December 26, 2024

Newsnap Kannada

The World at your finger tips!

government , job , India

ರಾಜ್ಯ ವಿಧಾನ ಸಭಾ ಚುನಾವಣೆ – ಕೇಂದ್ರ ಚು. ಆಯೋಗದ ಭರದ ಸಿದ್ದತೆ: ರಾಜೀವ್ ಕುಮಾರ್

Spread the love

ರಾಜ್ಯದಲ್ಲಿ ಮೇ 24 ರೊಳಗೆ ಚುನಾವಣೆ ಕಾರ್ಯ ಪೂರ್ಣಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಭರ್ಜರಿ ತಯಾರಿ ನಡೆಸಿದೆ. ಜೊತೆಗೆ ಅಕ್ರಮ ತಡೆಗೆ ‘ಸಿ-ವಿಸಿಲ್ ಆ್ಯಪ್’ನಲ್ಲಿ ದೂರು ಸಲ್ಲಿಸುವ ಅವಕಾಶ ನೀಡಲಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಕಳೆದ ಮೂರು ದಿನಗಳಿಂದ ಭರ್ಜರಿ ತಯಾರಿಯನ್ನು ನಡೆಸಿದೆ. ಯಾವುದೇ ಅಕ್ರಮಗಳಿಗೆ ಅವಕಾಶ ನೀಡದೇ ಕಡಿವಾಣ ಹಾಕುವ ಸಂಬಂಧ ಸಿ-ವಿಸಿಲ್ ಎನ್ನುವ ಆ್ಯಪ್ ಬಿಡುಗಡೆ ಮಾಡುತ್ತಿದೆ, ಸಾರ್ವಜನಿಕರು ಅಕ್ರಮಗಳ ಬಗ್ಗೆ ನೇರವಾಗಿಯೇ ಆಯೋಗಕ್ಕೆ ದೂರು ನೀಡಬಹುದಾಗಿದೆ.

ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು, ಕಳೆದ 3 ದಿನಗಳಿಂದ ನಿರಂತರವಾಗಿ ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ರಾಜಕೀಯ ಪಕ್ಷಗಳ ನಾಯಕರೊಂದಿಗೂ ಸಭೆ ನಡೆಸಿ ಚರ್ಚಿಸಲಾಗಿದೆ ಎಂದರು.

80 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರು ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ.

ರಾಜ್ಯಾಧ್ಯಂತ 58,282 ಮತಗಟ್ಟೆ ಸ್ಥಾಪನೆ:

ರಾಜ್ಯದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು 17 ವರ್ಷ ಮೇಲ್ಪಟ್ಟವರು 1,25,406 ಮಂದಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಾಗಿ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಒಂದು ಮತಗಟ್ಟೆಯಲ್ಲಿ 883 ಜನರು ಮತ ಹಾಕಬಹುದು. ನಗರ ಪ್ರದೇಶದಲ್ಲಿ 24,063 ಮತಗಟ್ಟೆ ಸ್ಥಾಪಿಸಲಾಗಿದೆ. ಗ್ರಾಮಾತಂರ ಪ್ರದೇಶದಲ್ಲಿ 34,219 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ ಎಂದರು.

ಚುನಾವಣೆ ಅಕ್ರಮಕ್ಕೆ ಕಡಿವಾಣ :

ಈ ಬಾರಿ ಚುನಾವಣೆ ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಯೋಗವು ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಸಂಜೆ 5 ರಿಂದ ಬೆಳಿಗ್ಗೆ 5ರವರೆಗೆ ಎಟಿಎಂ ವಹಿವಾಟು ಸೇರಿದಂತೆ ಎಲ್ಲಾ ಹಣಕಾಸು ವಹಿವಾಟಿನ ಮೇಲೆ ಹದ್ದಿನ ಕಣ್ಣನ್ನು ಇರಿಸಲಾಗಿದೆ.

ಯುಪಿಎ ಪೇಮೆಂಟ್ ವರ್ಗಾವಣೆಯ ವಹಿವಾಟಿನ ಬಗ್ಗೆಯೂ ಕಣ್ಣಿರಿಸಲಾಗಿದೆ. ಅಕ್ರಮ ತಡೆಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಗಿಫ್ಟ್ ಗಳಿಗೆ ಬ್ರೇಕ್:

ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಉಡುಗೋರೆಗಳು, ಗಿಫ್ಟ್ ಗಳನ್ನು ರಾಜಕೀಯ ಪಕ್ಷದವರು ಹಂಚುವುದಕ್ಕೆ ಬ್ರೇಕ್ ಹಾಕಲಾಗಿದೆ.

ಈ ರೀತಿಯ ಯಾವುದೇ ವಸ್ತುಗಳನ್ನು ಹಂಚಲು ಅವಕಾಶವಿಲ್ಲ. ಆ ಬಗ್ಗೆ ಜಾಗೃತದಳದ ಅಧಿಕಾರಿಗಳು ಹದ್ದಿನ ಕಣ್ಣನ್ನು ಇರಿಸಿ, ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಸಾರ್ವಜನಿಕರಿಂದಲೇ ಹಣ, ಗಿಫ್ಟ್ ಹಂಚಿಕೆ ಬಗ್ಗೆ ದೂರು, ಮಾಹಿತಿ ನೀಡಲು ಸಿ-ವಿಸಿಲ್ ಆಯಪ್ ಬಿಡುಗಡೆ

ಸಿ ವಿಸಿಲ್ ಎನ್ನುವ ಆಪ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ. ಆ ಆಪ್ ಅನ್ನು ಸಾರ್ವಜನಿಕರು ಇನ್ಸ್ ಸ್ಟಾಲ್ ಮಾಡಿಕೊಳ್ಳಬೇಕು ಚುನಾವಣೆ ಸಂದರ್ಭದಲ್ಲಿ ಹಣ ಹಂಚಿಕೆ, ಉಡುಗೋರೆ ಹಂಚಿಕೆ, ಅಕ್ರಮಗಳನ್ನು ನಡೆಸುವ ಬಗ್ಗೆ ಪೋಟೋ ತೇಗೆದು, ನಿಖರ ಲೊಕೇಶನ್ ಮಾಹಿತಿ ನೀಡುವ ಮೂಲಕ ವರದಿ ಮಾಡಬಹುದು. ವರದಿಯಾದ 100 ಮಿನಿಟ್ಸ್ ನಲ್ಲೇ ಸಂಬಂಧ ಪಟ್ಟ ಅಧಿಕಾರಿಗಳು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.

ಈಗಾಗಲೇ ಚುನಾವಣೆಗಾಗಿ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವಂತ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಿದ್ದು ತಿಳಿದು ಬಂದರೇ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು. ನಾಳೆ ಪ್ರಧಾನ ಮಂತ್ರಿಗಳ ಕಾರ್ಯಕ್ರಮಕ್ಕೆ ತೆರಳುವ ವಾಹನಗಳ ಮಾರ್ಗದ ವಿವರ

Copyright © All rights reserved Newsnap | Newsever by AF themes.
error: Content is protected !!