ರಾಜ್ಯದ ಗ್ರೂಪ್ ಸಿ ಹಾಗೂ ಗ್ರೂಪ್-ಡಿ ವೃಂದದ ಸರ್ಕಾರಿ ನೌಕರರ ಪತಿ-ಪತ್ನಿ ಪ್ರಕರಣಗಳಲ್ಲಿ ವರ್ಗಾವಣೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.
ಕರ್ನಾಟಕ ಸಿವಿಲ್ ಸೇವಾ ( ಸಾಮಾನ್ಯ ನೇಮಕಾತಿ ) (ತಿದ್ದುಪಡಿ) ನಿಯಮಗಳು 2023 ಎಂದು ಕರೆಯತಕ್ಕದ್ದು ಎಂದು ತಿಳಿಸಿದೆ.
16ಎ ಸೇವೆಯೊಳಗೆ ವರ್ಗಾವಣೆ ಮೂಲಕ ನೇಮಕ ಮಾಡುವುದು ಮತ್ತು ಈ ನಿಯಮಗಳಲ್ಲಿ ಅಥವಾ ಯಾವುದೇ ಸೇವೆಯ ಅಥವಾ ಹುದ್ದೆಯ ಸಂಬಂಧದಲ್ಲಿ ರಚಿಸಲಾದ ವಿಶೇಷ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಒಬ್ಬ ಇಲಾಖಾ ಮುಖ್ಯಸ್ಥರು ಸೇವೆಗೆ ಸಂಬಂಧಿಸಿದಂತೆ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ ಮತ್ತು ಈ ಬಗ್ಗೆ ಸರ್ಕಾರವು ಹೊರಡಿಸುವ ಸಾಮಾನ್ಯ ಸೂಚನೆಗಳಿಗೆ ಒಳಪಟ್ಟು, ಪತಿ-ಪತ್ನಿ ಇಬ್ಬರೂ ಸರ್ಕಾರಿ ಸೇವೆಯಲ್ಲಿರುವ ಪ್ರಕರಣಗಳಲ್ಲಿ ಮಾತ್ರ ಗ್ರೂಪ್-ಸಿ ಅಥವಾ ಗ್ರೂಪ್-ಡಿ ಸೇವೆಗೆ ಸೇರಿದ ಒಬ್ಬರು ಸದಸ್ಯರನ್ನು ಮತ್ತು ಈ ನಿಯಮಗಳಡಿ ಪತಿ ಅಥವಾ ಪತ್ನಿ ಇವರಲ್ಲಿ ಯಾರದರೊಬ್ಬರಿಂದ ಕೋರಿಕೆ ಬಂದಲ್ಲಿ, ಹುದ್ದೆಯ ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕದಲ್ಲಿನ ಅದೇ ಕೇಡರ್ ನ ಸಮಾನ ಹುದ್ದೆಗೆ ವರ್ಗಾವಣೆಗೆ ಸೂಚಿಸಿದೆ.
- ಈ ವರ್ಗಾವಣೆಗೆ ಒಬ್ಬ ಸರ್ಕಾರಿ ನೌಕರನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಕನಿಷ್ಠ 7 ವರ್ಷ ಸೇವೆಯನ್ನು ಪೂರ್ಣಗೊಳಿಸಿರಬೇಕು.
- ವರ್ಗಾಯಿಸಬೇಕಾದ ಘಟಕ ಅಥವಾ ಸ್ಥಳದಲ್ಲಿ ಮಂಜೂರಾದ ಹುದ್ದೆಯು ಖಾಲಿ ಇರಬೇಕು.
ಅಂತಹ ವರ್ಗಾವಣೆಯನ್ನು ಒಂದು ಕೇಡರ್ ನಿಂದ ಮತ್ತೊಂದು ಕೇಡರಿಗೆ ಮಾಡತಕ್ಕದಲ್ಲ ಎಂಬುದಾಗಿ ಷರತ್ತು ವಿಧಿಸಿದೆ.50 ಸಾವಿರ ಲಂಚ ಸ್ವೀಕಾರ : ಮಡಿಕೇರಿಯ ‘ಡಿಸಿಎಫ್’ ಲೋಕಾಯುಕ್ತ ಬಲೆಗೆ
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )