December 23, 2024

Newsnap Kannada

The World at your finger tips!

tottilu

ಚಿರು – ಮೇಘನಾ ಮಗುವಿಗೆ ತೊಟ್ಟಿಲು ಶಾಸ್ತ್ರ – ಖುಷಿಯಲ್ಲಿ ತೇಲುವ ತಾಯಿ

Spread the love

ಮೇಘನಾ ರಾಜ್ ಮಗನಿಗೆ ಇಂದು ತೊಟ್ಟಿಲ ಶಾಸ್ತ್ರ ಕಾರ್ಯಕ್ರಮ ಮಾಡಲಾಯಿತು. ತವರು ಮನೆ ಕಡೆಯಿಂದ ತೊಟ್ಟಿಲ ಶಾಸ್ತ್ರ ಮಾಡಲಾಯಿತು.

ಕಾರ್ಯಕ್ರಮದ ನಂತರ, ಬಹಳ ದಿನಗಳು ಆದಮೇಲೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೇಘನಾ ರಾಜ್.

ಮಗನಿಗೆ ಇನ್ನೂ ಹೆಸರು ಇಟ್ಟಿಲ್ಲ. ಚಿರು ಮಗನಲ್ವಾ ಹಾಗಾಗಿ ವಿಶೇಷವಾದ ಹೆಸರನ್ನು ಇಡಬೇಕೆಂದಿದ್ದೇವೆ. ಆದರೆ ಹೆಸರು ಜಾತಕ ಪ್ರಕಾರವೇ ಇಡುತ್ತೇವೆ. ಒಳ್ಳೆಯ ಹೆಸರು ಆಗಿರಬೇಕು, ಕರೆಯಲೂ ಸಹ ಚೆನ್ನಾಗಿರಬೇಕು, ಶೀಘ್ರದಲ್ಲಿಯೇ ಸಮಯ ನೋಡಿಕೊಂಡು ನಾಮಕರಣ ಮಾಡುತ್ತೇವೆ ಎಂದರು ಮೇಘನಾ ರಾಜ್.

ಮಗನ ಬಗ್ಗೆ ಮಾತನಾಡಿದ ಮೇಘನಾ, ನನ್ನ ಮಗ ಅಳುವುದು ಬಹಳ ಕಡಿಮೆ, ನಗುತ್ತಲೇ ಇರುತ್ತಾನೆ, ನಿದ್ದೆಯಲ್ಲಿಯೂ ನಗುತ್ತಿರುತ್ತಾನೆ. ಮಗನನ್ನು ನೋಡಿದವರೆಲ್ಲಾ ಚಿರು ಸರ್ಜಾ ಪಡಿಯಚ್ಚು ಎನ್ನುತ್ತಿದ್ದಾರೆ ಎಂದು ನಗುತ್ತಾ ಹೇಳಿದರು ಮೇಘನಾ.

ಇಂದು ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ, ಇದು ತಾಯಿ ಮನೆ ಕಡೆಯಿಂದ ಮಾಡುವ ಶಾಸ್ತ್ರ. ಮಗನಿಗೆ ಗದಗದಿಂದ ವಿಶೇಷ ತೊಟ್ಟಿಲು ತರಿಸಿದ್ದೆವು. ನಾಮಕರಣ ಆದಷ್ಟು ಬೇಗ ಒಳ್ಳೆಯ ಸಮಯ, ಮುಹೂರ್ತ ನೋಡಿ ಮಾಡುತ್ತೇವೆ ಎಂದಿದ್ದಾರೆ ಮೇಘನಾ.

ತಂದೆ ಸುಂದರ್‌ ರಾಜ್ ಬಗ್ಗೆ ಮಾತನಾಡಿದ ಮೇಘನಾ, ‘ಅಪ್ಪ ತಿರುಪತಿಗೆ ಹೋಗಿದ್ದಿದ್ದು ನನಗಾಗಿ ಅಲ್ಲ, ಮೊಮ್ಮಗನಿಗಾಗಿ ಹರಕೆ ತೀರಿಸಲು ಹೋಗಿದ್ದರು’ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!