February 21, 2026

Newsnap Kannada

The World at your finger tips!

kolar, lokayukta , SDA

50 ಸಾವಿರ ರು ಲಂಚ ಸ್ವೀಕಾರ ಬಿಬಿಎಂಪಿ ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ

Spread the love

ಬೆಂಗಳೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಸಿ.ವಿ ರಾಮನ್‌ ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ವಿ.ಶಿವೇಗೌಡ 50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ.

ಸೊಳ್ಳೆ ನಿಯಂತ್ರಣಕ್ಕಾಗಿ ಶ್ರೀನಿವಾಸ್‌ ಎಂಬುವರು ಗುತ್ತಿಗೆ ಪಡೆದಿದ್ದರು. ಇದಕ್ಕಾಗಿ ಬಿಬಿಎಂಪಿ ಆರೋಗ್ಯಾಧಿಕಾರಿ 80 ಸಾವಿರ ಲಂಚ ಕೇಳಿದ್ದರು.

ಈಗಾಗಲೇ ಮುಂಗಡವಾಗಿ ವಿ.ಶಿವೇಗೌಡ 30 ಸಾವಿರ ಲಂಚವನ್ನು ಪಡೆದುಕೊಂಡಿದ್ದರು. ಇನ್ನುಳಿದ 50 ಸಾವಿರ ರೂಪಾಯಿ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

error: Content is protected !!