March 13, 2026

Newsnap Kannada

The World at your finger tips!

innova

33 ಮಂದಿ ಸಚಿವರಿಗೆ ಹೊಸ ಕಾರಿನ ಭಾಗ್ಯ : ಸರ್ಕಾರ ಆದೇಶ

Spread the love

ಸಿಎಂ ಸಿದ್ದರಾಮಯ್ಯ ಸರ್ಕಾರದ ಎಲ್ಲಾ 33 ಸಚಿವರಿಗೆ ಹೊಸ ಕಾರು ಇನ್ನೋವಾ ಹೈಕ್ರಾಸ್‌-ಹೈಬ್ರಿಡ್‌ ಎಂಪಿವಿ ಕಾರು ಖರೀದಿಗೆ ಆದೇಶ ನೀಡಿದೆ. ಕಾರಿಗೆ 30 ಲಕ್ಷ ರೂ. 33 ಕಾರು ಖರೀದಿಗೆ ಒಟ್ಟು 9.90 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.

ಪಂಚ ಗ್ಯಾರಂಟಿ ಜಾರಿಗೆ ತರುವಲ್ಲಿ ಬ್ಯೂಸಿ ಆಗಿರುವ ರಾಜ್ಯ ಸರ್ಕಾರ ಜನಸಾಮಾನ್ಯರನ್ನು ಮಾತ್ರವಲ್ಲದೆ ಸಂಪುಟದ ಸಚಿವರ ಕಡೆಗೂ ಗಮನ ಹರಿಸಿದೆ.

ಸರ್ಕಾರ ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಪ್ರೈ.ಲಿ ಕಂಪನಿಯಿಂದ ನೇರವಾಗಿ ಕಾರು ಖರೀದಿಸಲಿದೆ.

2022ರ ಡಿಸೆಂಬರ್‌ನಲ್ಲಿ ಈ ಕಾರು ದೇಶದ ಮಾರುಕಟ್ಟೆಗೆ 8 ವಿವಿಧ ಮಾದರಿಯಲ್ಲಿ ಬಿಡುಗಡೆಯಾಗಿದೆ. 18.30 ಲಕ್ಷ ರೂ.ನಿಂದ ಆರಂಭಗೊಂಡು ಟಾಪ್‌ ಮಾಡೆಲ್‌ ಕಾರಿಗೆ 30.26 ಲಕ್ಷ ದರ ಇದೆ. ಇದು ಎಕ್ಸ್‌ ಶೋ ರೂಮ್‌ ಬೆಲೆಯಾಗಿದ್ದು ಜೆಎಸ್‌ಟಿ, ರಸ್ತೆ ತೆರಿಗೆ ಸೇರಿದಾಗ ಜಾಸ್ತಿಯಾಗುತ್ತದೆ.

error: Content is protected !!