January 11, 2025

Newsnap Kannada

The World at your finger tips!

02 1364885308 bigg boss 06

ಇಂದಿರಾ ಹತ್ಯೆಯಂತೆ ಮೋದಿಗೂ ಗಂಡಾಂತರ: ಬ್ರಹ್ಮಾಂಡ ಭವಿಷ್ಯ

Spread the love

ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಮುಂಬರುವ ಆಪತ್ತು ವಿಪತ್ತುಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.

ಹಾಸನಾಂಬೆಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರುಗಳು, “ಇಂದಿರಾ ಗಾಂಧಿಯ ಹತ್ಯೆಯ ರೀತಿಯಲ್ಲೇ ಮೋದಿಗೂ ಅಪಾಯ ಕಾದಿದೆ.” ಮೋದಿ ತಮ್ಮ ಸುತ್ತಮುತ್ತಲಿನವರ ಜೊತೆಗೆ ಎಚ್ಚರಿಕೆಯಿಂದ ಇರುವುದು ಸೂಕ್ತ. ಅವರು ತಮ್ಮ ತಾಯಿ, ಮಡದಿ ಜೊತೆಗಿದ್ದರೆ ಕ್ಷೇಮ. ತಿರುಪತಿ ದೇವಾಲಯದಲ್ಲೂ ಬದಲಾವಣೆಯಾಗಲಿದೆ”ಎಂದು ಬ್ರಹ್ಮಾಂಡ ಭವಿಷ್ಯ ನುಡಿದಿದ್ದಾರೆ.

modi1

“ಮುಖ್ಯಮಂತ್ರಿ ಹುದ್ದೆ, ಯಡಿಯೂರಪ್ಪನವರಿಗೆ ಈ ವರ್ಷಾಂತ್ಯದ ವರೆಗೆ ಮಾತ್ರ. ಅವರ ಜಾಗದಲ್ಲಿ ಇನ್ನೊಬ್ಬರು ಕೂರಲಿದ್ದಾರೆ. ಬೆಂಗಳೂರಿನಲ್ಲಿ ಜಲಕಂಟಕ ಮುಂದುವರಿಯಲಿದೆ. ಅಖಂಡ ಆಂಧ್ರ ಒಡೆದು ಹೋದಂತೆ, ಕರ್ನಾಟಕ ಎರಡು ಭಾಗವಾಗಲಿದೆ. ಒಂದಕ್ಕೆ ಬೆಳಗಾವಿ, ಇನ್ನೊಂದಕ್ಕೆ ಬೆಂಗಳೂರು ಪ್ರಮುಖ ಕೇಂದ್ರವಾಗಲಿದೆ” ಎಂದು ಭವಿಷ್ಯ ನುಡಿದಿದ್ದಾರೆ.

ಮಹಿಳೆಯರೇ ಜಗತ್ತಿನ ಅಧಿಪತಿಗಳು:

indira gandhi

ಸ್ತ್ರೀಯರು ಜಗತ್ತನ್ನು ಆಳಲಿದ್ದಾರೆ, ಮುಂದಿನ ಮೂರು ವರ್ಷ ಭರತಖಂಡ ಸೇರಿದಂತೆ ಜಗತ್ತು ಕಷ್ಟವನ್ನು ಎದುರಿಸಬೇಕಿದೆ. ಭಾರತದ ರಾಜಕೀಯ ಕ್ಷೇತ್ರದಲ್ಲಿ ಹತ್ತು ಹಲವು ಬದಲಾವಣೆಯಾಗಲಿವೆ. ಮಹಿಳೆಯರು ಪಾತ್ರ ನಿರ್ಣಾಯಕವಾಗಲಿದೆ”ಎಂದು ಹೇಳಿದ್ದಾರೆ.

“ಮುಂದಿನ ಅವಧಿಯಲ್ಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದರೆ, ಪ್ರಧಾನಿಯಾಗಿ ಮೋದಿಯವರು ಮುಂದುವರಿಯುವ ಸಾಧ್ಯತೆ ಕಮ್ಮಿ. ಪಕ್ಷದಲ್ಲೇ ಒಂದು ತಂಡ ಮೋದಿಗೆ ವಿರುದ್ದವಾಗಿ ಮಸಲತ್ತು ಮಾಡುತ್ತಿದೆ. ಅದಕ್ಕೇ ಅವರು ಇತ್ತೀಚಿನ ದಿನಗಳಲ್ಲಿ ವೈರಾಗ್ಯದ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಬ್ರಹ್ಮಾಂಡ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!