- ಬಿಜೆಪಿ ನಾಯಕರ ಆರೋಪ ಸುಳ್ಳು: ಸಿಎಂ
ಮೈಸೂರು: ಕಾಂಗ್ರೆಸ್ ಹೈಕಮಾಂಡ್ ನಮ್ಮಿಂದ ನಯಾ ಪೈಸೆ ಹಣ ಕೇಳಿಲ್ಲ. ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಕರ್ನಾಟಕದಲ್ಲಿ ಹಣ ಸಂಗ್ರಹಿಸುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಪಂಚರಾಜ್ಯ ಚುನಾವಣೆಗೂ ನಮಗೂ ಏನು ಸಂಬಂಧ.
ನಾವೇನಾದರೂ ನಮ್ಮ ಚುನಾವಣೆ ಸಂದರ್ಭದಲ್ಲಿ ಬೇರೆ ಯಾರ ಬಳಿಗಾದರೂ ಹೋಗಿ ಹಣ ಕೇಳಿದ್ದೇವೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿ, ಕಾಂಗ್ರೆಸ್ ಗುತ್ತಿಗೆದಾರರು ಎಂದು ವಿಭಜಿಸಿ ಹೇಳೋದಕ್ಕೆ ಆಗುತ್ತಾ? ಅವನು ಬಿಜೆಪಿ ಗುತ್ತಿಗೆದಾರ ಅಂಥ ಈಗ ನಾನು ಹೇಳುತ್ತೇನೆ. ಅದನ್ನು ಯಾರಾದರೂ ಒಪ್ಪಿಕೊಳ್ಳುತ್ತಾರಾ ಎಂದು ಕೇಳಿದರು.
ಅವರಿಗೆ ಹಣ ಕೊಡಬೇಕು. ಇವರಿಗೆ ಕೊಡಬೇಕು ಎನ್ನುವ ಪ್ರಶ್ನೆಯಲ್ಲಿ ಅರ್ಥವೇ ಇಲ್ಲ. ಬಿಜೆಪಿಯವರು ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಾರೆ.
ಇದು ಸರ್ಕಾರದ ದುಡ್ಡು ಎಂದು ಐಟಿ ಏನಾದರೂ ಹೇಳಿದ್ಯಾ? ಐಟಿ ಏನಾದರೂ ಸರ್ಕಾರದ ಮೇಲೆ ಆರೋಪ ಮಾಡಿದ್ಯಾ? ಇದರ ಬಗ್ಗೆ ನಾವೇಕೆ ತನಿಖೆ ಮಾಡಬೇಕು. ಐಟಿ ದಾಳಿಗಳು ಸಾಮಾನ್ಯವಾಗಿ ನಡೆಯುತ್ತವೆ. ನವರಾತ್ರಿ ಪರ್ವದಲ್ಲಿ ಬೊಂಬೆಗಳ ಅಲಂಕಾರ
ಈ ದಾಳಿ ಕೂಡ ಅದರ ಒಂದು ಭಾಗ ಅಷ್ಟೇ. ಇದನ್ನು ರಾಜಕೀಯಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಅಷ್ಟೇ ಎಂದು ಟೀಕಿಸಿದರು.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ