February 22, 2026

Newsnap Kannada

The World at your finger tips!

crime , violation , rules

A case of conducting violation has been filed against MLA Renukacharya in Bengaluru ಶಾಸಕ ರೇಣುಕಾಚಾರ್ಯ ವಿರುದ್ದ ಬೆಂಗಳೂರಿನಲ್ಲಿ ನೀತಿ ಸಂಹಿತಿ ಉಲ್ಲಂಘನೆ ಕೇಸು ದಾಖಲು

ಶಾಸಕ ರೇಣುಕಾಚಾರ್ಯ ವಿರುದ್ದ ಬೆಂಗಳೂರಿನಲ್ಲಿ ನೀತಿ ಸಂಹಿತಿ ಉಲ್ಲಂಘನೆ ಕೇಸು ದಾಖಲು

Spread the love

ಶಾಸಕ ಎಂ.ಪಿ ರೇಣುಕಾಚಾರ್ಯಅವರವಿವಿರುದ್ಧ ಭಾನುವಾರ ಬೆಂಗಳೂರಿನಲ್ಲಿ ಚುನಾವಣಾಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ಕೇಸು ದಾಖಲಿಸಿದ್ದಾರೆ.

ಚುನಾವಣಾಧಿಕಾರಿಗಳ ಅನುಮತಿಯಿಲ್ಲದೆ ರೇಣುಕಾಚಾರ್ಯ ಬೆಂಗಳೂರಿನ ಗುರುರಾಜ ಕಲ್ಯಾಣಮಂಟಪದಲ್ಲಿ ಸಭೆ ನಡೆಸಿದ್ದಾರೆ.

ಸಭೆ ನಡೆಸಲು ಚುನಾವಣಾ ಆಯೋಗ ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಗುರುರಾಜ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಕಾರ್ಯಕ್ರಮ ನಿಲ್ಲಿಸಲು ಮುಂದಾಗಿದ್ದಾರೆ.

ಅಧಿಕಾರಿಗಳು ಭೇಟಿ ನೀಡಿದ ಬಳಿಕವೂ ರೇಣುಕಾಚಾರ್ಯ ಅವರು ಮಾತು ಮುಂದುವರಿಸಲು ಯತ್ನಿಸಿದಾಗ ಅಧಿಕಾರಿಗಳು ಮೈಕ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ.

ಅಷ್ಟರಲ್ಲಿ ರೇಣುಕಾಚಾರ್ಯ ಅವರು ಸರ್ ಇರಿ ಸ್ವಲ್ಪ ಇರಿ ಅಂತಾ ಭಾಷಣ ಮುಂದುವರಿಸಿದ್ದಾರೆ. ಬಳಿಕ ನೆರೆದಿದ್ದ ಸಭೀಕರಿಗೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಅಂತಾ ಹೇಳಿ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.ಇದನ್ನು ಓದಿ –ಸ್ಮಶಾನದಲ್ಲಿ ಪ್ರಚಾರ ವಾಹನ ಪೂಜೆ : ರಾಹುಕಾಲದಲ್ಲೇ ನಾಮಪತ್ರ – ಸತೀಶ್‌ ಜಾರಕಿಹೊಳಿ‌

error: Content is protected !!