January 30, 2026

Newsnap Kannada

The World at your finger tips!

accident

ಟ್ರಕ್‍ಗಳ ನಡುವೆ ಡಿಕ್ಕಿ – 10 ಮಂದಿ ಸಾವು, 15 ಮಂದಿಗೆ ಗಾಯ

Spread the love

ಎರಡು ಟ್ರಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ 10 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿರುವ ಘಟನೆ ಗುಜರಾತ್‍ನ ವಡೋದರಾದಲ್ಲಿ ನಡೆದಿದೆ.

ಇಂದು ಮುಂಜಾನೆ ವಡೋದರಾದ ವಘೋಡಿಯಾ ಕ್ರಾಸಿಂಗ್ ಹೆದ್ದಾರಿಯಲ್ಲಿ ಪಾವಘಡದಿಂದ ಸೂರತ್‍ಗೆ ಹೋಗುವ ಟ್ರಕ್ ಮತ್ತು ಇನ್ನೊಂದು ಟ್ರಕ್ ಒಂದಕ್ಕೊಂದು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ವಡೋದರಾದ ಎಸ್‍ಎಸ್‍ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದಲ್ಲಿ ಐವರು ಮಹಿಳೆಯರು ಸೇರಿದಂತೆ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 25 ಜನರನ್ನು ಹೊತ್ತ ಮಿನಿ ಟ್ರಕ್ ಹಿಂದಿನಿಂದ ಬಂದು ಇನ್ನೊಂದು ಟ್ರಕ್‍ಗೆ ಗುದ್ದಿದೆ ಎಂದು ವಡೋದರಾ ಪೊಲೀಸ್ ಆಯುಕ್ತ ಆರ್.ಬಿ ಬ್ರಹ್ಮಭಟ್ ಹೇಳಿದ್ದಾರೆ.

ವಡೋದರಾದ ಅಪಘಾತದಿಂದ ದುಃಖಿತನಾಗಿದ್ದೇನೆ. ನನ್ನ ಆಲೋಚನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ಇದೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ. ಅಪಘಾತದ ಸ್ಥಳದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕವಾಗಿ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ವಡೋದರಾ ಬಳಿ ರಸ್ತೆ ಅಪಘಾತದಿಂದಾಗಿ ಪ್ರಾಣಹಾನಿ ದುಃಖವಾಗಿದೆ. ಅಗತ್ಯವಿರುವ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ. ಅಗಲಿದ ಆತ್ಮಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ‌ ಶಾಂತಿ” ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಬಗ್ಗೆ ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

accident1
error: Content is protected !!