ತಮ್ಮ ವಿರುದ್ಧ ವೃಥಾ ಆರೋಪ ಮಾಡಿರುವ ಐಜಿಪಿ ಡಿ ರೂಪ ( D Roopa ) ವಿರುದ್ಧ ಐಪಿಸಿ ಸೆಕ್ಷನ್ ಅಡಿ ಕೇಸು ದಾಖಲಿಸಲು ನಿರ್ಧಾರ ಮಾಡಿರುವುದಾಗಿ ರೋಹಿಣಿ ಸಿಂಧೂರಿ (Rohini Sindhuri )ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ನೀಡಿರುವ ರೋಹಿಣಿ ಸಿಂಧೂರಿ, ನನ್ನ ತೇಜೋವಧೆಗೆ ರೂಪ ಯತ್ನಿಸಿದ್ದಾರೆ. ಬಹಳ ದಿನಗಳಿಂದ ನನ್ನ ವಿರುದ್ದ ಕುತಂತ್ರ ಮಾಡುತ್ತಿದ್ದಾರೆ ಎಂದು ರೋಹಿಣಿ ಹೇಳಿದ್ದಾರೆ.ರೋಹಿಣಿ ತಮ್ಮ ಖಾಸಗಿ ಫೋಟೋಗಳನ್ನು ಯಾಕೆ? ಯಾರಿಗೆಲ್ಲಾ ಕಳಿಸುತ್ತಿದ್ದರು? – ರೂಪ
ವೈಯಕ್ತಿಕವಾಗಿ ದ್ವೇ಼ಷ, ಸುಳ್ಳು ಮತ್ತು ತೇಜೋವಧೆ ಮಾಡುವ ಎಲ್ಲಾ ಆರೋಪಗಳನ್ನು ರೂಪ ಮಾಡಿದ್ದಾರೆ . ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ನಾನು ಆಕೆಯ ವಿರುದ್ದ ಕಾನೂನು ಮೂಲಕ ಹೋರಾಟ ಮಾಡುತ್ತೇನೆ ಎಂದಿದ್ದಾರೆ
ತಾನು ಯಾವಾಗಲೂ ಸುದ್ದಿಯಲ್ಲಿ ಇರಬೇಕು ಎಂಬ ಬಯಕೆ ರೂಪಗೆ ಇದೆ. ಅದಕ್ಕಾಗಿ ಹೀಗೆ ಅಗ್ಗದ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ರೋಹಿಣಿ ದೂರಿದ್ದಾರೆ.
ಕರ್ಮ ಬಿಡುವುದಿಲ್ಲ : ಕುಸುಮಾ
ಡಿ ಕೆ ರವಿ ( D K Ravi ) ಪತ್ನಿ ಕುಸುಮಾ ಟ್ವಿಟ್ ಮಾಡಿ ರೋಹಿಣಿ ವಿರುದ್ದ ಕಿಡಿ ಕಾರಿದ್ದಾರೆ ಆಕೆ ಮಾಡಿರುವ ಕರ್ಮ ತಡವಾಗಿಯಾದರೂ ಎಂದಿಗೂ ಬಿಡುವುದಿಲ್ಲ ಎನ್ನುವುದಕ್ಕೆ ಈಗ ಬಯಲಿಗೆ ಬಂದ ಪ್ರಕರಣ ಸಾಕ್ಷಿ ಎಂದು ಕುಸುಮಾ ಪರೋಕ್ಷವಾಗಿ ಕುಟುಕಿದ್ದಾರೆ.
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
More Stories
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ