January 2, 2025

Newsnap Kannada

The World at your finger tips!

siddarama

ಮುಂದಿನ ವಾರದಲ್ಲಿ ಬರಗಾಲ ಘೋಷಣೆ- ಸಿ ಎಂ ಸಿದ್ದು

Spread the love

ಧಾರವಾಡ : ಕೇಂದ್ರದ ನಿಯಮದಂತೆ ನಾವು ಮುಂದಿನ ವಾರ ಬರಗಾಲ ಘೋಷಣೆ ಮಾಡುತ್ತೇವೆ. ಕೇಂದ್ರದ ಸಹಾಯ ಕೇಳಬೇಕು ಎಂದು ಸಿಎಂ ಸಿದ್ದರಾಮಯ್ಯ ಧಾರವಾಡದಲ್ಲಿ ಶನಿವಾರ ಹೇಳಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಸಿದ್ದಾರಾಮಯ್ಯ , ರೈತರಿಗೆ ಕೃಷಿ ಉತ್ಪಾದನೆ ಆಗಬೇಕು. ರೈತರು, ಸೈನಿಕರು, ಶಿಕ್ಷಕರು ಬಹಳ ಮುಖ್ಯ. ಬಹಳ ಸಂತೋಷದಿಂದ ಧಾರವಾಡ ಕೃಷಿ ವಿವಿಯಲ್ಲಿ ಕೃಷಿ ಮೇಳವನ್ನು ಉದ್ಘಾಟನೆ ಮಾಡಿದ್ದೇವೆ ಎಂದರು.

ಕೃಷಿ ವಿವಿ ರೈತರಿಗೆ ಅನುಕೂಲ ಮಾಡುವ ಇಲಾಖೆ. ಶೇ 60ಕ್ಕೂ ಹೆಚ್ಚು ಜನಸಂಖ್ಯೆ ಕೃಷಿ ಮೇಲೆ ಅವಲಂಬನೆ ಆಗಿದೆ. ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ. ರೈತರ ಆದಾಯ ಕೂಡಾ ಹೆಚ್ಚು ಆಗಲಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಎರಡು ಸರ್ಕಾರ ಕೂಡಾ ಕೃಷಿ ಅಭಿವೃದ್ಧಿ ಮಾಡಲು ಪ್ರಯತ್ನ ಮಾಡಬೇಕು. ನಮ್ಮದು ಕೃಷಿ ಪ್ರಧಾನ ದೇಶ ಎಂದು ಕರೆಯುತ್ತೇವೆ. ಕೆಲವರು ಕೃಷಿ ಬಿಡುತ್ತಿದ್ದಾರೆ. ಕೃಷಿ ಲಾಭದಾಯಕ ಅಲ್ಲ ಎಂದು ವಿಮುಖರಾಗುತ್ತಿದ್ದಾರೆ.

ನಮ್ಮ ದೇಶದಲ್ಲಿ ಮಳೆಯಾಶ್ರಿತ ಬೇಸಾಯ ಹೆಚ್ಚು. ರಾಜಸ್ಥಾನ ಬಿಟ್ಟರೆ ನಾವೇ ಹೆಚ್ಚು. ಇದರಲ್ಲಿ ಕೃಷಿ ವಿವಿಗಳ ಪಾತ್ರ ಮುಖ್ಯ. ಒಣ ಬೇಸಾಯದ ಕಡೆ ಹೆಚ್ಚು ಗಮನ ಕೊಡಬೇಕಿರುವುದು ವಿವಿಗಳ ಕರ್ತವ್ಯ ಎಂದು ತಿಳಿಸಿದರು. 

ಕೃಷಿ ಮೇಳಗಳು ಜಾತ್ರೆ ರೀತಿ ನಡೆಯಬಾರದು. ರೈತರಿಗೆ ಹೆಚ್ಚು ಪ್ರಯೋಜನವಾಗುವ ರೀತಿಯಲ್ಲಿ ನಡೆಬೇಕು. ಜಿಡಿಪಿ ಬೆಳವಣಿಗೆಗೆ ಕೃಷಿ, ಸೇವಾ ಹಾಗೂ ಕೈಗಾರಿಕಾ ವಲಯ ಆರಿಸುತ್ತೇವೆ. ಕೃಷಿ ವಲಯ ಬೆಳೆದರೆ ಜಿಡಿಪಿ ಬೆಳೆಯುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.ಸೆ.11ಕ್ಕೆ ಬೆಂಗಳೂರು ಬಂದ್ – ಏನಿರುತ್ತೆ ? ಏನು ಇರಲ್ಲ?

ಕೃಷಿ ಬೆಳೆಯದೇ ಇದ್ದರೆ ತಲಾ ಆದಾಯ ಕಡಿಮೆಯಾಗಲಿದೆ. ಆಗ ಜನ ಕೊಂಡುಕೊಳ್ಳುವುದಿಲ್ಲ. ಜನರಿಗೆಹಾಗೂಯುವಕರಿಗೆ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಬರಬೇಕು. ಟೀಚರ್ ಆಗಿ ನಿವೃತ್ತ ಆದರೂ ಒಬ್ಬರು ಕೃಷಿ ಮಾಡುತ್ತಿದ್ದಾರೆ. ಬೋರ್‌ವೆಲ್ ಹಾಕಿ ಕೃಷಿ ಮಾಡಿ ಯಶಸ್ಸು ಆಗಿದ್ದಾರೆ. ಎಲ್ಲ ರೈತರು ಆ ಪ್ರಯತ್ನ ಮಾಡಬೇಕು. ಅದಕ್ಕೆ ಪೂರಕ ಕೆಲಸ ವಿವಿ ಮಾಡಬೇಕು ಎಂದರು.

Copyright © All rights reserved Newsnap | Newsever by AF themes.
error: Content is protected !!