December 22, 2024

Newsnap Kannada

The World at your finger tips!

WhatsApp Image 2023 02 04 at 6.01.23 PM

ಹಾಡ್ಲಿ ಮೇಗಳಪುರ ವೃತ್ತದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ

Spread the love

ಹಲಗೂರು:-ಮಳವಳ್ಳಿ ಕಸಬಾ ಹೋಬಳಿ ‌ವ್ಯಾಪ್ತಿಯ ಕೇಂದ್ರ ಸ್ಥಾನ ಹಾಡ್ಲಿ‌ ಸರ್ಕಲ್ ನಲ್ಲಿ ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಕಾಂಗ್ರೆಸ್ ಕಚೇರಿಯ ‌ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ನರೇಂದ್ರ ಸ್ವಾಮಿ ನಮ್ಮ ಒಂದು ಕರೆಗೆ ಓಗೊಟ್ಟು ನೀವು ಇಷ್ಟು ಜನ ಸೇರಿರುವುದು, ಈ ಚುನಾವಣೆಯಲ್ಲಿ ನಿಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿರುವ ರೀತಿ ನಮ್ಮ ಹುಮ್ಮಸನ್ನು ಹೆಚ್ಚಿಸಿದೆ. ನಿಮ್ಮಲ್ಲಿ ವಿಷಯಾ ದಾರಿತ ಚರ್ಚೆ ಮಾಡಲು ಹಲವಾರು ವಿಕಾರಗಳಿವೆ .ನಾವು ಸೋತು ಐದು ವರ್ಷ ಕಳೆಯಿತು ,ಈಗ ಅಧಿಕಾರದಲ್ಲಿರುವವರು ಮೂಡಿಸಿದ ಭರವಸೆ ಆಶ್ವಾಸನೆಗಳನ್ನು ಏನು ಮಾಡಿದ್ದಾರೆ ,ಎಂಬುದನ್ನು ನಮ್ಮಲ್ಲಿ ನಾವು ಪ್ರಶ್ನಿಸಿಕೊಳ್ಳುವುದರ ಬದಲು ಜನಸಾಮಾನ್ಯರಲ್ಲಿರುವ ತಪ್ಪು ಕಲ್ಪನೆಯನ್ನು ತೊಡೆದು ಹಾಕಬೇಕಾಗಿದೆ .ಈಗ ಅಧಿಕಾರದಲ್ಲಿರುವವರ ಬಗ್ಗೆ ಜನಾಭಿಪ್ರಾಯವಿಲ್ಲ ರಾಷ್ಟ್ರವನ್ನಾಳಿದ ಮಹಾ ನಾಯಕರ ಹೆಸರಿನಲ್ಲಿ ನಾಮ ಹಾಕಿಕೊಂಡು ನಾಟಕವಾಡುತ್ತಿದ್ದಾರೆ ಈ ಕ್ಷೇತ್ರಕ್ಕೆ ಎಷ್ಟು ಅನ್ಯಾಯವಾಗಿದೆ ಎಂದು ಹೇಳುವುದೇ ನಮ್ಮ ಮುಖಂಡರ ಕೆಲಸವಾಗಿದೆ ಎಂದರು.

ತಾಲ್ಲೂಕಿನ ರೈತರು ಅಭಿವೃದ್ಧಿಯು ಹಿತದೃಷ್ಟಿಯಿಂದ ಆರಂಭಿಸಲಾದ ಪೂರಿಗಾಲಿ ಹನಿ ನೀರಾವರಿ ಮತ್ತು ತಿಟ್ಟಮಾರನಹಳ್ಳಿ ಏತ ನೀರಾವರಿ ಕಾಮಗಾರಿಗಳು ಹಳ್ಳ ಹಿಡಿದಿವೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಆರು ವರ್ಷಗಳ ಹಿಂದೆ ಆರಂಭವಾದ ಅಂತರವಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಸರಗೂರು ಇಂದಿರಾಗಾಂಧಿ ವಸತಿ ಶಾಲೆಯ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.

ಜಲಜೀವನ್ ಮಿಷನ್ ಯೋಜನೆಯಡಿ ಹಳ್ಳಿ ಹಳ್ಳಿಗಳ ಜನರ ಕಣ್ಣಿಗೆ ಮಣ್ಣೆರಚಿ ಸರ್ಕಾರದ ಹಣವನ್ನು ಲೂಟಿ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಬಗ್ಗೆ ಮುಂದಿನ ವಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಐದು ವರ್ಷಗಳಲ್ಲಿ ಇವರದೇ ಸರ್ಕಾರ ಇದ್ದಾಗಲೂ ಒಂದೇ ಒಂದು ಯೋಜನೆಯನ್ನು ಕ್ಷೇತ್ರದ ಜನತೆಗೆ ತರದೆ, ನಾನು‌ ತಂದಿದ್ದ ಯೋಜನೆಗಳಲ್ಲಿ ‌ತಿಂದಿದ್ದೇ ಇವರ ಸಾಧನೆ ಎಂದು ವ್ಯಂಗ್ಯವಾಡಿದರು.

ಕ್ಷೇತ್ರದ ಜನರಿಗೆ ಇವರ ತಂತ್ರ ಮಂತ್ರಗಳೆಲ್ಲಾ ಇವರಿಗೆ ಅರ್ಥವಾಗಿದ್ದು ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಜಾಗೃತಿಗೊಳಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್ ಕಾರ್ಯಾದ್ಯಕ್ಷ ಮಲ್ಲಯ್ಯ ಮಾತನಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪ್ರತಿ ಹೋಬಳಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ತೆರಯಲಾಗುತ್ತಿದೆ. ಮಳವಳ್ಳಿ ಮತ ಕ್ಷೇತ್ರದ ಜನತೆ ಅಭಿವೃದ್ಧಿ ಕೆಲಸ ಮಾಡದ ಜೆಡಿಎಸ್ ದುರಾಡಳಿತಕ್ಕೆ ಸಿಲುಕಿ ಬೇಸತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಜಯ ದೊರಕಿಸಿಕೊಡಲು ಇಷ್ಟು ದೊಡ್ಡ ಮಟ್ಟದಲ್ಲಿ ಸ್ವಯಂ ಪ್ರೇರಿತರಾಗಿ ಟೊಂಕ ಕಟ್ಟಿ ನಿಂತಿರುವುದು ನಮ್ಮ ನಾಯಕರಿಗೆ ಮತ್ತಷ್ಟು ಬಲ ತಂದಿದೆ ಎಂದರು. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ : ಮಾಶಾಸನ ಹೆಚ್ಚಳಕ್ಕೂ ಕ್ರಮ – ಸಿಎಂ ಭರವಸೆ

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುಂದರ್ ರಾಜು, ಯುತ್ ಅದ್ಯಕ್ಷ ಎಚ್.ಕೆ‌.ಕೃಷ್ಣಮೂರ್ತಿ, ಟಿ.ಎ.ಪಿ.ಸಿ.ಎಂ.ಎಸ್ ಅದ್ಯಕ್ಷ ದ್ಯಾಪೇಗೌಡ, ತಾಲೋಕು ಪಂಚಾಯತಿ ಮಾಜಿ ಅದ್ಯಕ್ಷ ನಾಗೇಶ್, ಮಲ್ಲಯ್ಯ, ಸುಂದ್ರೇಶ್, ವಿಶ್ವಾಸ್, ಪುಟ್ಟಸ್ವಾಮಿ, ಮುಖಂಡರಾದ ಕುಳ್ಳಚನ್ನಂಕಯ್ಯ, ಅಂಬರೀಶ್, ಸಿ.ಪಿ.ರಾಜು, ಶಕುಂತಲಾ ಮಲ್ಲಿಕ್, ಪ್ರಭುಸ್ವಾಮಿ, ಶಿವಮಾದೇಗೌಡ, ಬೇಕರಿ ಚಂದ್ರು ಸೇರಿದಂತೆ ಹಲವರು ಇದ್ದರು.


Copyright © All rights reserved Newsnap | Newsever by AF themes.
error: Content is protected !!