December 23, 2024

Newsnap Kannada

The World at your finger tips!

politics

ಶಾಸಕ ಸಾ.ರಾ‌ ಜೊತೆ ರಾಜಿಗೆ ರೋಹಿಣಿ ಸಿಂಧೂರಿ ಯತ್ನ?

Spread the love

ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸಾರಾ ಕಲ್ಯಾಣ ಮಂಟಪದ ಪಕ್ಕದ ಜಾಗ ಒತ್ತುವರಿಯಾಗಿದೆ ಎಂದು ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌ ವಿರುದ್ಧ ಸಮರ ಸಾರಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಎರಡು ಬಾರಿ ರಾಜಿಗೆ ಯತ್ನಿಸಿರುವುದು ಈಗ ಬೆಳಕಿಗೆ ಬಂದಿದೆ.

ಕಳೆದ ವರ್ಷದ ಡಿ.14 ರಂದು ಬೆಳಗಾವಿ ಅಧಿವೇಶನ ಕಾಲಕ್ಕೆ ಭೇಟಿ ಮಾಡಿ ಕ್ಷಮಿಸಿ ಎಂದು ಕೇಳಿದ್ದರು. ಮತ್ತೆ ಈಗ ಬೆಂಗಳೂರು ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾಗಿರುವುದರಿಂದ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾರೆ.

’ನನಗೆ ದೊರೆತ ಮಾಹಿತಿ ಹಾಗೂ ದೀಶಾಂಕ್‌ ಆ್ಯಪ್‌ನಲ್ಲಿದ್ದ ಪ್ರಾಥಮಿಕ ಸಾಕ್ಷ್ಯಾಧಾರಗಳ ಮೇಲೆ ಸರ್ವೇಗೆ ಆದೇಶಿಸಿದ್ದೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಇದು ಸಂಪೂರ್ಣ ಅಧಿಕೃತ ಕಾರ್ಯ. ಇದರಲ್ಲಿ ವೈಯಕ್ತಿಕವಾಗಿ ಏನೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂದೇಶ ಬಂದಿರುವುದನ್ನು ಸ್ವತಃ ಸಾ.ರಾ. ಮಹೇಶ್‌ ಖಚಿತಪಡಿಸಿದ್ದಾರೆ.

ಸಂಸ್ಥೆಯಿಂದ ನಾಲ್ಕನೇ ಬಾರಿ ಪತ್ರ:

ಕರೋನಾ ಸಂಧರ್ಭದಲ್ಲಿ ಹಣಕಾಸು ದುರ್ಬಳಕೆ ಆರೋಪ ಹೊತ್ತಿದ್ದ ರೋಹಿಣಿ ಸಿಂಧೂರಿ ವಿರುದ್ದ ಈಗ ಮತ್ತೊಂದು ಆರೋಪ ಕೇಳಿ ಬಂದಿದೆ. ಈ ಬಾರಿ ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳೇ ಪತ್ರ ಬರೆದಿದ್ದು, ತಮ್ಮ ಸಂಸ್ಥೆಯಿಂದ ಹೊತ್ತೊಯ್ದ ವಸ್ತುಗಳನ್ನು ಮರಳಿ ನೀಡುವಂತೆ ಕೇಳಿಕೊಂಡಿದ್ದಾರೆ.

ಒಂದು ಮಂಚ, ಒಂದು ಹಾಸಿಗೆ, ಎರಡು ಯೋಗ ಮ್ಯಾಟ್, ಎರಡು ಪ್ಲಾಸ್ಟಿಕ್ ಸ್ಟೂಲ್, ಒಂದು ಮೈಕ್ರೋ ಓವನ್ ಹೀಗೆ ಒಟ್ಟು 23 ಬಗ್ಗೆಯ ಗೃಹ ಬಳಕೆ ವಸ್ತುಗಳನ್ನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಆಡಳಿತ ತರಬೇತಿ ಸಂಸ್ಥೆಯಿಂದ ಹೊತ್ತೊಯ್ದ ಆರೋಪ ಕೇಳಿ ಬಂದಿದೆ.

ಮೈಸೂರು ಜಿಲ್ಲಾಧಿಕಾರಿಯಾಗಿ 2020 ಅಕ್ಟೋಬರ್‌ನಲ್ಲಿ ಮೈಸೂರಿಗೆ ಆಗಮಿಸಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. 40 ದಿನಗಳ ವಾಸ್ತವ್ಯದ ನಂತರ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸಕ್ಕೆ ತೆರಳಿದ ರೋಹಿಣಿ ಸಿಂಧೂರಿ ಹೋಗುವಾಗ ತಾವು ಬಳಸುತ್ತಿದ್ದ ಗೃಹ ಬಳಕೆ ವಸ್ತುಗಳ ಜೊತೆ ಆಡಳಿತ ತರಬೇತಿ ಸಂಸ್ಥೆಗೆ ಸೇರಿದ ವಸ್ತುಗಳನ್ನ ತೆರದುಕೊಂಡು ಹೋಗಿದ್ದಾರೆ ಎಂದು ಕೇಳಿ ಬಂದಿದೆ. ಇದನ್ನು ಓದು – ದೇವೇಗೌಡರನ್ನೇ ಹೊರಹಾಕಿದ್ದಾರೆ ನನ್ನನ್ನು ಬಿಡ್ತಾರಾ ಸ್ವಾಮಿ : ರೇವಣ್ಣ ವಿರುದ್ಧ ರಾಮಸ್ವಾಮಿ ವಾಗ್ದಾಳಿ

ಐಎಎಸ್ ರೋಹಿಣಿ ಸಿಂಧೂರಿ ಕಾಲದಲ್ಲಿ ಸಂಸ್ಥೆಯಿಂದ ತೆಗೆದುಕೊಂಡು ಹೋಗಲಾದ ವಸ್ತುಗಳನ್ನು ಮರಳಿಸುವಂತೆ ಸತತವಾಗಿ ನಾಲ್ಕು ಬಾರಿ ಪತ್ರ ಬರೆಯಲಾಗಿದೆ. ಮೂರು ಭಾರಿ ಪತ್ರ ಬರೆದ ನಂತರ ಪಟ್ಟಿಯಲ್ಲಿರುವ ಹಲವು ವಸ್ತುಗಳನ್ನ ವಾಪಸ್ ಮಾಡಿರುವ ಜಿಲ್ಲಾಧಿಕಾರಿ ನಿವಾಸದ ಸಿಬ್ಬಂದಿ ಇನ್ನೂ 12 ಬಗೆಯ ವಸ್ತುಗಳನ್ನ ವಾಪಸ್ ಮಾಡದೆ ಸಾತಯಿಸುತ್ತಿದ್ದಾರೆ. ಹೀಗಾಗಿ 2022 ನವೆಂಬರ್ 30 ರಂದು ನಾಲ್ಕನೇ ಬಾರಿ ಪತ್ರ ಬರೆದಿರುವ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರು ರೋಹಿಣಿ ಸಿಂಧೂರಿ ವಾಸ್ತವ್ಯದ ಸಂಧರ್ಭದಲ್ಲಿ ತೆಗೆದುಕೊಂಡು ಹೋಗಲಾಗಿರುವ ಮರಳಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!