯಿತು
ಗಂಗ ಕದಂಬರು ವಿಜಯನಗರದರಸರು ಮರಾಠರು
ರಾಷ್ಟ್ರಕೂಟರು ಟಿಪ್ಪು ಮೈಸೂರ ಅರಸರು ಆಳಿದರು
ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚು ಹೋರಾಟಗಾರರನ್ನು
ಕೊಟ್ಟ ಅಂದಿನ ದೇಶಭಕ್ತರಹಳ್ಳಿ ಇಂದಿನ ಭಕ್ತರಹಳ್ಳಿ
ಈ ಜಿಲ್ಲೆ ರಾಮಾಯಣ ಮಹಾಭಾರತದ ಘಟನೆಗಳಿಗೆ
ತಳುಕು ಹಾಕಿಕೊಂಡ ಪೌರಾಣಿಕ ಹಿನ್ನೆಲೆಯೂ ಇದೆ
ಮಹಾಭಾರತದ ಕಾಲದಲ್ಲಿ ಕೈವಾರವನ್ನು ಏಕಚಕ್ರಪುರ
ಎಂದಿದ್ದು ಪಾಂಡವರು ವನವಾಸದಲ್ಲಿ ಇಲ್ಲಿ ತಂಗಿದ್ದರು
ಮಹರ್ಷಿ ವಾಲ್ಮಿಕಿ ಹುಟ್ಟಿ ಬೆಳೆದದ್ದು ಇದೇ ಜಿಲ್ಲೆಯಲ್ಲಿ
ವ್ಯಾಸ ಮಹರ್ಷಿಗಳ ಮಗ ವಿದುರ ಅಶ್ವತ್ಥ ಮರವನ್ನು
ನೆಟ್ಟು ಬೆಳೆಸಿದ ಈ ಸ್ಥಳವೇ ಇಂದಿನ ವಿದುರಾಶ್ವತ್ಥ
ಸಹದೇವ ನಿರ್ಮಿಸಿದ ಸಾದಲಿ ಪಟ್ಟಣವೂ ಇದೇ ಜಿಲ್ಲೆ
ರೇಷ್ಮೆ ಜೋಳ ನೆಲಗಡಲೆ ಸೂರ್ಯಕಾಂತಿ ದ್ರಾಕ್ಷಿ
ಮೆಣಸಿನಕಾಯಿ ತರಕಾರಿ ಮಾವು ಇಲ್ಲಿನ ಬೆಳೆಗಳು
ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ
ಕರ್ನಾಟಕದಲ್ಲೇ ವಿಶಾಲ ಟೊಮೆಟೊ ಮಾರುಕಟ್ಟೆ ಇದೆ
ಉತ್ತರ ಪಿನಾಕಿನಿ ದಕ್ಷಿಣ ಪಿನಾಕಿನಿ ಪಾಲಾರ್ ಮತ್ತು ಅರ್ಕಾವತಿ ಹಾಗೂ ಪೊನ್ನೈಯಾರ್ ಇಲ್ಲಿನ ನದಿಗಳು
ವಿವೇಕಾನಂದ ಜಲಪಾತ ಜಕ್ಕಲಮಡುಗು ಹಾಗೂ
ಶ್ರೀನಿವಾಸಸಾಗರ ಜರಮಡಗು ಇಲ್ಲಿ ಜಲಾಶಯಗಳು
ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರು ಹುಟ್ಟಿದ್ದು
ವಿದುರಾಶ್ವತ್ಥ ಕರ್ನಾಟಕದ ಜಲಿಯಾನವಾಲಾ ಬಾಗ್
ಮಹಾತ್ಮ ಗಾಂಧಿಯವರು ತಂಗಿದ್ದ ನಂದಿಬೆಟ್ಟ
ಇದೇ ಜಿಲ್ಲೆ ಚಿಕ್ಕಬಳ್ಳಾಪುರವು ಪ್ರಸಿದ್ಧಿ ಪಡೆದಿಹುದು
ಬಾಬಾ ಆಟೋಮಿಕ್ ರೀಸರ್ಚ್ ಸೆಂಟರ್ ಇರುವುದು
ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ಕೇಂದ್ರ
ವಿಶ್ವದ ಎಲ್ಲೇ ಭೂಕಂಪನವಾದರೂ ಅದರ ತೀವ್ರತೆಯ
ನಮೂದಿಸುವ ಕೇಂದ್ರವೂ ಭಾರತ ಸರ್ಕಾರ ಸ್ಥಾಪಿಸಿದೆ
ದೂರದ ಗ್ಯಾಲಕ್ಸಿಗಳಿಂದ ಬರುವ ರೇಡಿಯೋ ಸಂಕೇತ
ಗ್ರಹಿಸಿ ಅಭ್ಯಾಸ ಮಾಡುವ ರಾಮನ್ ಇನ್ಸ್ಟಿಟ್ಯೂಟ್
ಜಗತ್ಪ್ರಸಿದ್ಧ ವ್ಯಕ್ತಿಗಳು ಬಂದು ತಂಗಿದ್ದ ನಂದಿಬೆಟ್ಟವಿದೆ
ಗುಡಿಬಂಡೆಯ ವೀರಾಪುರ ಪಕ್ಷಿಧಾಮವೂ ಇಲ್ಲಿದೆ
ವಾಲ್ಮಿಕಿ ಮಹರ್ಷಿಗಳು ಹುಟ್ಟಿ ಬೆಳೆದ ಜಿಲ್ಲೆ ಇದುವೇ
ಕಾಲಜ್ಞಾನಿ ಕೈವಾರ ನಾರಾಯಣಪ್ಪವರ ಜಿಲ್ಲೆಯಿದು
ಮುಸ್ಲಿಮರ ಯಾತ್ರಾ ಸ್ಥಳ ಮುರುಗಮಲ್ಲ ಇಲ್ಲಿದೆ
ಭೀಮ ಬಕಾಸುರನನ್ನು ಕೊಂದ ಬೆಟ್ಟ ಕೈವಾರದಲ್ಲಿದೆ
ಬಂಡೆ ಮೇಲೆ ಬಕಾಸುರನ ರಕ್ತದ ಕಲೆ ಇಂದಿಗೂ ಇದೆ
ಭೀಮಲಿಂಗೇಶ್ವರ ಲಕ್ಷ್ಮಣ ತೀರ್ಥ ಈ ಬೆಟ್ಟದ ಮೇಲಿವೆ
ಕೈಲಾಸ ಗಿರಿಯ ಗುಹಾಂತರ ದೇವಾಲಯವೂ ಇಲ್ಲಿದೆ
ಆಮೆಯಾಕಾರದ ಕೂರ್ಮ ಗಿರಿಯೂ ಈ ಜಿಲ್ಲೆಯಲ್ಲಿದೆ
ಕುಮುದೇಂದು ಮುನಿ ಶಿಕ್ಷಣ ತಜ್ಞ ಹೆಚ್ ನರಸಿಂಹಯ್ಯ
ಬಿ ಆರ್ ಲಕ್ಷ್ಮಣರಾವ್ ರವರು ಹಂಪ ನಾಗರಾಜಯ್ಯ
ಶಾಸನ ತಜ್ಞ ಡಾ ಆರ್ ಶೇಷಶಾಸ್ತ್ರಿ ಎಲ್ ಬಸವರಾಜು
ಗುಡಿಬಂಡೆ ಪೂರ್ಣಿಮಾರಂಥ ಸಾಹಿತಿಗಳ ನಾಡಿದು
ಕಲಾವತಿ ಪ್ರಕಾಶ್ ಬೆಂಗಳೂರು (ಜಿಲ್ಲೆ ೨೩)
More Stories
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ