November 11, 2024

Newsnap Kannada

The World at your finger tips!

yoga m

ವಿಶ್ವಕ್ಕೆ ಯೋಗ ಗುರು ಭಾರತ : ಕರ್ನಾಟಕಕ್ಕೆ ಯೋಗ ಗುರು ಮೈಸೂರು

Spread the love

ಮೈಸೂರು :
ವಿಶ್ವಕ್ಕೆ ಯೋಗದ ಗುರುವಾಗಿ ಭಾರತವಿದ್ದರೆ ಅದೇ ರೀತಿ ಕರ್ನಾಟಕಕ್ಕೆ ಯೋಗ ಗುರುವಾಗಿ ನಮ್ಮ ಮೈಸೂರು ಇದೆ. ಯೋಗ ಆರೋಗ್ಯ ಹಾಗೂ ಮನಃ ಶಾಂತಿ ಯನ್ನು ಹೆಚ್ಚಿಸುತ್ತದೆ. ದಸರಾದಲ್ಲಿ ಯೋಗದ ಕುರಿತಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ ಎಂದು ಕೆ.ಆರ್ ವಿಧಾನಸಭಾ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ತಿಳಿಸಿದರು.

ಇಂದು ನಗರದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮೈಸೂರು ದಸರಾದ ಎಲ್ಲಾ ಕಾರ್ಯಕ್ರಮಗಳನ್ನು ಸರ್ಕಾರವು ಬಹಳ ಅಚ್ಚುಕಟ್ಟಾಗಿ ಆಯೋಜಿಸುತ್ತಿದ್ದು ದಸರಾ ಎಂದರೆ ಕಲೆ ಸಂಸ್ಕೃತಿ ಬಿಂಬಿಸುವುದರ ಜೊತೆಗೆ ಆರೋಗ್ಯದ ನಿಟ್ಟಿನಲ್ಲಿ ಯೋಗಕ್ಕೆ ಮೈಸೂರು ದಸರಾದಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತಿದೆ.

ಮಹಾನಗರ ಪಾಲಿಕೆಯ ಮಹಾಪೌರರಾದ ಶಿವ ಕುಮಾರ್ ಅವರು ಮೈಸೂರು ಸಾಂಸ್ಕೃತಿಕ, ಪಾರಂಪರಿಕ ನಗರಿಯಂತೆ ಯೋಗ ನಗರವು ಕೂಡ ಆಗಿದೆ. ದೇಶದ ಪ್ರಧಾನಿಯು ಯೋಗಕ್ಕೆ ಅತಿ ಹೆಚ್ಚು ಓತ್ತನ್ನು ನೀಡಿ ಇದರ ಕುರಿತಂತೆ ಸಂಶೋಧನೆಗೆ ಹಣಕಾಸುವನ್ನು ಬಿಡುಗಡೆ ಮಾಡಿ ಉತ್ತೇಜನ ನೀಡುತ್ತಿದ್ದಾರೆ. ಮೈಸೂರು ದಸರಾದಲ್ಲಿ ಯೋಗದ ಕುರಿತಂತೆ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ನಮ್ಮ ಹೆಮ್ಮೆ . ಯೋಗವನ್ನು ಪ್ರತಿಯೊಬ್ಬರು ಮಾಡಬೇಕು ಆಗ ಮಾತ್ರ ಯೋಗದ ಪ್ರಾಮುಖ್ಯತೆ ತಿಳಿಯುತ್ತದೆ. ಭಾಗವಹಿಸಿರುವ ಎಲ್ಲಾ ಯೋಗಪಟುಗಳಿಗೂ ಶುಭಾಶಯಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆಯ ಉಪ ಮಹಾಪೌರರಾದ ಡಾ. ಜಿ ರೂಪ, ಯೋಗ ದಸರಾ ಉಪಸಮಿತಿಯ ಡಿ.ಎಂ ರಾಣಿ , ಯೋಗ ದಸರಾ ಉಪಸಮಿತಿಯ ವಿಶೇಷ ಅಧಿಕಾರಿಯಾದ ಕೆ.ರಮ್ಯಾ, ಯೋಗ ದಸರಾ ಉಪಸಮಿತಿಯ ಕಾರ್ಯದರ್ಶಿ ಡಾ.ಪುಷ್ಪ, ಹಾಗೂ ಸಮಿತಿಯ ಎಲ್ಲಾ ಸದಸ್ಯರು ಹಾಜರಿದ್ದರು.

Copyright © All rights reserved Newsnap | Newsever by AF themes.
error: Content is protected !!