December 20, 2024

Newsnap Kannada

The World at your finger tips!

74cc8ff8100e16c8dd57c1407c7c7839f73dab2e tc img preview

‘ದುಬಾರಿ’ಯಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Spread the love

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆ ಧ್ರುವ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಧ್ರುವ ಸರ್ಜಾ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲಕ್ಕೆ ಈ ಹಿಂದೆಯೇ ತೆರೆ ಎಳಿದ್ದರು. ಆದರೆ ಸಿನಿಮಾದ ಬಗ್ಗೆ ಹೆಚ್ಚೇನು ಬಿಟ್ಟುಕೊಟ್ಟಿರಲಿಲ್ಲ. ದಸರಾ ಹಬ್ಬದ ಸಮಯದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಿದ್ದ ಸಿನಿಮಾತಂಡ ಇದೀಗ ಟೈಟಲ್ ಅನೌನ್ಸ್ ಮಾಡಿದೆ.

ಅದ್ದೂರಿ, ಬಹದ್ದೂರ್, ಭರ್ಜರಿ, ಪೊಗರು ಸಿನಿಮಾದ ಬಳಿಕ ಧ್ರುವ ‘ದುಬಾರಿ’ಯಾಗಿ ಬರ್ತಿದ್ದಾರೆ. ಹೌದು ಧ್ರುವ ಸರ್ಜಾ ಹೊಸ ಸಿನಿಮಾಗೆ ದುಬಾರಿ ಎಂದು ಟೈಟಲ್ ಇಡಲಾಗಿದೆ. ‘I am very costly’ ಎನ್ನುವ ಟ್ಯಾಗ್ ಲೈನ್ ಇದೆ. ಇಂದು ಶುಕ್ರವಾರ ಬೆಳಗ್ಗೆ 5 ಗಂಟೆ ಬ್ರಾಹ್ಮಿ ಮುಹೂರ್ತದಲ್ಲಿ, ಬಸವೇಶ್ವರ ನಗರ ಆಂಜನೇಯ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಹೊಸ ಸಿನಿಮಾಗೆ ಚಾಲನೆ ನೀಡಲಾಗಿದೆ.

f8ba9ade 0fc9 4579 b09d df3c32c50759

ಹಿರಿಯ ನಟಿ ತಾರಾ ಧ್ರುವ ಸರ್ಜಾ ಹೊಸ ಸಿನಿಮಾಗೆ ಕ್ಲ್ಯಾಪ್ ಮಾಡಿ ಶುಭಹಾರೈಸಿದ್ದಾರೆ. ಈ ಸಮಯದಲ್ಲಿ ಹಿರಿಯ ನಟ ದೊಡ್ಡಣ್ಣ ಸಹ ಹಾಜರಿದ್ದರು.

ದುಬಾರಿ ನಿರ್ದೇಶಕ ನಂದಕಿಶೋರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರಕ್ಕೆ ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಟೈಟಲ್ ಮಾತ್ರ ಅನೌನ್ಸ್ ಮಾಡಲಾಗಿದೆ. ಆದರೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ ಸಿನಿಮಾತಂಡ. ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ, ಧ್ರುವ ಸರ್ಜಾಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸದ್ಯದಲ್ಲೇ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ.

Copyright © All rights reserved Newsnap | Newsever by AF themes.
error: Content is protected !!