February 22, 2026

Newsnap Kannada

The World at your finger tips!

WhatsApp Image 2023 04 26 at 1.33.32 PM

ನಟಿ ತಾರಾ ವಿರುದ್ಧ ಎಫ್ ಐ ಆರ್ ದಾಖಲು

Spread the love

ಬೆಂಗಳೂರು :

ಮೇ 10 ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗ ನೀತಿ ಸಂಹಿತೆ ಜಾರಿಯಲ್ಲಿದೆ, ಆದರೆ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಸರ್ಕಾರಿ ವಾಹನ ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ನಟಿ ತಾರಾ ವಿರುದ್ಧ ಎಫ್ಐಆರ್ ದಾಖಲಾಗಿದೆ.

ತಾರಾ ಸರ್ಕಾರಿ ಕಾರನ್ನು ವೈಯಕ್ತಿಕ ಕೆಲಸಕ್ಕೆ ಬಳಕೆ ಮಾಡುತ್ತಿದ್ದಾರೆಂದು ಆರೋಪಿಸಿ ಕೆಆರ್​ಎಸ್ ಪಕ್ಷದ ಕಾರ್ಯಕರ್ತರು ವಿಡಿಯೋ ಮಾಡಿ, ಫ್ಲೈಯಿಂಗ್ ಸ್ಕ್ವಾಡ್​ ಗಮನಕ್ಕೆ ತಂದಿದ್ದರು.

ದೂರು ದಾಖಲಾದ ಬಳಿಕ ತಾರಾ ಅವರ ಮನೆ ಬಳಿ ಪರಿಶೀಲನೆಯನ್ನೂ ನಡೆಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ ಕಾರು ಮನೆ ಬಳಿ ಇರಲಿಲ್ಲ.

ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನಟಿ ತಾರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

error: Content is protected !!