January 29, 2026

Newsnap Kannada

The World at your finger tips!

modi mandya roadshow

ಮಂಡ್ಯದಲ್ಲಿ ಮೋದಿ ರೋಡ್ ಶೋ –ಅಭಿಮಾನಿಗಳಿಗೆ ಪ್ರಧಾನಿ ಪುಷ್ಪಾರ್ಚನೆ

Spread the love

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿದ ಸಂಭ್ರಮ ಜನ ಮಾನದಲ್ಲಿ ಅಚ್ಚಳಿಯದೇ ಉಳಿದಿದೆ.

ಸಕ್ಕರೆ ನಾಡಿನಲ್ಲಿ ಭಾನುವಾರ ಭರ್ಜರಿ ರೋಡ್ ಶೋ ನಡೆಸಿದ ವೇಳೆ ಅಭಿಮಾನಿಗಳು ಪುಷ್ಪಾರ್ಚಾನೆ ನಡೆಸಿದರು

ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸುವುದಕ್ಕೂ ಮುನ್ನ ಮಂಡ್ಯದ ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್‍ವರೆಗೆ ರೋಡ್‍ ಶೋ ನಡೆಸಿದರು. ರಾಜ್ಯ ವಿಧಾನ ಸಭಾ ಚುನಾವಣೆ – ಕೇಂದ್ರ ಚು. ಆಯೋಗದ ಭರದ ಸಿದ್ದತೆ: ರಾಜೀವ್ ಕುಮಾರ್

ಈ ವೇಳೆ ಪ್ರಧಾನಿ ಮೋದಿ ಮೇಲೆ ಹೂವಿನ ಸುರಿಮಳೆಯಾಯಿತು. ಅಷ್ಟೇ ಅಲ್ಲದೇ ಸ್ವಾಗತಿಸಲು ಬಂದಿದ್ದ ಅಭಿಮಾನಿಗಳಿಗೆ ಪ್ರಧಾನಿ ಮೋದಿ ಅವರು ಹೂವುಗಳನ್ನು ಹಾಕಿ ಸಂಭ್ರಮಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ತೀವ್ರ ಹೃದಯಾಘಾತದಿಂದ ನಿಧನ

ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದರು. 1.8 ಕಿ.ಮೀ. ದೂರ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಯಿತು. ಮಂಡ್ಯದಲ್ಲಿ ಮೋದಿ ಹವಾ ಜೋರಾಗಿದ್ದು, ಈ ವೇಳೆ ನೆರೆದಿದ್ದ ಜನರು ಮೋದಿ, ಮೋದಿ ಎಂದು ಹಷೋದ್ಘಾರದಿಂದ ಘೋಷಣೆ ಕೂಗಿದರು.

ಈ ವೇಳೆ ಸಹಸ್ರಾರು ಜನರು ಸೇರಿದ್ದು, ಅಭಿಮಾನಿಗಳು ಮೋದಿಯನ್ನು ನೋಡಲು ಉತ್ಸುಕರಾಗಿದ್ದು ಕಂಡುಬಂತು.

error: Content is protected !!