ರಿಷಬ್ ಶೆಟ್ಟಿ ( Rishab Shetty ) ನಿರ್ದೇಶಿಸಿ, ನಟಿಸಿರುವ `ಕಾಂತಾರ’ ( kantara ) ಸಿನಿಮಾವನ್ನು ಆಸ್ಕರ್ಗೆ ( Oscar )ನಾಮನಿರ್ದೇಶನ ಮಾಡುವಂತೆ ಅರ್ಜಿ ಸಲ್ಲಿಸಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ತಿಳಿಸಿದೆ.
2023ರ ಆಸ್ಕರ್ ಪ್ರಶಸ್ತಿಗೆ ಕಾಂತಾರ ಸಿನಿಮಾವನ್ನು ನಾಮನಿರ್ದೇಶನ ಮಾಡುವಂತೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಸಿನಿಮಾವನ್ನು ಕಳುಹಿಸಲಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್( Hombale Films ) ಖಚಿತಪಡಿಸಿದೆ.ಖ್ಯಾತ ಗಮಕ ಕಲಾವಿದ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಕೇಶವಮೂರ್ತಿ ಇನ್ನಿಲ್ಲ
ಹೊಂಬಾಳೆ ಪ್ರೊಡಕ್ಷನ್ಸ್ ( Hombale Production ) ಸಂಸ್ಥಾಪಕ ವಿಜಯ್ ಕಿರಗಂದೂರ್ ಮಾತನಾಡಿ, ಕೊನೆಯ ಕ್ಷಣದಲ್ಲಿ ಅರ್ಜಿ ಕಳುಹಿಸಿದ್ದು, ನಾಮನಿರ್ದೇಶನಕ್ಕೆ ಪರಿಗಣಿಸುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಕಾಂತಾರ ಕಥೆಯು ಎಷ್ಟು ಬೇರೂರಿದೆ ಎಂದರೆ ಅದು ವಿಶ್ವದಾದ್ಯಂತ ಮಾರ್ಧನಿಸಿದೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.
ಕನ್ನಡದ `ಕಾಂತಾರ’ ಈಗಾಗಲೇ ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಿದ್ದು, ಎಲ್ಲಾ ಭಾಷೆಯ ಪ್ರೇಕ್ಷಕರನ್ನ ಸೆಳೆಯುತ್ತಿದೆ.
ಕೆಜಿಎಫ್ 2 ಬಳಿಕ 2022ರಲ್ಲಿ ಮೆಗಾ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದ ಕಾಂತಾರ ವಿಶ್ವದಾದ್ಯಂತ 400 ಕೋಟಿಗಿಂತಲೂ ಅಧಿಕ ಹಣ ಬಾಚಿಕೊಂಡಿದೆ. ಇದೀಗ ಆಸ್ಕರ್ನತ್ತ ಮುಖ ಮಾಡಿದೆ.
- ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ
- ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ
- ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು