ಮಂಡ್ಯ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ರಾಗಿ ಆಯ್ಕೆ ಯಾಗಿರುವ ನಾಗಮಂಗಲ ತಾಲೂಕು ಹರದಹಳ್ಳಿ ಎಚ್ ಎಸ್ ನರಸಿಂಹಯ್ಯ ಅವರನ್ನು ಸಹಕಾರ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರು ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ.
ಈ ತೀರ್ಪಿನಿಂದಾಗಿ ಕಾಂಗ್ರೆಸ್
ಬೆಂಬಲಿತ ರು ಎಂದು ಗುರುತಿಸಿಕೊಂಡಿರುವ ಎಚ್ ಎಸ್ ನರಸಿಂಹಯ್ಯ ಇಂದು ನಡೆಯುವ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.
ಜಂಟಿ ನಿರ್ದೇಶಕರ ಮಧ್ಯಂತರ ತೀರ್ಪಿನಿಂದಾಗಿ ಡಿಸಿಸಿ ಬ್ಯಾಂಕ್ ನಲ್ಲಿದ್ದ 7 ಸದಸ್ಯರ ಬಲ ಈಗ 6ಕ್ಕೆ ಕುಸಿದಂತಾಗಿದೆ.
ನಾಗಮಂಗಲ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಆಯ್ಕೆಯಾದ ನರಸಿಂಹಯ್ಯ ಅವರು ಸರಿಯಾದ ದಾಖಲೆ ನೀಡದೇ ಆಯ್ಕೆ ಯಾಗಿದ್ದಾರೆಂದು ನಾಗಮಂಗಲ ತಾಲೂಕಿನ ಕಲ್ಲುವೀರನ ಕೊಪ್ಪಲು ಎಚ್ ರಮೇಶ್ ಜಂಟಿ ನಿರ್ದೇಶಕರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ವಾದಗಳನ್ನು ಆಲಿಸಿದ ನ್ಯಾಯಾಲಯ ವು ನರಸಿಂಹಯ್ಯ ಅವರ ಆಯ್ಕೆಯನ್ನು ಅನರ್ಹ ಎಂದು ಘೋಷಿಸಿತು. ಈ ಕಾರಣದಿಂದ ನರಸಿಂಹಯ್ಯ ನವರು ಇಂದಿನ ಮತದಾನದ ಹಕ್ಕಿನಿಂದ ವಂಚಿತರಾದರು.
ಈ ತೀರ್ಪು ಕಾಂಗ್ರೆಸ್ ಗೆ ಮತ್ತೊಂದು ಆಘಾತ ತಂದಿದೆ.
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಏಕಾದಶಿ ಉಪವಾಸದ ಬಗ್ಗೆ ವೈಜ್ಞಾನಿಕ ಚಿಂತನೆ ಏನು ಹೇಳುತ್ತದೆ?
More Stories
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ