ಫೂಟ್ ಮಸಾಜರ್​ನಲ್ಲಿ ಬಚ್ಚಿಟ್ಟಿದ್ದ 1.25 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಕ್ಕೆ

Team Newsnap
1 Min Read

ಬೆಂಗಳೂರು ನಗರದ ವಿದೇಶಿ ಅಂಚೆ ಕಚೇರಿಯ ಕಸ್ಟಮ್ಸ್ ಕಮಿಷನರೇಟ್ ಅಧಿಕಾರಿಗಳು ನಡೆಸಿದ ಕಾರ್ಯಚರಣೆಯಲ್ಲಿ ಅಕ್ರಮವಾಗಿ  ಎಂಡಿಎಂಎ ಮಾದಕ ದ್ರವ್ಯ  ಪತ್ತೆ ಮಾಡಿದ್ದಾರೆ.

ಫ್ರಾನ್ಸ್ ದೇಶದಿಂದ ಭಾರತಕ್ಕೆ ಕಳ್ಳಸಾಗಾಣಿಕೆಗೆ ಯತ್ನ ಮಾಡಲಾಗಿದೆ. ಫೂಟ್ ಮಸಾಜರ್​ನಲ್ಲಿ ಬಚ್ಟಿಟ್ಟು ಎಂ.ಡಿ.ಎಂ.ಎ ಮಾದಕ ದ್ರವ್ಯ  ಸಾಗಿಸುವ ಪ್ರಯತ್ನ ನಡೆದಿತ್ತು.

ವಿದೇಶಿ ಅಂಚೆ ಕಚೇರಿ ಕಸ್ಟಮ್ಸ್ ಕಮಿಷನರೇಟ್ ಅಧಿಕಾರಿಗಳು ಅನುಮಾನದ ಮೇಲೆ ಈ ಪಾರ್ಸಲ್ ತಪಾಸಣೆ ನಡೆಸಿದರು. ಫ್ರಾನ್ಸ್​ನಿಂದ ಬಂದಿದ್ದ ಈ ಪಾರ್ಸಲ್​ನಲ್ಲಿ 2.345 ಕೆಜಿ ತೂಕದ 1.25 ಕೋಟಿ ಮೌಲ್ಯದ  ಎಂಡಿಎಂಎ  ಮಾದಕ  ದ್ರವ್ಯ  ಪತ್ತೆಯಾಗಿದೆ. ಕಸ್ಟಮ್ಸ್ ಕಮಿಷನರೇಟ್ ಅಧಿಕಾರಿಗಳು  ಪ್ರಕರಣ  ದಾಖಲು ಮಾಡಿದ್ದಾರೆ.

ವಿದೇಶಗಳಿಂದ ಮೇಲಿಂದ ಮೇಲೆ ಡ್ರಗ್ಸ್ ಮಾರಾಟ ಮಾಡಲು ಯತ್ನಗಳು ನಡೆಯುತ್ತಿದ್ದು ಸರ್ಕಾರ ಮತ್ತಷ್ಟು ಕಾನೂನು ಬಿಗಿಗೊಳಿಸಿ, ತನಿಖೆ ಚುರುಕುಗೊಳಿಸುವ ಅವಶ್ಯಕತೆ ಹೆಚ್ಚಾಗಿದೆ. ಫ್ರಾನ್ಸ್, ರಷ್ಯಾ, ಜರ್ಮನಿ ಸೇರಿದಂತೆ ಹಲವು ದೇಶಗಳಿಂದ ಬರುವ ಡ್ರಗ್ಸ್ ಮಾರಾಟ ಜಾಲ ಹೆಚ್ಚುತ್ತಿರುವ ಆತಂಕ ಮನೆಮಾಡಿದೆ. ಇದರಿಂದ ಅಂತರ್ ರಾಷ್ಟ್ರೀಯ ಭದ್ರತೆ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಬೇರೆ ದೇಶಗಳಿಂದ ಡ್ರಗ್ಸ್ ಕಳಿಸುತ್ತಿರುವುದು ನಿಜ ಅಂದ ಮೇಲೆ ಇಲ್ಲಿ ಅದನ್ನ ಪಡೆದುಕೊಳ್ಳಲು ಇಲ್ಲಿ ಯಾರಾದ್ರೂ ಇರಲೇಬೇಕು. ಅಂತಹ ಕೈಗಳಿಗೆ ಕೋಳ ತೊಡಿಸಿ ಚೈನ್ ಲಿಂಕ್ ಕಟ್ ಮಾಡುವ ಕೆಲಸ ಆಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

TAGGED: , ,
Share This Article
Leave a comment