ನಿಂತಿದ್ದ ಬಿಎಂಟಿಸಿ ಬಸ್ ದಿಡೀರ್ ಹತ್ತಿ ಉರಿದ ಪರಣಾಮ ಕಂಡಕ್ಟರ್ ಒಬ್ಬರು ಸಜೀವ ದಹನವಾದ ಘಟನೆ ಬೆಂಗಳೂರಿನ ಲಿಂಗಧೀರನ ಹಳ್ಳಿಯಲ್ಲಿ ಜರುಗಿದೆ.
ಮುತ್ತಯ್ಯ ಸ್ವಾಮಿ (45) ಸಜೀವ ದಹನವಾಗಿದ್ದಾರೆ ಬಸ್ ಡಿಪೋ 31ಕ್ಕೆ ಸೇರಿದ ಈ ಬಸ್ ಗೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ.
ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ನಿಲ್ದಾಣದಲ್ಲಿ ಚಾಲಕ ಹಾಗೂ ನಿರ್ವಾಹಕ ಬಸ್‍ನಲ್ಲಿ ಮಲಗಿದ್ದರು. ಮುತ್ತಯ್ಯ ಸ್ವಾಮಿ ಅವರು ಬಸ್ಸಿನ ಸಿಟ್‍ನಲ್ಲಿಯೇ ಮಲಗಿದ್ದರು. ಈ ವೇಳೆ ಬಸ್ಸಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿದೆ ಮುತ್ತಯ್ಯ ಅವರು ಮಲಗಿದ್ದಲ್ಲೇ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ.
ಇತ್ತ ಮುಂಜಾನೆ ಚಾಲಕ ಎದ್ದು ಶೌಚಕ್ಕೆ ಹೋದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಮಾತನಾಡಿರುವ ಚಾಲಕ ಪ್ರಕಾಶ್ ರಾತ್ರಿ 10.30ಕ್ಕೆ ರೂಟ್ ಮುಗಿಸಿ ಬಂದಿದ್ದೆವು. ನಾನು ಪಕ್ಕದ ಬಸ್ ನಿಲ್ದಾಣದ ರೆಸ್ಟ್ ರೂಂ ನಲ್ಲಿ ಮಲಗಿದ್ದೆ. ಬೆಳಗ್ಗೆ 4.45 ಕ್ಕೆ ಎದ್ದು ಆಚೆ ಬಂದು ನೋಡಿದಾಗ ಬೆಂಕಿ ಉರಿಯುತ್ತಿತ್ತು. ಈ ವೇಳೆ ನಾನು ಕಂಡಕ್ಟರ್ ಅವರನ್ನು ಆಚೆ ಬರುವಂತೆ ಕಿರುಚಾಡಿದರೂ ಪ್ರಯೋಜನವಾಗಲಿಲ್ಲ. ಅವರು ಮಲಗಿದ್ದ ಜಾಗದಲ್ಲೇ ಸುಟ್ಟು ಕರಕಲಾಗಿದ್ದಾರೆ ಎಂದು ಹೇಳಿದರು.
ಗದಗ ಜಿಲ್ಲೆಯ ಹಾಲೂರ ಗ್ರಾಮದ ಮುತ್ತಯ್ಯ ಸ್ವಾಮಿ, ಕಳೆದ ಹಲವು ವರ್ಷಗಳಿಂದ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಬಿಎಂಟಿಸಿಯ 31 ರ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
- ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
- ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ
- ರಾಜ್ಯದಲ್ಲಿ ಶೀಘ್ರವೇ 14 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದು: ಸರ್ಕಾರದಿಂದ ಸ್ಪಷ್ಟನೆ
- ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
More Stories
ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ
ರಾಜ್ಯದಲ್ಲಿ ಶೀಘ್ರವೇ 14 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದು: ಸರ್ಕಾರದಿಂದ ಸ್ಪಷ್ಟನೆ