March 12, 2026

Newsnap Kannada

The World at your finger tips!

, Marriage ,

ವರದಕ್ಷಿಣೆ ಕಿರುಕುಳ : IAS ಅಧಿಕಾರಿ ವಿರುದ್ಧ ಪತ್ನಿಯಿಂದಲೇ ದೂರು

Spread the love

ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಐಎಎಸ್‌ ಅಧಿಕಾರಿ ವಿರುದ್ಧವೇ ಪತ್ನಿ ದೂರು ದಾಖಲಿಸಿದ್ದಾರೆ.

ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ಆರೋಪಿಯಾಗಿದ್ದಾರೆ.

2022ರಲ್ಲಿ ಆಕಾಶ್ ನಿವೃತ್ತ ಡಿಐಜಿ ಪುತ್ರಿ ಜೊತೆ ವಿವಾಹವಾಗಿದ್ದರು. ಆದರೆ ಐಎಎಸ್ ಅಧಿಕಾರಿ ಆಕಾಶ್‌ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಅಷ್ಟೇ ಅಲ್ಲದೇ ವರದಕ್ಷಿಣೆ ನೀಡಲು ಒಪ್ಪದಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಘಟನೆಗೆ ಸಂಬಂಧಿಸಿ ಆಕಾಶ್, ತಂದೆ- ತಾಯಿ ಹಾಗೂ ಸಹೋದರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಡಾ. ಆಕಾಶ್‌ ವಿರುದ್ಧ ಪತ್ನಿ ಬೆಂಗಳೂರಿನ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದನ್ನು ಓದಿ –ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಮೆ ಮಳೆ ಸಾಧ್ಯತೆ ?

error: Content is protected !!