December 22, 2024

Newsnap Kannada

The World at your finger tips!

bank , job , application

ಶಿವಮೊಗ್ಗ, ಬಳ್ಳಾರಿಯಲ್ಲಿ ನಾಳೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

Spread the love

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾ.14 ರ ಬೆಳಗ್ಗೆ 10.00ಕ್ಕೆ ಪ್ರಸಿದ್ದ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

ವಿವಿಧ ಪ್ರಸಿದ್ದ ಖಾಸಗಿ ಕಂಪನಿಗಳು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಎಸ್‌ಎಸ್‌ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.
ಉಚಿತ ಪ್ರವೇಶ ಇರುತ್ತದೆ.

ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ : 08182-255293, 9380663606 ಮತ್ತು 9482023412, 9535312531 ಮೂಲಕ ಸಂಪರ್ಕಿಸಬಹುದು

ಬಳ್ಳಾರಿಯಲ್ಲಿ ಉದ್ಯೋಗ ಮೇಳ ಆಯೋಜನೆ
ಬಳ್ಳಾರಿ :

ಬಳ್ಳಾರಿ ನಗರದ ಡೊಮಿನೋಸ್ ಪಿಜ್ಜಾ ಕಂಪನಿಯಲ್ಲಿ ಖಾಲಿ ಇರುವ ಡೆಲಿವರಿ ಬಾಯ್ಸ್ ಹುದ್ದೆಗಳಿಗೆ ಮಾ.14ರಂದು ಪಾರ್ವತಿ ನಗರದ ಏರ್ಟೆಲ್ ಆಫೀಸ್ ಹತ್ತಿರದ ಜೈ ಶ್ರೀರಾಮ್ ಬಿಲ್ಡಿಂಗ್ ನ ನೆಲಮಹಡಿಯ ಸಂಖ್ಯೆ.6 ಮಹಡಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.

ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಆಧಾರ್ಕಾರ್ಡ್ ಪ್ರತಿ, ಸ್ವ-ವಿವರ ಪ್ರತಿ(ಬಯೋಡೆಟಾ) ತಪ್ಪದೇ ತರಬೇಕು. ಡೆಲಿವರಿ ಬಾಯ್ಸ್ ಹುದ್ದೆಗಳು 30 ಇದೆ. ವಿದ್ಯಾರ್ಹತೆಯು ಎಸ್‌ಎಸ್‌ಎಲ್ಸಿ, ಪಿಯುಸಿ ಹೊಂದಿರಬೇಕು ಮತ್ತು ದ್ವಿ-ಚಕ್ರ ವಾಹನ ಲೈಸೆನ್ಸ್, ಸ್ಮಾರ್ಟ್ಫೋನ್ ಕಡ್ಡಾಯವಾಗಿ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ವಾಹನದ ವ್ಯವಸ್ಥೆಯನ್ನು ಕಂಪನಿಯವರೇ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಡೊಮಿನೋಸ್ ಪಿಜ್ಜಾ ಕಂಪನಿ ಅಥವಾ ಮೊ.9980346209, 9035869337, 9019692898, 7892971984 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾರೆ.ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ : ಭಾರತಕ್ಕೆ ಚಿನ್ನದ ಗರಿ 

Copyright © All rights reserved Newsnap | Newsever by AF themes.
error: Content is protected !!