January 15, 2025

Newsnap Kannada

The World at your finger tips!

WhatsApp Image 2023 08 01 at 8.30.00 PM

ನಾಳೆಯಿಂದ ಲಾಲ್ ಬಾಗ್ ಪುಷ್ಪ ಪ್ರದರ್ಶನ (Flower Show) ಆರಂಭ : ಸಿಎಂ ಸಿದ್ದರಾಮಯ್ಯ ಚಾಲನೆ

Spread the love

ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬರುತ್ತಿದೆ. ನಾಳೆ ಸಂಜೆ 6 ಗಂಟೆಗೆ ಸಿಎಂ‌ ಸಿದ್ದರಾಮಯ್ಯನವರು ಲಾಲ್ ಬಾಗ್ ಶೋ ಉದ್ಘಾಟಿಸಲಿದ್ದಾರೆ.

76 ನೇ ಸ್ವತಂತ್ರ ಮಹೋತ್ಸವದ ಹಿನ್ನೆಲೆಯಲ್ಲಿ 214 ನೇ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ.‌ ಆ.4ರಿಂದ ಆಗಸ್ಟ್ 15ರ ವರೆಗೆ ಫ್ಲವರ್ ಶೋ ನಡೆಯಲಿದೆ. ಒಟ್ಟು 10 ದಿನಗಳ ಕಾಲ ಫ್ಲವರ್ ಶೋ ಇರಲಿದೆ.

ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಆದಷ್ಟು ಜನರು ಮೆಟ್ರೋ ಹಾಗೂ ಬಿಎಂಟಿಸಿ ಬಸ್ಸುಗಳಿಂದಲೇ ಬಂದರೆ ಟ್ರಾಫಿಕ್ ಕಡಿಮೆಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಮನವಿ ಮಾಡಿದೆ.

ಜನರಿಗೆ ಯಾವುದೇ ಸಮಸ್ಯೆಗಳಗಾದಂತೆ ಬಿಗಿ ಬಂದೋ ಬಸ್ತ್ ಮಾಡಲು ತೋಟಾಗಾರಿಕೆ ಇಲಾಖೆ ನಿರ್ಧರಿಸಿದೆ. ಪ್ಲವರ್ ಶೋ ನಡೆಯುವ 10 ದಿನಗಳ‌ ಕಾಲ ಪ್ರತಿದಿನ 30 ಜನ ಪೋಲಿಸರು ಹಾಗೂ 200 ಜನ ತೋಟಗಾರಿಕಾ ಸಿಬ್ಬಂದಿಯನ್ನ ನೇಮಿಸಲಾಗಿದೆ. ಯಾರಿಗೂ ಏನೂ ಸಮಸ್ಯೆಯಾಗದಂತೆ ಹೆಲ್ತ್ ಕೇರ್ ಸೆಂಟರ್, ಎರಡು ಅಂಬುಲೆನ್ಸ್, ಮಹಿಳೆಯರ ಶಿಬಿರಗಳನ್ನ ಸಹ ಮಾಡಲಾಗಿದೆ.

ಫ್ಲವರ್ ಶೋಗೆ ಶಾಲಾ ಮಕ್ಕಳಿಗೆ ಫ್ರೀ ಇರಲಿದ್ದು, ಶಾಲಾ ಮಕ್ಕಳಿಗೆ ಕಾಂಫಿಟೇಷನ್ ಆಯೋಜಿಸಲಾಗಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಿಂದ ಒಟ್ಟು ನಾಲ್ಕೂ ಗೇಟ್ ಗಳಲ್ಲಿ ಜನರಿಗೆ ಎಂಟ್ರಿಗೆ ಅವಕಾಶ ನೀಡಲಾಗಿದೆ. ಫ್ಲವರ್ ಶೋ ಬರುವವರಿಗೆ ಎಂಟ್ರಿ ಫೀಜ್ ದೊಡ್ಡವರಿಗೆ 70 ರೂ ಹಾಗೂ ಮಕ್ಕಳಿಗೆ 30 ರುಪಾಯಿ ನಿಗದಿ ಮಾಡಿದ್ದು, 200 ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗಿದೆ.

ಈ ಬಾರಿಯ ಪ್ರದರ್ಶನದಲ್ಲಿ ಸ್ವದೇಶಿ ಹೂಗಳಿಗೆ ಹೆಚ್ಚಿನ ಪ್ರಮುಖ್ಯತೆ ನೀಡಲಾಗುತ್ತಿದ್ದು, ಈಗಾಗಲೇ 7 ಲಕ್ಷದಷ್ಟು ಹೂಗಳನ್ನ ಲಾಲ್ ಬಾಗ್ ನಾ ನರ್ಸರಿಯಲ್ಲಿ ಬೆಳೆಸಲಾಗಿದೆ.‌

ಫ್ಲವರ್ ಶೋ ಗೆ ಅಂದಾಜು 13 ರಿಂದ 15 ಲಕ್ಷದಷ್ಟು ಹೂಗಳು ಬೇಕಾಗುವ ಸಾಧ್ಯತೆ ಇದ್ದು, ಇನ್ನು ಉಳಿದ 8 ಲಕ್ಷದಷ್ಟು ಹೂಗಳನ್ನ ನಮ್ಮ ರಾಜ್ಯ ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶ, ಊಟಿ, ನಂದಿಗಿರಿಧಾಮ, ಕೆಮ್ಮಣ್ಣುಗುಂಡಿ ಗಿರಿಧಾಮಗಳಿಂದ ಹೂಗಳನ್ನ ತರಿಸಿಕೊಳ್ಳಲಾಗಿದೆ.

Copyright © All rights reserved Newsnap | Newsever by AF themes.
error: Content is protected !!