- ಅಧಿಕಾರಿಗಳ ಏಕ ಪಕ್ಷೀಯ ಖಂಡಿಸಿ ಹೈಕೋರ್ಟ್ ಗೆ ಮೊರೆ ಹೋಗಲು ಕಾಂಗ್ರೆಸ್ ನಿರ್ಧಾರ.
- ಕಾಂಗ್ರೆಸ್ ನಿರ್ದೇಶಕ ರಿಂದ ಸಭೆ ಭಹಿಷ್ಕಾರ
- ಎರಡು ತಕರಾರು ಅರ್ಜಿ ಸಲ್ಲಿಸಿರುವ ಕಾಂಗ್ರೆಸ್
- ಡಿಸಿಸಿ ಬ್ಯಾಂಕ್ ಚುನಾವಣೆ ಸಧ್ಯಕ್ಕೆ ಗೊಂದಲದಲ್ಲಿ
ಮಂಡ್ಯ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ – ಉಪಾಧ್ಯಕ್ಷ ರ ಚುನಾವಣೆಗೆ ವಿಘ್ನ ಎದುರಾಗಿದೆ
ಅಧ್ಯಕ್ಷ – ಉಪಾಧ್ಯಕ್ಷ ರ ಚುನಾವಣೆಯಲ್ಲಿ ಆಡಳಿತ ಯಂತ್ರದ ದುರುಪಯೋಗ ಆಗುತ್ತದೆ. ಆಯ್ಕೆಯಾದ ನಿರ್ದೇಶಕರ
ಹಕ್ಕುಗಳ ನ್ನು ಈ ಸರ್ಕಾರ ಮೊಟಕು ಮಾಡುವ ತಂತ್ರಗಳನ್ನು ಖಂಡಿಸಿ ನಾವು ಚುನಾವಣೆ ಗೆ ಬಹಿಷ್ಕಾರ ಹಾಕಿ ಸಭೆಯಿಂದ ಹೊರ ಬಂದಿದ್ದೇವೆ ಎಂದು ಮಾಜಿ ಸಚಿವ . ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ ಎಂ ನರೇಂದ್ರ ಸ್ವಾಮಿ ತಿಳಿಸಿದರು.
ಸಭೆ ಭಹಿಷ್ಕಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನರೇಂದ್ರ ಸ್ವಾಮಿ ಇಂದಿನ ಚುನಾವಣೆ ಯ ಎಲ್ಲಾ ನಡವಳಿಕೆಗಳು ಕಾನೂನಿಗೆ ವಿರುದ್ದವಾಗಿವೆ. 1 30 ರೊಳಗೆ ಚುನಾವಣೆ ನಡೆಸಬೇಕಾದ ಚುನಾವಣಾ ಅಧಿಕಾರಿಗಳು 1 .45 ಆದರೂ ಮತದಾನ ಮಾಡಿಲ್ಲ. ನಾವು ನೀಡಿದ ಎರಡು ತಕರಾರು ಅರ್ಜಿಗಳಿಗೆ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ನಾವು ಹೈಕೋರ್ಟ್ ಮೊರೆ ಹೋಗುವುದಾಗಿ ಪ್ರಕಟಿಸಿದರು.
ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ನೀಡಿರುವ ತಕಾರಾರು ಅರ್ಜಿ ವಿಲೇವಾರಿ ಪೂರ್ಣಗೊಂಡ ನಂತರವೇ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ಮುಂದುವರೆಯಲಿದೆ.
ಕಾಂಗ್ರೆಸ್ ತಕರಾರು ಯಾಕೆ?
ನಾಗಮಂಗಲ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘದಿಂದ ಆಯ್ಕೆಯಾದ ಎಚ್. ಎಸ್ .ನರಸಿಂಹಯ್ಯ ಅವರನ್ನು ಜಂಟಿ ನಿರ್ದೇಶಕರು ಪದಾಧಿಕಾರಿಗಳ ಸಭೆ ಪಾಲ್ಗೊಳ್ಳುವಂತಿಲ್ಲ ಎಂದು ಹೇಳಿದ್ದಾರೆ. ಆದರೆ ಮತದಾನ ಮಾಡುವಂತಿಲ್ಲ ಎಂದು ಹೇಳಿಲ್ಲ. ಇದು ಗೊಂದಲದಿಂದ ಕೂಡಿದೆ. ಆದೇಶವನ್ನು ಸ್ಪಷ್ಟವಾಗಿ ನೀಡಿಲ್ಲ ಎಂದರು.
ಆದೇಶ ಗೊಂದಲದಿಂದ ಕೂಡಿದೆ. ಮತ್ತು ಸ್ಷಪ್ಟತೆ ಇಲ್ಲದಿರುವುದರಿಂದ ಮತದಾನ ಹಕ್ಕು ಕಸಿದುಕೊಳ್ಳಲಾಗಿದೆ ಎಂದು ದೂರಿ ನೀಡಲಾಗಿರುವ ತಕರಾರು ಅರ್ಜಿ ಗೆ ಸ್ಪಷ್ಟನೆ ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಿರ್ದೇಶಕರು ಸಲ್ಲಿಸಿರುವ ಮತ್ತೊಂದು ತಕರಾರು ಅರ್ಜಿಯಲ್ಲಿ ಅಫೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಅಸ್ತಿತ್ವದಲ್ಲೇ ಇಲ್ಲ. ನಾಮ ನಿರ್ದೇಶನ ಗೊಂಡ ನಿರ್ದೇಶಕರೇ ಮತದಾನ ಮಾಡಲು ಅವಕಾಶವಿಲ್ಲ. ಆದರೂ ಇಂದು ಅಫೆಕ್ಸ್ ಬ್ಯಾಂಕ್ ನ ಅಧಿಕಾರಿಗೆ ಅಧಿಕಾರ ನೀಡಿ ಮತದಾನ ಮಾಡಲು ಕಳುಹಿಸಿರುವುದು ಕಾನೂನು ಉಲ್ಲಂಘನೆ ಯಾಗಿದೆ ಎಂದು ಅರ್ಜಿಯಲ್ಲಿ ದೂರಿರುವುದಾಗಿ ತಿಳಿಸಿದರು.
ಈ ಎರಡು ಕಾರಣಗಳಿಗಾಗಿ ಚುನಾವಣಾ ಅಧಿಕಾರಿ ಕುಮುದಾ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗದ ಬಳಿ ನಿರ್ದೇಶನ ನೀಡುವಂತೆ ಕೋರಿದ್ದರೆ. ಅಲ್ಲಿಂದ ಸ್ಪಷ್ಟ ಬಂದ ನಂತರವೇ ಮತದಾನ ನಡೆಯಲಿದೆ. ಅಲ್ಲಿಯವರೆಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ಮುಂದೂಡಲಾಗಿದೆ.
- ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
- ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
- ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ
- ರಾಜ್ಯದಲ್ಲಿ ಶೀಘ್ರವೇ 14 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದು: ಸರ್ಕಾರದಿಂದ ಸ್ಪಷ್ಟನೆ
- ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
More Stories
ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ