ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ ದುರಂತ: 6 ಮಂದಿ ವಿರುದ್ಧ ಕೇಸ್ ಅಂಬಿಗ ನಾಪತ್ತೆ?

Team Newsnap
1 Min Read

ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ ವೇಳೆ ನದಿಯಲ್ಲಿ ಮುಳುಗಿ ವಧು-ವರ ಜಲ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಂಬಿಗ ನಾಪತ್ತೆಯಾಗಿದ್ದಾನೆ.

ಪ್ರೀ ವೆಡ್ಡಿಂಗ್ ಪೋಟೋಶೂಟ್ ವೇಳೆ ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ ಹಸೆಮಣೆ ಏರಬೇಕಿದ್ದ ಶಶಿಕಲಾ (20) ಹಾಗೂ ಚಂದ್ರು (30) ಸೋಮವಾರ ಮೃತಪಟ್ಟಿದ್ದರು.

ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಇವರ ವಿವಾಹಕ್ಕೆ ಕಳೆದ ವಾರವಷ್ಟೇ ನಿಶ್ಚಿತಾರ್ಥ ನಂತರ ಪ್ರೀ ವೆಡ್ಡಿಂಗ್ ಶೂಟ್ ಮಾಡಿದ ವೇಳೆ ದುರ್ಘಟನೆ ನಡೆದಿತ್ತು.
ನ. 22 ರಂದು ಇವರ ವಿವಾಹ ಜರುಗಬೇಕಿತ್ತು.

ಫೋಟೊಗ್ರಾಫರ್ ಹಾಗೂ ಇಬ್ಬರು ಸಂಬಂಧಿಕರೊಂದಿಗೆ ಫೋಟೊ ತೆಗೆಸಿಕೊಳ್ಳಲು ಇವರು ಇಲ್ಲಿಗೆ ಬಂದಿದ್ದರು. ಮೀನು ಹಿಡಿಯಲು ಬಳಸುವ ಸಣ್ಣದೊಂದು ತೆಪ್ಪದ ಮೇಲೆ ಕುಳಿತ ಇವರು ಅಂಬಿಗನೊಂದಿಗೆ 10 ಅಡಿ ದೂರಕ್ಕೆ ಹೋಗಿದ್ದಾರೆ. ಅಲ್ಲಿ ಅಕ್ಕಪಕ್ಕ ಕುಳಿತು ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡ (ಟೈಟಾನಿಕ್ ಹಗ್ಗ್ ) ರೀತಿಯಲ್ಲಿ ಕ್ಯಾಮೆರಾಗೆ ಫೋಸ್‌ ನೀಡುತ್ತಿದ್ದ ವೇಳೆ ಒಂದೇ ಕಡೆ ಭಾರ ಹೆಚ್ಚಾಗಿ ತೆಪ್ಪ ಮುಗುಚಿದೆ. ಕೂಡಲೇ ಅಂಬಿಗ ಈಜಿ ದಡ ಸೇರಿದ್ದಾನೆ. ಇವರಿಬ್ಬರೂ ಮುಳುಗಿ ಮೃತಪಟ್ಟಿದ್ದಾರೆ. ಅಂಬಿಗ ನಾಪತ್ತೆಯಾಗಿದ್ದಾನೆಂದು ಪೋಲೀಸ್ ಮೂಲಗಳು ಹೇಳಿವೆ.

8f6d7038 2be6 4834 baa6 4eb534f5b873

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಟೋ ಶೂಟ್‌ಗೆ ತೆಪ್ಪ ನೀಡಿದ ವ್ಯಕ್ತಿ, ಫೋಟೋಗ್ರಾಫರ್ ಸೇರಿದಂತೆ ಆರು ಜನರ ಮೇಲೆ ತಲಕಾಡು ಪೊಲೀಸ್ ಠಾಣೆಯಲ್ಲಿ ಐಸಿಪಿ ಸೆಕ್ಷನ್ ೩೦೪ ಆಡಿ (ನಿರ್ಲಕ್ಷ್ಯದಿಂದ ಮರಣವನ್ನುಂಟು ಮಾಡುವುದು) ಪ್ರಕರಣ ದಾಖಲಾಗಿದೆ.

ಈ ತೆಪ್ಪವನ್ನು ಮೂಗಪ್ಪ ಅವರು ತಮ್ಮ ಸ್ವಂತ ಉಪಯೋಗಕ್ಕೆ ಬಳಕೆ ಮಾಡುತ್ತಿದ್ದರು. ಕಟ್ಟೆಪುರ-ಮುಡುಕುತೊರೆ ನಡುವೆ ಹರಿಯುವ ಕಾವೇರಿ ನದಿಯನ್ನು ದಾಟಲು ಮೂಗಪ್ಪ ತೆಪ್ಪ ಬಳಕೆ ಮಾಡುತ್ತಿದ್ದರು. ಪ್ರೀ ವೆಡ್ಡಿಂಗ್ ಶೂಟ್‌ಗೆ ತೆಪ್ಪವನ್ನು ನೀಡುವಂತೆ ನವಜೋಡಿ ಹಾಗೂ ಅವರ ಜತೆಗಿದ್ದವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಮೂಗಪ್ಪ ಅವರು ತೆಪ್ಪ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

Share This Article
Leave a comment