December 23, 2024

Newsnap Kannada

The World at your finger tips!

8c69cb56 fa75 4560 a62e 3574ee90a6b0

ಲಾರಿಗೆ ಬೈಕ್ ಡಿಕ್ಕಿ – ಅಕ್ಕ, ತಮ್ಮ ಸ್ಥಳದಲ್ಲೇ ಸಾವು

Spread the love

ಲಾರಿ ಡಿಕ್ಕಿಯಾಕಿ ಬೈಕಿನಲ್ಲಿ ತೆರಳುತ್ತಿದ್ದ ಅಕ್ಕ, ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ದೇಸೂರು ಬಳಿ ನಡೆದಿದೆ.

ರೇಣುಕಾ ತೇಗೂರ್(25), ಕಲ್ಮೇಶ್ ಕೊಳವಿ(19) ಮೃತ ದುರ್ದೈವಿಗಳು. ದೇಸೂರ್‍ನಿಂದ ಕಮಲ್ ನಗರದತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಓವರ್‍ಟೆಕ್ ಮಾಡುವ ವೇಳೆ ಲಾರಿಗೆ ಬೈಕ್ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಲಾರಿ ಚಕ್ರದಡಿ ಸಿಲುಕಿ ಅಕ್ಕ-ತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!