ಕರುನಾಡ ಜಿಲ್ಲೆಗಳ ಕಿರು ಪರಿಚಯ – 1 – ಬೀದರ್ ಜಿಲ್ಲೆ

Team Newsnap
1 Min Read
WhatsApp Image 2023 10 31 at 8.26.05 PM
ಕಲಾವತಿ ಪ್ರಕಾಶ್

ಜಾನಪದ ಶೈಲಿಯಲ್ಲಿ ಕವನ :

ಕರ್ನಾಟಕದ ಕಿರೀಟವೆಂದೇ
ಖ್ಯಾತಿ ಪಡೆದಿಹ ಜಿಲ್ಲೆಯಿದು
ಬಹಮನಿ ಸುಲ್ತಾನ್ರು ಕಟ್ಟಿದ
ರಾಜಧಾನಿಯ ನಗರ ಇದು

ಸ್ವಾತಂತ್ರ್ಯ ನಂತರ ಬೀದರ್ ಭೂಮಿಯು
ಮೈಸೂರು ರಾಜ್ಯಕೆ ಸೇರಿಹುದು
ಏಕೀಕರಣದ ಸಮಯದಿ ಇದು
ಬೀದರ್ ಜಿಲ್ಲೆಯು ಆಗಿಹುದು

“ಬಿದ್ರಿ” ಎಂಬ ಕರಕುಶಲತೆಗೆ
ವಿಶೇಷ ಪ್ರಸಿದ್ಧಿ ಪಡೆದಿಹುದು
ಸೂರ್ಯಕಿರಣ ವೈಮಾನಿಕ ತಂಡದ
ತರಬೇತಿ ಕೇಂದ್ರವು ಇಲ್ಲಿಹುದು

ಕರ್ನಾಟಕದ ಸ್ವಚ್ಛ ನಗರದೊಳು
ಐದನೆ ಸ್ಥಾನ ಪಡೆದಿಹುದು
ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ಖರಲಿ
ಸೌಹಾರ್ದತೆಯನು ಮೆರೆದಿಹುದು

ಬಸವ ಕಲ್ಯಾಣದಿ ಬಸವಣ್ಣ ನೆಲೆಸಿದ
ಪುಣ್ಯ ಭೂಮಿಯು ಈ ನಾಡು
ಶರಣ ಸಾಹಿತ್ಯದ ಅನುಭವ
ಮಂಟಪದೂರೇ ಈ ಬೀಡು

ಶರಣ ಶರಣೆಯರು ತಮ್ಮಅನಿಸಿಕೆಗಳ
ವಚನದ ಮೂಲಕ ಸಾರಿದರು
ಸಮಾಜದಲ್ಲಿನ ಮೇಲು ಕೀಳಿನಲಿ
ಬದಲಾವಣೆಯನು ತಂದಿಹರು

ಹೊಸತನ ಹೊಸ ಬರಹದ
ವಚನ ಸಾಹಿತ್ಯವ ಬಿತ್ತಿದರು
ಶೈವ ಸಂಸ್ಕೃತಿ ಸಾರುತ ವಿಶ್ವದಿ
ರಾಜ್ಯಕ್ಕೆ ಹೆಮ್ಮೆಯ ತಂದುಕೊಟ್ಟರು

ಕನ್ನಡ ಕಟ್ಟುವ ಸಾಹಿತ್ಯ ರಚಿಸುವ
ಸಾಹಿತಿಗಳೂ ಇಲ್ಲಿಹರು
ವೀರೇಂದ್ರ ಸಿಂಪಿ ದೇಶಾಂಶ ಹುಡುಗಿ
ವಿಸಾಜಿ ಯಂಥ ಮುಂತಾದವರು

ಶಿಕ್ಷಣ ಕ್ಷೇತ್ರ, ದಲಿತೋದ್ಧಾರ, ಕನ್ನಡಕ್ಕೆ
ಅಪಾರ ಸೇವೆಯನು ಸಲ್ಲಿಸಿದವರು
ಭಾಲ್ಕಿ ಪಟ್ಟಣದ ಶತಾಯುಷಿ
ಶ್ರೀ ಚನ್ನಬಸವ ಪಟ್ಟದ ದೇವರು

Share This Article
Leave a comment