December 19, 2024

Newsnap Kannada

The World at your finger tips!

WhatsApp Image 2023 04 22 at 6.34.16 PM

ರೂಟ್ ಕೆನಾಲ್ ( Root Canal )

Spread the love

ಹಲ್ಲಿನಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. 6 ತಿಂಗಳಿಗೆ ಒಮ್ಮೆಯಾದರೂ ದಂತ ಪರೀಕ್ಷೆ ಮಾಡಿಸಿಕೊಳ್ಳಿ. ಒಂದು ವೇಳೆ ಸಮಸ್ಯೆ ಬೇಗ ತಿಳಿದುಕೊಂಡರೆ, ಎನಾಮಲ್ ಹಲ್ಲಿನಲ್ಲೇ ಅದನ್ನು ಸರಿ ಮಾಡಿಬಿಡಬಹುದು. ಆಗ ರೂಟ್ ಕೆನಾಲ್ ಅಗತ್ಯ ಬೀಳುವುದಿಲ್ಲ.

ಹಲ್ಲಿನ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿಕೊಂಡು ಹಾಗೆಯೇ ಬಿಟ್ಟರೆ, ಕ್ಯಾವಿಟಿ ಎನಾಮಲ್ ಡ್ಯಾಮೇಜ್ ಮಾಡಿ, ಡೆಂಟಲ್ ಡ್ಯಾಮೇಜ್ ಮಾಡಿ, ಪಲ್ಪ್ ಡ್ಯಾಮೇಜ್ ಆಗಿಬಿಡುತ್ತದೆ. ಆ ನಂತರ ನೋವು ಕಾಣಿಸಿಕೊಳ್ಳುತ್ತದೆ.

ಚಿಕ್ಕ ಮಕ್ಕಳಿಂದ ಮಧ್ಯವಸ್ಕರಿರಲಿ ವೃದ್ಧಾಪ್ಯದ ಸಮೀಪ ಇರುವವರು ಕೂಡ ಕ್ಯಾವಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲ್ಲಿನ ಹುಳುಕಿನ ಸಮಸ್ಯೆ ಅಷ್ಟೇ ಅಲ್ಲದೇ, ಒಸಡಿನ ಬಗ್ಗೆ ಜಾಗ್ರತೆ ವಹಿಸದೇ ಇರುವುದು ಕೂಡ ದಂತಕ್ಷಯದ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿದೆ. ಬಿರುಸಾದ ಬ್ರಷ್ ನಿಂದ ಹಲ್ಲುಜ್ಜುವಿಕೆ, ನಿರಂತರ ಟೂತ್ ಪಿಕ್ ಬಳಕೆಯಿಂದ ಹಲ್ಲಿನ ನಡುವೆ ಸಂಧಿ ದೊಡ್ಡಾಗುವಿಕೆಯೂ ಕೂಡ ವಸಡಿನ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಅಂತಿಮವಾಗಿ ಈ ಎಲ್ಲಾ ಸಮಸ್ಯೆಗಳು ರೂಟ್ ಕೆನಾಲ್ ಚಿಕಿತ್ಸೆಯಲ್ಲಿ ಕೊನೆಗೊಳ್ಳುತ್ತಿವೆ.

ನಮ್ಮ ಹಲ್ಲಿನಲ್ಲಿ ಮೂರು ಪದರಗಳಿರುತ್ತವೆ. ನಮ್ಮ ಒಸಡಿನಲ್ಲಿ ಹೆಚ್ಚು ಬಲಶಾಲಿಯಾದ ಮೊಟ್ಟ ಮೊದಲ ಪದರ ಎನಾಮಲ್. ಇದು ಹಲ್ಲುಗಳನ್ನು ರಕ್ಷಿಸುವ ರಕ್ಷಾ ಕವಚವೆಂದೇ ಹೇಳಬೇಕು. ಇದು ನಮ್ಮ ಇಡೀ ದೇಹದಲ್ಲೇ ಹೆಚ್ಚು ಬಲಶಾಲಿಯಾಗಿರುವ ಪದರ. ಇನ್ನೂ ಇದರ ಕೆಳಭಾಗದ ಎರಡನೇ ಪದರ ಡೆಂಟೈನ್. ಡೆಂಟೈನ್ ನಂತರದ ಪ್ರಮುಖವಾದ ಮೂರನೇ ಪದರವೇ ಪಲ್ಪ್ ಅಥವಾ ನರವಾಗಿರುತ್ತದೆ. ರೂಟ್ ಕೆನಾಲ್ ಚಿಕಿತ್ಸೆಯಲ್ಲಿ ಇದು ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ.

ಯಾವಾಗ ರೂಟ್ ಕೆನಾಲ್ ಅಗತ್ಯ ಬೀಳುತ್ತದೆ?

ಹಲ್ಲು ಹುಳುಕಾದಾಗ ಅಥವಾ ಯಾವುದೋ ಕಾರಣದಿಂದಾಗಿ ಹಲ್ಲು ಮುರಿದಾಗ ಈ ಎಲ್ಲಾ ಕಾರಣಗಳಿಂದ ನರ ಅಂದರೆ ಪಲ್ಪ್ ಡ್ಯಾಮೇಜ್ ಆದಂತಹ ಸಂದರ್ಭದಲ್ಲಿ ರೂಟ್ ಕೆನಾಲ್ ಮಾಡಬೇಕಾಗುತ್ತದೆ. ಈ ಉದಾಹರಣೆಯನ್ನು ಗಮನಿಸಿ. ಈಗ ಒಂದು ತೆಂಗಿನ ಕಾಯಿಯನ್ನು ತೆಗೆದುಕೊಂಡರೆ ಅದರ ಹೊರ ಪದರ ಬಹಳ ಗಟ್ಟಿಯಾಗಿರುತ್ತದೆ. ಇದನ್ನು ಎನಾಮಲ್ ಎಂದು ಭಾವಿಸಿ, ಇನ್ನೂ ತೆಂಗಿನಕಾಯಿಯ ಒಳಗಿರುವ ಬೆಳ್ಳಗಿನ ತಿರುಳನ್ನು ಡೆಂಟಲ್ ಎಂದು ಊಹಿಸಿಕೊಳ್ಳಿ. ಇನ್ನೂ ತಿರುಳಿನ ಒಳಗಿರುವ ನೀರು ಮತ್ತು ಗಂಜಿಯನ್ನು ಪಲ್ಪ್ ಅಥವಾ ನರವೆಂದು ಅರ್ಥಮಾಡಿಕೊಳ್ಳಬಹುದು.

ರೂಟ್ ಕೆನಾಲ್ ಮಾಡುವ ಬಗೆ ಹೇಗೆ?

ನರ ಡ್ಯಾಮೇಜ್ ಆಗಿದ್ದ ಸಂದರ್ಭದಲ್ಲಿ ಅದನ್ನು ಮೇಲ್ಭಾಗದಿಂದ ಹಲ್ಲಿನಿಂದ ಒಂದು ಸಂಧಿ ಮಾಡಿ, ಡ್ಯಾಮೇಜ್ ಆಗಿರುವ ನರವನ್ನು ತೆಗೆಯಲಾಗುತ್ತದೆ. ಆ ನಂತರ ಅದನ್ನು ಮತ್ತೆ ಫಿಲ್ಲಿಂಗ್ ಮಾಡುತ್ತಾರೆ. ಇದು ರೂಟ್ ಕೆನಾಲ್ ಚಿಕಿತ್ಸೆ. ಇದು ಸರಳ ಮತ್ತು ಹಲ್ಲಿನ ಆರೋಗ್ಯಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ರೂಟ್ ಕೆನಾಲ್ ಮಾಡುವ ಬಗೆಯನ್ನು ಒಂದು ಸರಳ ಉದಾಹರಣೆಯೊಂದಿಗೆ ತಿಳಿದುಕೊಳ್ಳೋಣ. ಒಂದು ಪೆನ್ನಿನಲ್ಲಿ ರೀಫಿಲ್ ಮುಗಿದಿದ್ದರೆ, ಆ ರೀಫಿಲ್ ತೆಗೆದು ಹೇಗೆ ಹೊಸ ರೀಫಿಲ್ ಹಾಕುತ್ತೇವೋ ಅಷ್ಟೇ ಸುಲಭವಾಗಿ ರೂಟ್ ಕೆನಾಲ್ ಚಿಕಿತ್ಸೆ ಮಾಡಲಾಗುತ್ತದೆ.

ಯಾರು ಕೂಡ ನೋವಾಗದ ಹೊರತು ವೈದ್ಯರ ಬಳಿಗೆ ಹೋಗುವುದಿಲ್ಲ. ನೋವು ಕಾಣಿಸಿಕೊಂಡಾಗ ವೈದ್ಯರ ಬಳಿ ಹೋದರೆ ಕೊನೆಯ ಹಂತದ ಚಿಕಿತ್ಸೆ ರೂಟ್ ಕೆನಾಲ್ ಅಥವಾ ಹಲ್ಲನ್ನು ಕೀಳುವುದು. ಆದ್ದರಿಂದ ರೋಗ ಬಂದ ನಂತರ ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತ, ರೋಗ ಬಾರದಂತೆ ತಡೆಯವುದು ಸೂಕ್ತ.

Copyright © All rights reserved Newsnap | Newsever by AF themes.
error: Content is protected !!