February 23, 2026

Newsnap Kannada

The World at your finger tips!

dks ku

ಡಿಕೆಶಿ ಸಿಎಂ ಆದ್ರೆ ಜೆಡಿಎಸ್ ಶಾಸಕರ ಬೆಂಬಲ- ಹೆಚ್‌ ಡಿ ಕೆ ಘೋಷಣೆ

Spread the love
  • ನಾಳೆ ಬೆಳಗ್ಗೆ ಡಿ.ಕೆ. ಶಿವಕುಮಾರ್ ಸಿಎಂ ಆದರೆ ಜೆಡಿಎಸ್ ಬೆಂಬಲ! 

  • ನಮ್ಮ ಎಂಎಲ್‌ಎಗಳಿಗೆ ದಿನ ಬೆಳಗಾದ್ರೆ ಪಕ್ಷಕ್ಕೆ ಬನ್ನಿ ಅಂತಿದ್ದಾರೆ 

  • ನನಗೇನೂ ವೈರತ್ವ ಇಲ್ಲ ಬೆಂಬಲ ಕೊಡುತ್ತೇವೆ ಎಂದ ಹೆಚ್‌ಡಿಕೆ 


ಬೆೆಂಗಳೂರು:

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಯ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವ ಸಚಿವರು, ಶಾಸಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಡಿಕೆಶಿ ಸಿಎಂ ಆಗುವುದಾದರೆ ಜೆಡಿಎಸ್ ನ 19 ಶಾಸಕರ ಬೇಷರತ್ತ ಬೆಂಬಲ ನೀಡುವುದಾಗಿ ‌ ರಾಜ್ಯಾಧ್ಯಕ್ಷ ಹೆಚ್‌.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಹೆಚ್‌.ಡಿ ಕುಮಾರಸ್ವಾಮಿ ನಾಳೆ ಬೆಳಗ್ಗೆಯೇ ಡಿ.ಕೆ. ಶಿವಕುಮಾರ್ ಸಿಎಂ ಆದರೆ ಜೆಡಿಎಸ್ ನ 19 ಶಾಸಕರೂ ಬೆಂಬಲ ಕೊಡುತ್ತೇವೆ. ಡಿಕೆ ಶಿವಕುಮಾರ್ ಅವರು ಬೇಕಿದ್ರೆ ಸಿಎಂ ಆಗಲಿ. ನಾವೂ ಸಹ ಅವರಿಗೆ ಬೆಂಬಲವನ್ನು ಕೊಡುತ್ತೇವೆ ಎಂದು ಘೋಷಣೆ ಮಾಡಿದರು.

ಸುದ್ದಿಗಾರರೊಂದಿಗೆ ಸಾಕಷ್ಟು ವ್ಯಂಗ್ಯವಾಗೇ ಮಾತನಾಡಿರುವ ಹೆಚ್‌.ಡಿ ಕುಮಾರಸ್ವಾಮಿ ಅವರು ನಾನ್ಯಾಕೆ ಅವರಿಗೆ ಅಡ್ಡಿಯಾಗಲಿ. ನಮ್ಮ ಎಂಎಲ್‌ಎಗಳಿಗೆ ದಿನ ಬೆಳಗಾದ್ರೆ ಪಕ್ಷಕ್ಕೆ ಬನ್ನಿ ಅಂತ ಅರ್ಜಿ ಹಾಕಿ ಕರೆಯುತ್ತಿದ್ದಾರೆ. ಯಾಕೆ ಸುಮ್ನೆ ಜೆಡಿಎಸ್‌ ನಾಯಕರನ್ನು ಕಾಂಗ್ರೆಸ್‌ ಪಕ್ಷಕ್ಕೆ ಬರಲು ಕರೆಯುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

ನನಗೇನೂ ವೈರತ್ವ ಇಲ್ಲ ನಾವೇ ಡಿ.ಕೆ ಶಿವಕುಮಾರ್ ಅವರಿಗೆ ಬೆಂಬಲ ಕೊಡುತ್ತೇವೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಸಿಎಂ ಆಗಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

error: Content is protected !!