January 2, 2025

Newsnap Kannada

The World at your finger tips!

98a20bac cb09 44cc b541 1d05128badba

ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿ ಸ್ಫೋಟ; 24 ಗಂಟೆಯಾದರೂ ಗೋಡೌನ್​ನಲ್ಲಿ ಆರಿಲ್ಲ ಬೆಂಕಿ

Spread the love

ಬೆಂಗಳೂರಿನ ಬಾಪೂಜಿ ನಗರದ ಬಳಿ ಇರುವ ಹೊಸಗುಡ್ಡದಹಳ್ಳಿಯ ರೇಖಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ಸಂಭವಿಸಿದ ಭಾರಿ ಬೆಂಕಿ ಇನ್ನೂ ಆರಿಲ್ಲ.

ಸ್ಥಳೀಯವಾಗಿ ಸ್ಯಾನಿಟೈಸರ್ ಮತ್ತು ಪೇಂಟ್ ರಿಮೂವ್ ಮಾಡುವ ಕೆಮಿಕಲ್ ತಯಾರಿಸುತ್ತಿದ್ದ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆ ನಡೆದು 24 ಗಂಟೆಗಳಾದರೂ ಇನ್ನೂ ಪೂರ್ತಿಯಾಗಿ ಬೆಂಕಿಯನ್ನು ಆರಿಸಲು ಸಾಧ್ಯವಾಗಿಲ್ಲ. ಇಂದು ಬೆಳಗ್ಗೆ ಮತ್ತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.

ಲೋಕಲ್ ಆಗಿ ಸ್ಯಾನಿಟೈಸರ್ ಹಾಗೂ ಪೈಂಟ್ ರಿಮೂವಲ್ ಕೆಮಿಕಲ್ ಅನ್ನು ತಯಾರಿಸುತ್ತಿದ್ದ ಕಂಪನಿ ಇದಾಗಿದ್ದು, ಈ ಘಟನೆ ನಡೆಯುತ್ತಿದ್ದಂತೆ ಮಾಲೀಕ ನಾಪತ್ತೆಯಾಗಿದ್ದಾರೆ. ಸ್ಯಾನಿಟೈಸರ್ ಮತ್ತು ಹ್ಯಾಂಡ್ ವಾಶ್ ಗೆ ಬಳಸುವ ಕೆಮಿಕಲ್ ಬ್ಯಾರಲ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ. ಈ ಘಟನೆ ನಡೆದಾಗ ರೇಖಾ ಕೆಮಿಕಲ್ಸ್​ ಫ್ಯಾಕ್ಟರಿಯಲ್ಲಿ ಪೇಂಟಿಂಗ್​ಗೆ ಬಳಸುವ 1800 ಕ್ಯಾನ್ ಇತ್ತು. ಆ ಕ್ಯಾನ್​ಗಳು ಒಂದಕ್ಕೊಂದು ಸ್ಪೋಟಗೊಂಡು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಕುಸಿದು ಬಿದ್ದಿರುವ ಕೆಮಿಕಲ್ ಫ್ಯಾಕ್ಟರಿಯ ಗೋಡೌನ್ ಅವಶೇಷಗಳ ಮಧ್ಯೆ ಇನ್ನೂ ಬೆಂಕಿ ಹೊತ್ತಿ ಉರಿಯುತ್ತಿದೆ. ಹೊಸಗುಡದಹಳ್ಳಿಯ ರೇಖಾ ಕೆಮಿಕಲ್ಸ್ ಗೋಡೌನ್​ನಲ್ಲಿ ನಿನ್ನೆಯಿಂದಲೂ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಎರಡು ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಗೋಡೌನ್ ಪಕ್ಕದಲ್ಲಿದ್ದ ನಾಲ್ಕೈದು ಮನೆಗಳ‌ ಜನರನ್ನು ಸಂಬಂಧಿಕರ ಮನೆಗೆ ಶಿಫ್ಟ್​ ಮಾಡಲಾಗಿದೆ. ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿದೆ.

ಇಂದು ಬೆಳಗ್ಗೆಯಿಂದ ಮತ್ತೆ ಬೆಂಕಿ ನಂದಿಸಲು ಕಾರ್ಯಾಚರಣೆ ಶುರು ಮಾಡಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಗೋಡೌನ್‌ ತಳ ಭಾಗದಲ್ಲಿ ಬೆಂಕಿ ಉರಿಯುತ್ತಿದ್ದು, ನಂದಿಸುವ ಕಾರ್ಯ‌ ನಡೆಸಲಾಗುತ್ತಿದೆ. ಗೋಡೌನ್ ಪಕ್ಕದಲ್ಲಿ ಖಾಲಿ ಜಾಗವಿದ್ದುದರಿಂದ ಬೆಂಕಿ ನಂದಿಸಲು ಸುಲಭವಾಯ್ತು. ಬೆಂಕಿ ಬಿದ್ದ ಕಟ್ಟಡದ ಪಕ್ಕದಲ್ಲಿ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆ ಇತ್ತು. ಬೆಂಕಿಯಿಂದ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿರೋ ಪ್ಲಾಸ್ಟಿಕ್‌ ಸುಟ್ಟು 45 ಲಕ್ಷ ರೂ. ನಷ್ಟವಾಗಿದೆ.

ಅಕ್ಕಪಕ್ಕದ ನಾಲ್ಕು ಬಿಲ್ಡಿಂಗ್ ಗಳಲ್ಲಿನ ಸೋಲಾರ್ , ವಾಟರ್ ಟ್ಯಾಂಕ್​ಗಳು ಬೆಂಕಿಗಾಹುತಿಯಾಗಿವೆ. ಮನೆಯಿಂದ ಹೊರಗಡೆ ಓಡುವಾಗ ಸುಮಾರು 15 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಕೈ, ಕಾಲು, ಹಾಗೂ ತಲೆಗೆ ಬೆಂಕಿ ತಾಕಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ನಿನ್ನೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಾಗ ಇದ್ಧಕ್ಕಿದ್ಧಂತೆ ಕಟ್ಟಡ ಕುಸಿದಿತ್ತು. ಕೆಮಿಕಲ್ ತುಂಬಿರುವ ನೂರಾರು ಬ್ಯಾರಲ್ ಗಳು ಸ್ಪೋಟಗೊಂಡ ಪರಿಣಾಮ ಈ ಅನಾಹುತ ನಡೆದಿತ್ತು. ಕಟ್ಟಡ ಕುಸಿದಿದ್ದರಿಂದ  ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ರೇವಣ ಸಿದ್ದಪ್ಪ ಮತ್ತು ಸಿದ್ದೇಗೌಡ ಇಬ್ಬರು ಅಧಿಕಾರಿಗಳ ಕಾಲಿಗೆ ಬೆಂಕಿ ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೆಮಿಕಲ್ ಫ್ಯಾಕ್ಟರಿಯ ಗೋಡೌನ್ ಪಕ್ಕದಲ್ಲಿರುವ ಮೂರು ಮನೆಗಳಿಗೆ ಹಾನಿ‌ಯಾಗಿದೆ. 10 ಬಿಲ್ಡಿಂಗ್ ನಲ್ಲಿ ವಾಸವಿದ್ದ ಹದಿನೈದಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ‌ಮಾಡಲಾಗಿದೆ. ಪ್ರಮುಖವಾಗಿ ಗೋಡೌನ್ ಹಿಂಭಾಗದಲ್ಲಿದ್ದ ಮೂರು ಮನೆ ಸಂಪೂರ್ಣ ಹಾನಿಯಾಗಿವೆ. ಎರಡು ಮನೆಗೆ ಬೆಂಕಿಯ ತೀವ್ರತೆಗೆ ಹೊಗೆ ತಗುಲಿದ್ದು ಬಣ್ಣ ಪೂರ್ತಿ ಕಪ್ಪಾಗಿದೆ. ಹೊಸ ಗುಡ್ಡದಹಳ್ಳಿಯ ಗೋಡೌನ್ ಪ್ರದೇಶದ ಏರಿಯಾ ಅರ್ಧ ರೆಸಿಡೆನ್ಸಿಯಲ್ ಏರಿಯಾವಿದ್ದು, ರಸ್ತೆಯ ಡೆಡ್ ಎಂಡ್ ಗೆ ಕೆಮಿಕಲ್ ಫ್ಯಾಕ್ಟರಿ ಮತ್ತು ಪ್ಲಾಸ್ಟಿಕ್ ಫ್ಯಾಕ್ಟರಿ ಇದೆ. ಸದ್ಯ ಪಕ್ಕದಲ್ಲಿರೋ ಪ್ಲಾಸ್ಟಿಕ್ ಫ್ಯಾಕ್ಟರಿಯೂ ಸಂಪೂರ್ಣ ಭಸ್ಮವಾಗಿದೆ. 8 ವಾಹನಗಳಿಗೆ ಸುಟ್ಟು ಕರಕಲಾಗಿವೆ.

Copyright © All rights reserved Newsnap | Newsever by AF themes.
error: Content is protected !!