ಡಿಜಿಪಿ ಕಛೇರಿಯಲ್ಲೂ ಕಳ್ಳ ಗುಮಾಸ್ತರಿದ್ದಾರೆಯೇ?!

Team Newsnap
2 Min Read
13 DYSP transfers in the state : See details

ರಾಜ್ಯ ಪೋಲೀಸ್ ಮಾಹಾ ನಿರ್ದೇಶಕರ ಗಮನಕ್ಕೆ ಬಾರದು ವಿವಾದ ಹುಟ್ಟಿಸುವ ಲೇಟರ್ ಸಿದ್ದಪಡಿಸಿ ಡಿಸಿ , ಎಸ್ಪಿ ಗಳಿಗೆ ರವಾನೆ ಮಾಡಿರುವುದು ಡಿಜಿಪಿ ಕಚೇರಿಯಲ್ಲಿರುವ ಕಳ್ಳ ಗುಮಾಸ್ತ ನೊಬ್ಬ!

ಸ್ವತಃ ಡಿಜಿಪಿ ಪ್ರವೀಣ್ ಸೂದ್ ಹೇಳಿಕೆ ವಿವಾದ ಸೃಷ್ಟಿಯಾಗುವ ಯಾವುದೇ ಪತ್ರವನ್ನು ನಾವು ಕಳಿಸಿಲ್ಲ. ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುವ ಆ ಪತ್ರ ನಕಲಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಏನಿದು ವಿವಾದಿತ ಅದೇಶದ ಪತ್ರ?

ರಾಜ್ಯದ ಎಲ್ಲ ಮಸೀದಿಗಳಲ್ಲೂ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಿದ್ದಾ ರೆ. ಹಾಗಾಗಿ ಅವುಗಳನ್ನು ತೆರವುಗೊಳಿಸಬೇಕೆಂದು ನವೆಂಬರ್ 2ರಂದು ಪೋಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಎಲ್ಲಾ ಪೋಲೀಸ್ ಕಮೀಷನರ್ ಹಾಗೂ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದ್ದಾರೆ ಎನ್ನಲಾದ ಪ್ರತಿ ನಕಲಿ ಬಹಿರಂಗವಾಗಿದೆ.

ವಕೀಲರಿಂದ ದೂರು

ಬೆಂಗಳೂರಿನ ವಕೀಲ ಹರ್ಷ ಮುತಾಲಿಕ್ ಸೆಪ್ಟೆಂಬರ್ 30ರಂದು ಪೋಲೀಸ್ ಮಹಾನಿರ್ದೇಶಕರಿಗೆ, ಪತ್ರ ಬರೆದು ಅದರಲ್ಲಿ ‘ಮಸೀದಿಗಳಲ್ಲಿ ಅನಧಿಕೃತವಾಗಿ ಧ್ವನಿವರ್ಧಕಗಳನ್ನು ಬಳಸಿಕೊಳ್ಳುತ್ತಿದ್ದಾರೆ. ನಮಾಜ್‌ಗಳನ್ನು ಮಾಡುವ ಸಮಯದಲ್ಲಿ ಮತ್ತು ಪ್ರತೀ ಶುಕ್ರವಾರ ವಿಶೇಷ ವ್ಯಕ್ತಿಯೊಬ್ಬರು ಮಾತನಾಡುತ್ತಾರೆ. ಆದರೆ ಸುಪ್ರೀಂ ಕೋರ್ಟ್‌ನ ಆದೇಶದನ್ವಯ ಈ ರೀತಿಯಾಗಿ ಧ್ವನಿವರ್ಧಕ ಹಾಗೂ ಮೈಕ್ರೋಫೋನ್‌ಗಳನ್ನು ಅನಧಿಕೃತವಾಗಿ ಬಳಸಿಕೊಳ್ಳುವುದು ತಪ್ಪು. ಆದರೆ ಪೋಲೀಸ್ ಇಲಾಖೆಯಾಗಲೀ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲೀ ಯವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯಾಗುತ್ತಿದೆ’ ಎಂದು ಡಿಜಿಪಿಯವರಿಗೆ ಮನವಿ ಪತ್ರ ನೀಡಿದ್ದರು.

dgp letter

ಈ ವಿಷಯಕ್ಕೆ ಸಂಬಂಧಿಸಿದಂತೆ ಪೋಲಿಸ್ ಮಹಾನಿರ್ದೇಶಕರು ಎಲ್ಲಾ ಮಸೀದಿಗಳಲ್ಲಿನ ಧ್ವನಿವರ್ಧಕಗಳ ಮೇಲೆ ನಿರ್ಬಂಧ ಹೇರಿ ಅವುಗಳನ್ನು ತೆರವುಗೊಳಿಸಬೇಕೆಂದು ಆದೇಶಿಸಿದ ಪತ್ರದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆದರೆ ಈ ಆದೇಶ ಪ್ರತಿಯ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಆದೇಶವನ್ನು ಪೋಲೀಸ್ ಮಹಾನಿರ್ದೇಶಕರು ಆದೇಶವನ್ನು ಹೊರಡಿಸಿಲ್ಲ. ಕಛೇರಿಯಲ್ಲಿನ ಕಿಡಿಗೇಡಿ, ಕಳ್ಳ ಗುಮಾಸ್ತರು ಪ್ರವೀಣ್ ಸೂದ್ ಅವರ ಅನುಮತಿಯಿಲ್ಲದೇ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಧ್ವನಿವರ್ಧಕಗಳನ್ನು ತೆಗೆಯುವಂತೆ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳ್ಳ ಗುಮಾಸ್ತರ ಪತ್ತೆಗೆ ಕ್ರಮ

ಮುಂದಿನ ಆದೇಶ ನೀಡುವವರೆಗೆ ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು. ಅಂತಹ ಯಾವುದೇ ನಿರ್ಧಾರವನ್ನು ಪೋಲೀಸ್ ಇಲಾಖೆ ಮಾಡಿಲ್ಲ. ಇಂತಹ ಪತ್ರವನ್ನು ನನ್ನ ಗಮನಕ್ಕೆ ತಾರದೇ ರವಾನೆ ಮಾಡಿದ ಗುಮಾಸ್ತರನ್ನು ಪತ್ತೆ ಮಾಡಲಾಗುವುದು ಎಂದು ಡಿಜಿಪಿ ಹೇಳಿದ್ದಾರೆ.

Share This Article
Leave a comment