January 30, 2026

Newsnap Kannada

The World at your finger tips!

Adampasha

ಡ್ರಗ್ಸ್ ಪ್ರಕರಣದ ಬಂಧಿತ ಆ್ಯಡಂಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು

Spread the love

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಗ್‌ಬಾಸ್ ಮಾಜಿ ಸ್ಪರ್ಧಿ ಆಡಂ ಪಾಷಾಗೆ ತೀವ್ರ ಅನಾರೋಗ್ಯ ಉಂಟಾಗಿರುವ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲವು ದಿನಗಳಿಂದ ಆಡಂ ಪಾಷಾಗೆ ಜಾಂಡಿಸ್ ಆಗಿತ್ತು. ಆರಂಭದಲ್ಲಿ ಜೈಲಿನಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ ಅವರಿಗೆ ಅನಾರೋಗ್ಯ ಹೆಚ್ಚಾದ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 20 ರಂದು ಆಡಂ ಪಾಷಾ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಡಂ ಪಾಷಾಗೆ ಡ್ರಗ್ಸ್ ಪ್ರಕರಣದ ರೂವಾರಿ ಅನಿಕಾ ಜೊತೆಗೆ ಸಂಬಂಧವಿತ್ತು ಎನ್ನಲಾಗಿದೆ.

ಅನಿಕಾ ತಮಗೆ ಆತ್ಮೀಯರು ಎಂದು ಈ ಹಿಂದೆ ಒಮ್ಮೆ ಆಡಂ ಪಾಷಾ ಹೇಳಿಕೊಂಡಿದ್ದರು. ‘ಅನಿಕಾ ನನ್ನ ಗೆಳತಿ, ಆದರೆ ಆಕೆಯ ವ್ಯವಹಾರದ ಬಗ್ಗೆ ನನಗೆ ಗೊತ್ತಿರಲಿಲ್ಲ’ ಎಂದಿದ್ದರು ಆಡಂ ಪಾಷಾ.

error: Content is protected !!