December 23, 2024

Newsnap Kannada

The World at your finger tips!

education , learning , teaching

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಸೋಮವಾರ ರಿಲೀಸ್ : ಸಿಎಂ

Spread the love

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಸೋಮವಾರ ಬಿಡುಗಡೆಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ತಿಳಿಸಿದರು

ನವದೆಹಲಿ ಸುದ್ದಿಗಾರರ ಜೊತೆ ಮಾತನಾಡಿ , ನಿನ್ನೆ ಸಂಸದೀಯ ಮಂಡಳಿ ಸಭೆಯಲ್ಲಿ ಟಿಕೆಟ್ ನೀಡುವುದಕ್ಕೆ ಸಂಬಂಧಪಟ್ಟಂತೆ ನಡೆದ ಸಭೆಯಲ್ಲಿ, ಸರ್ವೆ ಸೇರಿದಂತೆ ಎಲ್ಲಾ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

ಈ ಬಾರಿ ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಕ್ಕೆ ಹೈಕಮಾಂಡ್‌ ಮತ್ತು ರಾಜ್ಯ ಬಿಜೆಪಿ ನಾಯಕರುಗಳು ಎಲ್ಲಾ ರೀತಿ ಸಿದ್ದತೆ ಮಾಡಿದ್ದಾರೆ ಹೀಗಾಗಿ ಪೂರ್ವಪರ ಮಾಹಿತಿಗಳನ್ನು ಪಡೆದುಕೊಂಡ ಬಳಿಕ ಟಿಕೆಟ್‌ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

ಗೆಲ್ಲುವ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕೆ ಇಳಿಸುವುದು ಕೂಡ ನಿಶ್ಚಿತವಾಗಿದೆ. ಈ ನಡುವೆ ಟಿಕೇಟ್‌ ನಿರೀಕ್ಷೆಯಲ್ಲಿದ್ದ ಹಾಲಿ 16 ಮಂದಿ ಬಿಜೆಪಿ ಶಾಸಕರಿಗೆ ಟಿಕೆಟ್‌ ನೀಡದೇ ಇರುವುದಕ್ಕೆ ಹೈಕಮಾಂಡ್‌ ಮುಂದಾಗಿದೆ ಎನ್ನಲಾಗಿದೆ.

ಪಕ್ಷ ನಡೆಸಿರುವ ಸರ್ವೆಯಲ್ಲಿ, ಹಲವು ಮಂದಿಗೆ ಟಿಕೆಟ್‌ ನೀಡಿದರೆ ಸೋಲುವ ಭೀತಿಯೂ ಇದೇ ಎನ್ನಲಾಗಿದೆ.

ಶಿವಮೊಗ್ಗ ಕ್ಷೇತ್ರದ ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ, ಭಟ್ಕಳ ಶಾಸಕ ಸುನೀಲ್ ನಾಯ್ಕ್, ಪುತ್ತೂರಿನ ಸಂಜೀವ್ ಮಠಂದೂರು, ಅಥಣಿ ಮಹೇಶ್ ಕಮಟಳ್ಳಿ, ಕಾಪು ಲಾಲಾಜಿ ಮೆಂಡನ್, ಸಿರುಗುಪ್ಪ ಸೋಮಲಿಂಗಪ್ಪ, ಶಿರಹಟ್ಟಿ, ರಾಮಣ್ಣ ಲಮಾಣಿ, ಕಲಬುರಗಿ ಉ.ಬಸವರಾಜ ಮತ್ತಿ ಮೂಡ್, ರೋಣ ಕಳಕಪ್ಪ, ಬೈಂದೂರು ಸುನೀಲ್ ಕುಮಾರ್ ಶೆಟ್ಟಿ, ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ, ಚಿತ್ರದುರ್ಗ ಬಿ.ಹೆಚ್. ತಿಪ್ಪಾರೆಡ್ಡಿ, ಮೂಡಿಗೆರೆ ಎಂ.ಪಿ.ಕುಮಾರಸ್ವಾಮಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪದವಿಧರರಿಗೆ ಕೇಂದ್ರದ ಉದ್ಯೋಗ : 80 ಸಾವಿರ ಸಂಬಳ

ಈಗಾಗಲೇ ಇವರುಗಳ ಬಗ್ಗೆ ಹೈಕಮಾಂಡ್‌ಗೆ ವರದಿಯನ್ನು ನೀಡಲಾಗಿದೆ ಕೂಡ. ಇನ್ನೂ ಈಗಾಗಲೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಒಂದು ಸುತ್ತಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇಂದು ಅಥಾವ ನಾಳೆ ಬಿಜೆಪಿಯಿಂದ ಅಭ್ಯರ್ಥಿಯ ಪಟ್ಟಿಯ ಬಿಡುಗಡೆ ಮಾಡಬಹುದು ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!