ಹಾವೇರಿ : ನಿರ್ಮಿತಿ ಕೇಂದ್ರದ ಯೋಜನಾ ಇಂಜಿನಿಯರ್ ವಾಗೀಶ ಶೆಟ್ಟರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ 10 ಇಂಚಿನ ಜಿಂಕೆ ಕೊಂಬು ಸೇರಿ 4.75 ಕೋಟಿ ರು ಮೌಲ್ಯದ ಚಿನ್ನಾಭರಣ, ಮನೆ, ಸೈಟು ಸೇರಿ ಇತರ ಆಸ್ತಿಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ
ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ ಅವರ ನೇತೃತ್ವದಲ್ಲಿ ವಾಗೀಶ ಶೆಟ್ಟರ್ ಅವರ ರಾಣೆಬೆನ್ನೂರಿನ ಬನಶಂಕರಿ ನಗರದಲ್ಲಿರುವ ಮನೆ, ಕಚೇರಿ ಹಾಗೂ ಹಾವೇರಿಯ ಜಿಲ್ಲಾಡಳಿತ ಭವನ ನಿರ್ಮಿತಿ ಕೇಂದ್ರದ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ದಾಳಿ ವೇಳೆ 10 ಇಂಚಿನ ಜಿಂಕೆ ಕೊಂಬು, ಅರ್ಧ ಕೆ.ಜಿ. ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ಆಭರಣ, 18.30 ಲಕ್ಷ ರೂ. ನಗದು, ರಾಜ್ಯದ ವಿವಿಧೆಡೆ ಇರುವ 8 ಮನೆ, 16 ಸೈಟು, 65 ಎಕರೆ ಜಮೀನು ಹೊಂದಿರುವ ದಾಖಲೆಗಳು ಸೇರಿ ಅಂದಾಜು 4.75 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಜತೆಗೆ ಹಣ ಏಣಿಕೆ ಮಾಡುವ ಯಂತ್ರ ಕೂಡ ವಶಪಡಿಸಿಕೊಳ್ಳಲಾಗಿದೆ.
ವಾಗೀಶ ಶೆಟ್ಟರ್ ಹಾವೇರಿ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ, ರಾಣೆಬೆನ್ನೂರ ತಾಲೂಕಿನಲ್ಲಿಯೆ ಅತಿ ಹೆಚ್ಚು ಸರ್ಕಾರಿ ಶಾಲಾ ಕಟ್ಟಡ, ಹಾಸ್ಟೆಲ್ ಸೇರಿ ಇತರ ಕಾಮಗಾರಿಗಳನ್ನು ಮಾಡುತ್ತಿದ್ದರು. ವಾಗೀಶ ಜತೆ ಆತನ ಸಹೋದರ ಕೂಡ ಸಾಥ್ ನೀಡುತ್ತಿದ್ದ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.ಜೆಡಿಎಸ್ ವಿಸರ್ಜನೆ ಪ್ರಶ್ನೆಗೆ ಎಚ್‌ಡಿಕೆ ಕಡಕ್ ಉತ್ತರ
ರಾಣೆಬೆನ್ನೂರ ಆರ್‌ಎಫ್‌ಓ ಕಿರಣಕುಮಾರ್ ಕಲ್ಲಮ್ಮನವರ, ವಾಗೀಶ ಮನೆಯಲ್ಲಿ ದೊರೆತ್ತಿರುವ ಜಿಂಕೆ ಕೊಂಬು ಬಹಳ ವರ್ಷದ ಹಿಂದಿನದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸಿದ ಬಳಿಕ ಅದರ ಹಿನ್ನೆಲೆ ತಿಳಿಯಲಿದೆ.
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
- ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
- ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು