November 20, 2024

Newsnap Kannada

The World at your finger tips!

athm

ತನ್ನ ಮೂರು ಮಕ್ಕಳನ್ನು ಕೊಂದು, ತಾನೂ ನೇಣಿಗೆ ಶರಣಾದ ತಂದೆ

Spread the love

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಆ ತಂದೆಗೆ ಅದೇನು ಸಮಸ್ಯೆ ಇತ್ತೋ ಗೊತ್ತಿಲ್ಲ. ತನ್ನ 3 ಮೂರು ಮಕ್ಕಳನ್ನು ನೇಣಿಗೆ ಹಾಕಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘೋರ ಕೃತ್ಯ ನಡೆದಿರುವುದು ಬೆಂಗಳೂರಿನ ಮೈಕೋ ಲೇಔಟ್ ನ ರಮಣಶ್ರೀ ಎನ್ ಕ್ಲೇವ್ ನಲ್ಲಿ. ಈ ಅಪಾರ್ಟಮೆಂಟ್ ನ ಸೆಕ್ಯುರಿಟಿ ಗಾರ್ಡ್ ಆಗಿದ್ದ ಜನಕರಾಜ್ ಬಿಸ್ತಾ (32) ಈ ಕೃತ್ಯ ಎಸಗಿದ ಅಪರಾಧಿ.

ಬೆಳಿಗ್ಗೆಯಿಂದ ಹೊರಗಡೆ ಎಲ್ಲಾ ಓಡಾಡಿದ ಜನಕರಾಜ್ 11.30 ರ ಸುಮಾರಿಗೆ ತನ್ನ ಮೂವರು ಮಕ್ಕಳಾದ ಸರಸ್ವತಿ (14) ಹೇಮಾವತಿ(9) ಹಾಗೂ ರಾಜ್ ಕುಮಾರ್ (3) ರನ್ನು  ನೇಣಿಗೆ ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಲ್ವರ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಮೈ ಕೋ ಲೆಔಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಂಡತಿಯೂ ಆತ್ಮಹತ್ಯೆ

ಜೀವನದಲ್ಲಿ ಜಿಗುಪ್ಸೆ ಬಂದು ಅತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಎರಡು ತಿಂಗಳ ಹಿಂದೆ ಜನಕರಾಜ್ ಪತ್ನಿ ನಂದಾದೇವಿ ಸಹ ಆತ್ಮಹತ್ಯೆಗೆ ಶರಣಾಗಿದ್ದಳು. ಮಕ್ಕಳನ್ನು ನೋಡಿಕೊಳ್ಳಲಾರದೇ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಜನಕರಾಜ್ ಮಕ್ಕಳನ್ನು ನೇಣಿಗೆ ಹಾಕಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Copyright © All rights reserved Newsnap | Newsever by AF themes.
error: Content is protected !!