November 6, 2024

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ – 10 – ಬಳ್ಳಾರಿ

Spread the love

ಕಲಾವತಿ ಪ್ರಕಾಶ್
ಬೆಂಗಳೂರು.

ವ್ಯಾಪಾರಕ್ಕಾಗಿ ಬಂದ ಮಲ್ಲಪ್ಪ ಶೆಟ್ಟಿ ಶಿವ ಭಕ್ತನಿಗೆ
ಎಲ್ಲಿ ಹುಡುಕಿದರೂ ಸಿಗಲಿಲ್ಲ ಶಿವಲಿಂಗ ಪೂಜೆಗೆ
ಅಳತೆ ಬಳ್ಳವನೇ ಬಂಡೆಯ ಮೇಲಿಟ್ಟು ಪೂಜಿಸಿದ
ಅವನ ಭಕ್ತಿಗೆ ಮೆಚ್ಚಿದ ಶಿವ ಶಿವಲಿಂಗವಾಗಿ ಬದಲಾದ

ಅಂದಿನಿಂದ ಈ ಊರಿಗೆ ಬಳ್ಳಾರಿ ಎಂಬ ಹೆಸರಾಯ್ತು
ಬಳ್ಳನೆಂಬ ರಾಕ್ಷಸನನ್ನು ಇಂದ್ರ ಸಂಹಾರ ಮಾಡಿದ
ಎಂಬ ಕಾರಣಕೂ ಬಳ್ಳಾರಿ ಎಂದು ಕರೆದದಾಯ್ತು
ಬಳ್ಳಾರಿ ಎಂಬ ಹೆಸರಿಗೆ ಕಾರಣಗಳೆಂದು ಪ್ರತೀತಿ ಇದೆ.

ಸಂಗನ ಕಲ್ಲಿನ ಪ್ರದೇಶವು ಆದಿ ಮಾನವನ ವಸತಿ
ಅಶೋಕನ ಕಾಲಕ್ಕೂ ಹಿಂದಿನ ಮಾನವ ಕುರುಹೈತಿ
ಮಡಿಕೆ ಕುಡಿಕೆ ಪ್ರಾಣಿ ಪಕ್ಷಿ ಮಾನವನ ಮೂಳೆಗಳು
ಶಿಲಾಯುಗದ ಅವಶೇಷಗಳಲ್ಲದೆ ಬಿಡಿಸಿದ ಚಿತ್ರಗಳು

ಚಾಲುಕ್ಯ ಹೊಯ್ಸಳ ಕದಂಬ ಶಾತವಾಹನರಾಳಿಹರು
ಸಂಡೂರ ಕೋಟೆಯನು ಟಿಪ್ಪು ಸುಲ್ತಾನ ಕಟ್ಟಿಸಿದರು
ದಕ್ಷಿಣ ಭಾರತದ ಸೇನಾ ಕೇಂದ್ರ ಆರಂಭಿಸಿ ಬ್ರಿಟೀಷರು
ಅವರ ಕಾಲದಲ್ಲೇ ಬಳ್ಳಾರಿ ಜೈಲನೂ ಪ್ರಾರಂಭಿಸಿದರು

ವಿಶ್ವದ ೨ನೇ ಅತಿದೊಡ್ಡ ಏಕಶಿಲಾ ಬೆಟ್ಟ ಬಳ್ಳಾರಿ ಗುಡ್ಡ
ಚಾರಣಿಗರಿಗೂ ಚಂದವಿದೆ ಕುಡುಮಿಲ್, ಚಿದರಗುಡ್ಡ
ಯಾಣವನ್ನೂ ಮೀರಿಸುವ ಎತ್ತರದ ಏಕ ಶಿಲೆಗಳುಂಟು
ಉಬ್ಬಲಗಂಡಿಯ ೧೮೦ ಅಡಿ ಎತ್ತರದ ಶಿಲೆಯುಂಟು

ಕಬ್ಬಿಣ ಮ್ಯಾಂಗನೀಸ್ ವಿಶ್ವ ದರ್ಜೆಯ ಅದಿರುಂಟು
ಜೆ ಎಸ್ ಡಬ್ಲ್ಯು ಯಿಂದ ಸ್ಟೀಲ್ ಸಿಟಿ ಬಿರುದುಂಟು
ಗಣಿಗಾರಿಕೆಗೆ ೨೨೦ ವರ್ಷಗಳ ಇತಿಹಾಸವಿಹುದು
ಶಸ್ತ್ರಾಸ್ತ್ರಗಳಿಗಾಗೇ ಟಿಪ್ಪು ಗಣಿಗಾರಿಕೆ ಆರಂಭಿಸಿದ್ದು

ದೇಶದ ಪ್ರಮುಖ ಜೀನ್ಸ್ ಸಿದ್ಧ ಉಡುಪುಗಳ ಕೇಂದ್ರ
ದಕ್ಷಿಣ ಕರ್ನಾಟಕದ ಅತಿ ದೊಡ್ಡ ವಿದ್ಯುತ್ ಸ್ಥಾವರ
ಕರ್ನಾಟಕದಲ್ಲೆ ಮೊದಲ ಸಕ್ಕರೆ ಕಾರ್ಖಾನೆಯಾರಂಭಾರಿ
ದಾರೋಜಿ ಕರಡಿ ಧಾಮವಿರುವ ಕರ್ನಾಟಕದ ಬಳ್ಳಾರಿ

ಇಲ್ಲಿನ ಜನರ ಮುಖ್ಯ ಕಸುಬೇ ವ್ಯವಸಾಯ
ನೋಡಿರೊಮ್ಮೆ ಕೊಟ್ಟೂರ ಮಿರ್ಚಿ ಮಂಡಕ್ಕಿ ರುಚಿಯ
ಎಂಭತ್ತು ಪ್ರತಿಶತ ಬಾಣಸಿಗರಿರುವ ಚಾಣಕ್ಯನೂರು
ಬಿಸಿಲ ನಾಡೆಂದೇ ಪ್ರಸಿದ್ಧಿ ಪಡೆದಿದೆ ಬಳ್ಳಾರಿ ಊರು

ಸಂಡೂರ ಬೆಟ್ಟಗಳು ಹೊದ್ದಂತೆ ಹಸಿರು ಚಾದರು
ಒಮ್ಮೆಯೂ ಬತ್ತದ ಝರಿಗಳು ಕಣಿವೆಗಳ ಖದರು
ಬಳ್ಳಾರಿಯ ನಾರಿ ಹಳ್ಳವೆ ಮಾನಸ ಸರೋವರ
ನೋಡಲಂದ ೧೨ ವರ್ಷಕೊಮ್ಮೆ ಅರಳುವ ಹೂಗಳ

ರಾಷ್ಟ್ರಕೂಟರು ಸ್ಥಾಪನೆ ಕಾರ್ತಿಕೇಯ ತಪೋವನ
ರಾಷ್ಟ್ರಕೂಟರೆ ಆರಂಭಿಸಿದ ಗುರುಕುಲ ವಿದ್ಯಾದಾನ
ವೀರಶೈವರ ಪಂಚ ಪೀಠದ ಉಜ್ಜನಿ ಇಹುದಿಲ್ಲಿ
ಮರಳು ಸಿದ್ದೇಶ್ವರರ ಸುಂದರ ದೇಗುಲವಿರಿವುದಿಲ್ಲಿ

ಪುರಂದರು ಕನಕ ವ್ಯಾಸರಾಜರು ವಿದ್ಯಾರಣ್ಯರು
ಕೆಲ ಶ್ರೇಷ್ಠರು ಕಾಯಕ ಕ್ಷೇತ್ರವಾಗಿ ಆರಿಸಿಕೊಂಡರು
ಕನ್ನಡದ ಪ್ರಥಮ ಗದ್ಯ ಕೃತಿ ಬರೆದವರು ಶಿವಕೋಟ್ಯಾಚಾರ್ಯರೂ ಇದೇ ಬಳ್ಳಾರಿಯವರು

ಹರಿಹರ ರಾಘವಾಂಕ ಚಾಮರಸರು
ವ್ಯಾಕರಣ ತೀರ್ಥ ವೈ ನಾಗೇಶ ಶಾಸ್ತ್ರಿಯರು
ಮಹಾಲಿಂಗ ರಂಗ ಸಾವಣಾಚಾರ್ಯರು
ರವಿ ಬೆಳಗೆರೆ ಸಾಹಿತ್ಯ ಕ್ಷೇತ್ರದ ಬಳ್ಳಾರಿಯ ದಿಗ್ಗಜರು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೫ ಬಾರಿ
ಯಶಸ್ವಿಯಾಗಿ ನಡೆಸಿದ ಹಿರಿಮೆ ಪಡೆದಿದೆ ಬಳ್ಳಾರಿ
ನಾಟಕಕಾರ ನಾಡೋಜ ಬೆಳಕಲ್ಲು ವೀರಣ್ಣನವರು
ನಟಿ ಜಯಂತಿ ಜಮುನಾ ಲೇಖಕಿ ಬಾರ್ಗವಿ ರಾವ್ರು

Copyright © All rights reserved Newsnap | Newsever by AF themes.
error: Content is protected !!