ಕಿರುತೆರೆ ಫೇಮಸ್ ನಟಿ ಜೊತೆ ಜೊತೆಯಲ್ಲಿ ಧಾರವಾಹಿ ಹೀರೊಯಿನ್ ಮೇಘಾ ಶೆಟ್ಟಿ ಅಣ್ಣ ಗೋಲಿಬಾರ್ ನಲ್ಲಿ ದುರಂತ ಸಾವು ಕಂಡ ಘಟನೆ ಮನ ಮಿಡಿಯುತ್ತದೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಗೂ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಧಾರಾವಾಹಿ ‘ಜೊತೆ ಜೊತೆಯಲಿ’ಯ ಪ್ರಮುಖ ಪಾತ್ರಧಾರಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಬದುಕಿನ ಮರೆಯಲಾಗದ ಘಟನೆಯ ಬಗ್ಗೆ ಹೇಳಿ ಕಣ್ಣೀರಿಟ್ಟಿದ್ದಾರೆ.
ಅಣ್ಣಾವರ ಅಂತಿಮ ದರ್ಶನಕ್ಕೆ ಹೋದವ….
ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿ ಮೇಘಾ ಶೆಟ್ಟಿ ನಟ ಧನಂಜಯ್ ಅವರಿಂದ ಪ್ರಶಸ್ತಿ ಪಡೆದು ಮನದಾಳದ ನೋವು ಬಿಚ್ಚಿಟ್ಟರು.
ಸ್ವಂತ ಅಣ್ಣನನ್ನು ನಾನು ಎಂದೂ ಮರೆಯಲಾರೆ.
ಅಣ್ಣ ನನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು. ಡಾಕ್ಟರ್ ರಾಜ್‌ಕುಮಾರ್ ಸಾವಿನ ದಿನ ಪಾರ್ಥಿವ ಶರೀರವನ್ನು ನೋಡಲು ಅಣ್ಣನೂ ಎಲ್ಲಾ ಅಭಿಮಾನಿಗಳಂತೆಯೇ ಹೋಗಿದ್ದರಂತೆ. ಆ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ತುಂಬಿಕೊಂಡಿದ್ದ ಕಾರಣ ಪೊಲೀಸರು ನಿಯಂತ್ರಿಸಲು ಗೋಲಿಬಾರ್ ಮಾಡಬೇಕಾಯಿತು. ಆದರೆ ವಿಧಿಯ ಆಟವೇ ಬೇರೆ ಇತ್ತು. ಆ ದಿನ ಗೋಲಿಬಾರಿನಿಂದ ನನ್ನ ಅಣ್ಣ, ಸ್ಥಳದಲ್ಲಿಯೇ ಕೊನೆಯುಸಿರೆಳೆದರು ಎಂದು ನೋವು ಹಂಚಿ ಕೊಂಡಿದ್ದಾರೆ.

ಸಿನಿಮಾ, ರಂಗಭೂಮಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಕಾರಣ ಇಂದು ಮೇಘಾ ಶೆಟ್ಟಿ ಅವರು ತುಂಬಾನೇ ಸಂತೋಷವಾಗಿದ್ದರಂತೆ. ಅಣ್ಣನ ಸ್ಥಾನ ನೀಗಿಸಲು ಮೇಘಾ ಶೂಟಿಂಗ್ ಸೆಟ್‌ನಲ್ಲಿ ಪ್ರತಿಯೊಬ್ಬರನ್ನೂ ಅಣ್ಣ ಎಂದೇ ಮಾತನಾಡಿಸುತ್ತಾರಂತೆ.
ಒಟ್ಟಿನಲ್ಲಿ ದುಃಖ ಎನ್ನುವುದು ಮರಕ್ಕಲ್ಲ, ಮನುಷ್ಯನಿಗೇ ಬರುವುದು. ಪ್ರತಿಯೊಬ್ಬರೂ ಒಂದೊಂದು ಹಂತದಲ್ಲಿ ಒಂದೊಂದು ರೀತಿಯ ನೋವನ್ನು ಅನುಭವಿಸಿರುತ್ತಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ