ಮೋಡಿ ಮಾಡಿದ ಮೋದಿ; ಬಿಹಾರನಲ್ಲೂ ಅರಳಿತು ಕಮಲ?

Team Newsnap
1 Min Read

ಬಿಹಾರ ಚುನಾವಣೆ ಮತ ಎಣಿಕೆ ಕಾರ್ಯ ಈಗಲೂ ಮುಂದುವರಿದಿದೆ. ಬಿಜೆಪಿ ಮತ್ತು ಜೆಡಿಯು ಹೆಚ್ಚಿನ ಸ್ಥಾನ ಗಳಿಸಿ, ಅಧಿಕಾರ ಹಿಡಿಯುವ ತವಕದಲ್ಲಿವೆ ಮೋದಿ ಬಿಹಾರದಲ್ಲೂ ಮೋಡಿ ಮಾಡಿದ್ದಾರೆ.

ಟ್ರಂಡ್ ಹೀಗಿದೆ

ಬಿಹಾರದ ಚುಣಾವಣೆ ಬಿಜೆಪಿ, ಕಾಂಗ್ರೆಸ್, ಆರ್‌ಜೆಡಿ, ಜೆಡಿಯು ಪಕ್ಷಗಳಿಗೆ ನಿರ್ಣಯಕವಾದ ಚುಣಾವಣೆಯಾಗಿದೆ. ಪ್ರತೀ ಪಕ್ಷಗಳು ಶತಾಯ ಗತಾಯ ಗೆಲ್ಲಲೇಬೇಕೆಂಬ ಪ್ರತಿಜ್ಞೆಯೊಂದಿಗೆ ಚುಣಾವಣಾ ಕಣಕ್ಕಿಳಿದಿವೆ. ಈಗ ಚುಣಾವಣೆಯಲ್ಲಿ‌ ಬಿಜೆಪಿ ಪಕ್ಷ ಅಧಿಕ ಮುನ್ನಡೆ ಸಾಧಿಸಿದೆ.

ಬಿಹಾರದ ಒಟ್ಟು 243 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳ ಪೈಕಿ ಹೇಳುವದಾದರೆ, ಬಿಜೆಪಿ ಪಕ್ಷ 56 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, 16 ಕ್ಷೇತ್ರಗಳಲ್ಲಿ ಜಯವನ್ನು ದಾಖಲಿಸಿದೆ. ಕಾಂಗ್ರೆಸ್ ಪಕ್ಷ 20 ಕ್ಷೇತ್ರಗಳಲ್ಲಿ ಮುನ್ನಡೆ ಹಾಗೂ 2 ಕ್ಷೇತ್ರಳಲ್ಲಿ ಜಯ ದಾಖಲಿಸಿದೆ. ಬಿಹಾರದ ಸ್ಥಳೀಯ ಪಕ್ಷವಾದ ಆರ್‌ ಜೆ ಡಿ 60 ಕ್ಷೇತ್ರಗಳಲ್ಲಿ ಮುನ್ನಡೆ 7 ಜಯ ಸಾಧಿಸಿದೆ. ಇನ್ನೊಂದು ಪ್ರಮುಖ ಸ್ಥಳೀಯ ಪಕ್ಷವಾದ ಜೆಡಿಯು 40 ಕ್ಷೇತ್ರಗಳಲ್ಲಿ ಮುನ್ನಡೆ 6 ಗೆಲುವು ಸಾಧನೆ ಮಾಡಿದೆ.

ಮೈತ್ರಿವಾರು ಹೇಳುವದಾದರೆ, ಎನ್‌ಡಿಎ ಮೈತ್ರಿಕೂಟ 101 ಕ್ಷೇತ್ರಗಳಲ್ಲಿ ಮುನ್ನಡೆ 22 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದರೆ, 100 ಕ್ಷೇತ್ರಗಳಲ್ಲಿ ಮುನ್ನಡೆ 9 ಕ್ಷೇತ್ರಗಳಲ್ಲಿ ಗೆಲವು ದಾಖಲಿಸಿದೆ. ಇತರೆ ಪಕ್ಷಗಳು 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಹಾರದಲ್ಲಿ‌ ಈ ಬಾರಿಯೂ ಸಹ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲವು ಸಾಧಿಸುವ ಲಕ್ಷಣಗಳಿವೆ ಎಂದು ತಜ್ಞರು ಹೇಳಿದ್ದಾರೆ.

Share This Article
Leave a comment