December 21, 2024

Newsnap Kannada

The World at your finger tips!

kajol

Picture credits: Instagram

ಅಂಡರ್ ವಾಟರ್ ರೆಸಾರ್ಟ್‌ನಲ್ಲಿ ನಟಿ ಕಾಜಲ್ – ಗೌತಮ್ ಹನಿಮೂನ್.!

Spread the love

ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಮತ್ತು ಪತಿ ಗೌತಮ್ ಕಿಚಲು ಹನಿಮೂನ್ ಖುಷಿಯಲ್ಲಿದ್ದಾರೆ.
ಮಾಲ್ಡೀವ್ಸ್ ನಲ್ಲಿರುವ ಅಂಡರ್ ವಾಟರ್ ರೆಸಾರ್ಟ್ ಹನಿಮೂನ್ ಗೆ ಹೋಗುವವರಿಗೆ ಬ್ಯೂಟಿಫುಲ್‌ ಸ್ಪಾಟ್ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

kajol1

ಮಾಲ್ಡೀವ್ಸ್ ನಲ್ಲಿರುವ ಕಾಜಲ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಾಲ್ಡೀವ್ಸ್​ ಇತ್ತೀಚೆಗೆ ಸೆಲೆಬ್ರಿಟಿಗಳ ವೆಕೇಷನ್​ ಹಾಟ್​ ಸ್ಪಾಟ್​ ಆಗಿದೆ. ಒಬ್ಬರ ಹಿಂದೆ ಒಬ್ಬರಂತೆ ಸ್ಟಾರ್​ಗಳು ರಜೆ ಕಳೆಯಲು ಮಾಲ್ಡೀವ್ಸ್​ಗೆ ಹೋಗುತ್ತಿದ್ದಾರೆ.

ಸದ್ಯ ದಿಶಾ ಪಟಾನಿ, ಪ್ರಣೀತಾ ಸುಭಾಷ್​, ಟೈಗರ್​ ಶ್ರಾಫ್​ ಮಾಲ್ಡೀವ್ಸ್​ನಲ್ಲೇ ಇದ್ದಾರೆ. ಈ ಹಿಂದೆ ಸಾರಾ ಅಲಿಖಾನ್​, ನೇಹಾ ಧೂಪಿಯಾ, ಮೌನಿ ರಾಯ್​ ಸೇರಿದಂತೆ ಹಲವಾರು ಮಂದಿ ಮಾಲ್ಡೀವ್ಸ್​ನಲ್ಲಿ ರಿಲ್ಯಾಕ್ಸ್​ ಮಾಡಿ ಬಂದಿದ್ದಾರೆ.

ಒಂದು ರಾತ್ರಿಗೆ 40 ಲಕ್ಷ !

ಟೂರಿಸ್ಟ್​ ಸ್ಪಾಟ್​ ಆಗಿರುವ ಮಾಲ್ಡೀವ್ಸ್​ನಲ್ಲಿ ರಜೆ ಕಳೆಯಬೇಕಾದರೆ ಖರ್ಚು ಸಹ ಅಷ್ಟೇ ಆಗುತ್ತದೆ. ಕಾಜಲ್​ ಅಗರ್ವಾಲ್​ ಹನಿಮೂನ್​ ಪ್ಯಾಕೇಜ್​ಗಾಗಿ 40 ಲಕ್ಷ ರು ಗಳನ್ನು ಒಂದು ರಾತ್ರಿಗಾಗಿ ಖರ್ಚು ಮಾಡಿದ್ದಾರಂತೆ!

ಈ ದಂಪತಿಗಳು ಕಾನ್ರಾಡ್ ಮಾಲ್ಡೀವ್ಸ್ ರಂಗಾಲಿ ದ್ವೀಪದಲ್ಲಿರುವ ಮಾಲ್ಡೀವ್ಸ್ ನ ನೀರೊಳಗಿನ ಎರಡು ಹಂತದ ರೆಸಾರ್ಟ್ ನಲ್ಲಿ ತಂಗಿದ್ದಾರೆ.

ಕಾಜಲ್​ ಅಗರ್ವಾಲ್​ ವಿವಾಹದ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್​ ಆಗಿದ್ದವು. ಇವುಗಳ ಜೊತೆಗೆ ಈಗ ಅವರ ಹನಿಮೂನ್​ ಪ್ರವಾಸದ ಚಿತ್ರಗಳು ಸೇರಿಕೊಂಡಿವೆ. ಈ ಜೋಡಿ ತಮ್ಮ ಹನಿಮೂನ್​ ಪ್ರವಾಸಕ್ಕಾಗಿ 40 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

kajol3

ಸದ್ಯ ಮದುವೆ ಜೀವನವನ್ನು ಎಂಜಾಯ್ ಮಾಡುತ್ತಿರುವ ಕಾಜಲ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಅಭಿನಯದ ಇಂಡಿಯನ್-2, ಮುಂಬೈ ಸಾಗಾ, ಸೇರಿದಂತೆ ಸಾಕಷ್ಟು ಸಿನಿಮಾಗಳು ಕಾಜಲ್ ಬಳಿ ಇವೆ. ಇನ್ನೂ ಸಿನಿಮಾ ಜೊತೆಗೆ ವೆಬ್ ಸೀರಿಸ್ ಲೋಕಕ್ಕು ಕಾಲಿಟ್ಟಿದ್ದಾರೆ. ಲೈವ್ ಟೆಲಿಕಾಸ್ಟ್ ಎಂಬ ವೆಬ್ ಸೀರಿಸ್ ನಲ್ಲಿ ಕಾಜಲ್ ನಟಿಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!