ಬೆಂಗಳೂರು : ಪ್ರತಿಕೂಲ ಹವಾಮಾನದಿಂದ ಗಗನಯಾನ ಪರೀಕ್ಷಾರ್ಥ ಉಡಾವಣೆಯನ್ನು ಇಸ್ರೋ ವಿಜ್ಞಾನಿಗಳು ಸಧ್ಯಕ್ಕೆ ಸ್ಥಗಿತಗೊಳಿಸಿದ್ದಾರೆ.
ಉಡಾವಣೆಗೆ 5 ಸೆಕೆಂಡ್ಸ್ ಬಾಕಿ ಇರುವಾಗ ಪರಿಶೀಲನೆಯ ಅಗತ್ಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಜಿ.ಸೋಮನಾಥ್ ತಿಳಿಸಿದರು. ಇದನ್ನು ಓದು – ಮೇಕೆದಾಟು, ಕಾವೇರಿ ಹೋರಾಟಗಾರರ ಮೇಲಿನ ಕೇಸು ರದ್ದಿಗೆ ರಾಜ್ಯ ಸರ್ಕಾರ ನಿರ್ಧಾರ
‘ಗಗನ್ಯಾನ್ನ ಮೊದಲ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ1) ಉಡಾವಣೆ ತಡೆಹಿಡಿಯಲಾಗಿದೆ. ಮಿಷನ್ ಲಿಫ್ಟ್ ಶನಿವಾರ ನಡೆಸಲು ಸಾಧ್ಯವಾಗುತ್ತಿಲ್ಲ. ಕಾರಣ ಇಂಜಿನ್ ಕಾಣಿಸಿಕೊಂಡ ಬೆಂಕಿ ಆಫ್ ಆಗಿದೆ. ಇದು ಯಾಕೆ ಹೀಗಾಯಿತು ಎಂದು ಕಂಡುಹಿಡಿಯಬೇಕಾಗಿದೆ. ಇದನ್ನು ಓದು – ರಾಜ್ಯದಲ್ಲಿ 35 ಮಂದಿ ಇನ್ಸ್ ಪೆಕ್ಟರ್ ವರ್ಗಾವಣೆ
ಟಿವಿ-ಡಿ1 ಸುರಕ್ಷಿತವಾಗಿದೆ. ಆದರೆ ಎಲ್ಲಿ ಸಮಸ್ಯೆಯಾಗಿದೆ ಎಂದು ನೋಡಬೇಕಿದೆ. ನಾವು ಶೀಘ್ರದಲ್ಲೇ ಹಿಂತಿರುಗುತ್ತೇವೆ. ನಾವು ಇದನ್ನು ಸರಿಪಡಿಸಿ ಶೀಘ್ರದಲ್ಲೇ ಬಿಡುಗಡೆಯನ್ನು ನಿಗದಿಪಡಿಸುತ್ತೇವೆ’ ಎಂದು ಹೇಳಿದ್ದಾರೆ.
ಗಗನಯಾನ ಪರಿಕ್ಷಾರ್ಥ ಉಡಾವಣೆ ಸಧ್ಯಕ್ಕೆ ಸ್ಥಗಿತ : ಇಸ್ರೋ ಅಧ್ಯಕ್ಷರ ಪ್ರಕಟನೆ – Space exploration launch halted for now: ISRO chairman announcement